ಬೆಂಗಳೂರು: ಕಾಂಗ್ರೆಸ್​​ ಒಡೆದ ಮನೆಯಾಗಿದೆ,ಅವರ ಪಕ್ಷದವರೇ ಈಗ ತಿರುಗಿಬಿದ್ದಿದ್ದಾರೆ ಎಂದು ಸಚಿವ ಆರ್​.ಅಶೋಕ್​​ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಈಗ ಒಡೆದ ಮನೆಯಾಗಿದೆ, ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ.ರಮ್ಯಾ ಅವರು ಈಗ ಒಂದು ಬಾಗಿಲು ತೆಗೆದಿದ್ದಾರೆ.ಡಿಕೆಶಿ ಸಿದ್ದರಾಮಯ್ಯ ರದ್ದು ಒಂದೊಂದು ಬಾಗಿಲು ಇತ್ತು.ಈಗ ಮೂರನೇಯ ಬಾಗಿಲು ರಮ್ಯಾ ತೆಗೆದಿದ್ದಾರೆ ಎಂದು ಹೇಳಿದರು.
ರಮ್ಯಾ v/s ಡಿಕೆಶಿ ಟ್ವಿಟ್ ವಾರ್ ವಿವಾದ ಕುರಿತು ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್​​ನಲ್ಲಿ ಇನ್ನು ಎಷ್ಟು ಬಾಗಿಲು ತೆರೆಯಲಾಗುವುದು ಎಂದು ನೋಡಬೇಕಿದೆ ಎಂದು ಹೇಳಿದ್ದಾರೆ.
ಪಿಎಸ್ ಐ ನೇಮಕಾತಿ ಅಕ್ರಮ ಹಗರಣದಲ್ಲಿ ರಕ್ಷಣೆ ಪಡೆಯಲು ಎಂ.ಬಿ. ಪಾಟೀಲ್ ಅವರನ್ನು ಸಚಿವ ಅಶ್ವತ್ಥನಾರಾಯಣ ಭೇಟಿ ಮಾಡಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆಮಾಜಿ ಸಂಸದೆ ರಮ್ಯಾ ತಿರುಗೇಟು ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಇಷ್ಟು ದಿನ ರಮ್ಯಾ ಎಲ್ಲಿದ್ದರೂ ಅಂತ ನನಗೂ ಗೊತ್ತಿಲ್ಲ. ಸಡನ್ನಾಗಿ ಪ್ರತ್ಯಕ್ಷರಾಗಿ ದೊಡ್ಡವರ ವಿರುದ್ಧ ಮಾತನಾಡುತ್ತಾ ತಾವು ಅಸ್ತಿತ್ವದಲ್ಲಿದ್ದೇನೆ ಎಂದು ತೋರಿಸಿಕೊಳ್ಳುತ್ತಾರೆ ಎಂದು ಟ್ವೀಟ್​​ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ಈ ಹುಡುಗ ಮೊಹಮ್ಮದ್ ನಲಪಾಡ್, ಶಾಸಕ ಹ್ಯಾರಿಸ್ ಪುತ್ರ ಯುವ ಕಾಂಗ್ರೆಸ್ ಅಧ್ಯಕ್ಷ(ಜಾಮೀನಿನ ಮೇಲೆ) ಹೊರಗೆ ತಿರುಗಾಡಿಕೊಂಡಿದ್ದು ಈತ ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾನೆ. ವಾಹ್ ಎಂದು ಟ್ವೀಟಿಸಿ ಚಾಟಿ ಏಟು ಬೀಸಿದ್ದರು. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 8 =
Remember me
