ಬೆಂಗಳೂರು:ಹೊಸಪೇಟೆಯ ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ ಕಳಚಿ ಬಿದ್ದಿದ್ದು, ಅಧಿಕ ನೀರು ಡ್ಯಾಂನಿಂದ ಹೊರಹೋಗುತ್ತಿದೆ. ಸದ್ಯ ಈ ವಿಷಯ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಎದುರು ಗುಡುಗಿದ್ದ ಆರ್​. ಅಶೋಕ, ಇದೀಗ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್​ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಮಂಡ್ಯ ವಿ.ವಿ.ಗೆ ಮಧು ಜಿ.ಮಾದೇಗೌಡ ನೇಮಕ: ವಿದ್ಯಾವಿಷಯಕ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ ಆದೇಶ
“ನಾಡಿನ ರೈತರ ಜೀವನಾಡಿ ಆಗಿರುವ ಜಲಾಶಯಗಳ ನಿರ್ವಹಣೆ ಬಗ್ಗೆ ರಾಜ್ಯ ಕಾಂಗ್ರೆಸ್​ ಸರ್ಕಾರದ ಅಸಡ್ಡೆ, ನಿರ್ಲಕ್ಷ್ಯದಿಂದ ತುಂಗಭದ್ರಾ ಜಲಾಶಯದಲ್ಲಿ ದೊಡ್ಡ ಅನಾಹುತ ಸಂಭವಿಸಿರುವ ಬೆನ್ನಲ್ಲೇ, ಈಗ ಮತ್ತೊಂದು ಅಣೆಕಟ್ಟು ಅಪಾಯದ ಅಂಚಿನಲ್ಲಿರುವುದು ಬೆಳಕಿಗೆ ಬಂದಿದೆ. ಗದಗ ಮತ್ತು ವಿಜಯನಗರ ಜಿಲ್ಲೆಗಳ ನೀರಾವರಿಗಾಗಿ ಅನುಷ್ಠಾನಗೊಂಡ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಹಮ್ಮಗಿ ಬ್ಯಾರೇಜ್​ನ ಗೇಟ್​ಗಳ ದುರಸ್ತಿಗೆ ಬಂದಿವೆ. ಒಂದು ವರ್ಷದ ಹಿಂದೆಯೇ ಮುನ್ಸೂಚನೆ ನೀಡಿದ್ದರೂ ಸಹ ಸರ್ಕಾರ ಇದುವರೆಗೂ ಗೇಟ್​ ದುರಸ್ತಿ ಕಾರ್ಯ ಆರಂಭಿಸಿಲ್ಲ” ಎಂದು ಆರೋಪಿಸಿದರು.
“ಸಿಎಂ ಸಿದ್ದರಾಮಯ್ಯನವರೇ ಹಮ್ಮಗಿ ಬ್ಯಾರೇಜ್​ನ 5-6 ಗೇಟುಗಳು ಶಿಥಿಲಗೊಂಡಿರುವ ವರದಿ ಇದೆ. ತಮ್ಮ ಪಾರ್ಟ್​ ಟೈಮ್​ ನೀರಾವರಿ ಸಚಿವರಾದ ಡಿಕೆಶಿ ಅವರಿಗೆ ಇಲಾಖೆ ನಿರ್ವಹಿಸಲು ಪುರುಸೊತ್ತಿಲ್ಲದಿದ್ದರೆ, ನೀರಾವರಿ ಖಾತೆಯನ್ನು ಬೇರೆ ಯಾರಾದರೂ ಸಮರ್ಥ ಸಚಿವರಿಗೆ ಒಪ್ಪಿಸಿ. ಅದು ಬಿಟ್ಟು ಒಬ್ಬ ಪಾರ್ಟ್​ ಟೈಮ್​ ಮಂತ್ರಿ, ಪುಟ್​ ಟೈಮ್ ಕೆಪಿಸಿಸಿ ಅಧ್ಯಕ್ಷರಿಗೆ ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಅಂತಹ ಪ್ರಮುಖ ಖಾತೆ ನೀಡಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡುವುದು ಬೇಡ. ನಿಮ್ಮ ರಾಜಕೀಯ ತೆವಲಿಗೆ ಡ್ಯಾಂ ನಿರ್ಲಕ್ಷಿಸಿ ಅನ್ನದಾತರು, ಜನ ಸಾಮಾನ್ಯರ ಬದುಕನ್ನು ಅಪಾಯಕ್ಕೆ ತಳ್ಳಬೇಡಿ” ಎಂದು ಕಿಡಿಕಾರಿದರು.
ನಮ್ಮಿಬ್ಬರದ್ದು ಸಖತ್ ಜೋಡಿ… ಸ್ಟಾರ್​ ನಟನ ಬಗ್ಗೆ ನಟಿ ಕೀರ್ತಿ ಸುರೇಶ್​ ಬಿಚ್ಚುಮಾತು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × four =
Remember me
