ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಜಾತಿಯನ್ನು ಮೆಚ್ಚಿಸಲು ಜಾತಿ ಗಣತಿ ವರದಿ ಸ್ವೀಕರಿಸಿ, ಲಿಂಗಾಯತರು ಹಾಗೂ ಒಕ್ಕಲಿಗರನ್ನು ತುಳಿಯಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ್ ಕಿಡಿಕಾರಿದರು.
‘ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಸಮೀಕ್ಷೆಯೇ ಪರಿಪೂರ್ಣವಾಗಿಲ್ಲ ಎಂಬ ಅಪಸ್ವರಗಳಿವೆ. ಆದಾಗ್ಯೂ ವರದಿಯನ್ನು ಸ್ವೀಕರಿಸಿ ಬಿಡುಗಡೆ ಮಾಡಲಿ. ಕಾಂಗ್ರೆಸ್ ನವರ ಬಂಡವಾಳ ಏನೆಂಬುದು ಬಯಲಾಗಲಿದೆ. ಜಾತಿ ಗಣತಿ ವರದಿ ಮುಂದಿಟ್ಟುಕೊಂಡು ಬಿಜೆಪಿ ಆಡಳಿತಾವಧಿಯಲ್ಲಿ ಮೀಸಲು ಬದಲಾವಣೆಗೆ ಕೈಹಾಕಿದರೆ ಜನರೇ ರೊಚ್ಚಿಗೇಳುತ್ತಾರೆ’ ಎಂದು ಆರ್.ಅಶೋಕ್ ಎಚ್ಚರಿಸಿದರು.
ಇದನ್ನೂ ಓದಿ:ಗ್ರಾಹಕರಿಗೆ ತಟ್ಟಲಿದೆಯಾ ಹಾಲಿನ ದರ ಏರಿಕೆ ಬಿಸಿ? ಬೆಲೆ ಏರಿಕೆಗೆ ಪಟ್ಟು ಹಿಡಿದ ಒಕ್ಕೂಟ!
‘ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಗೊಂದಲದ ಗೂಡಾಗಿವೆ. ಒಬ್ಬೊಬ್ಬ ಸಚಿವ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಎಲ್ಲರಿಗೂ ಉಚಿತ ಎಂದು ಹೇಳಿದವರು ಷರತ್ತುಗಳನ್ನು ವಿಧಿಸುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಎಲ್ಲರಿಗೂ ಮಾಸಿಕ 2000 ರೂ. ಎಂಬ ಭರವಸೆ ನೀಡಿ ತೆರಿಗೆ ಪಾವತಿದಾರರಿಗೆ ಇಲ್ಲವೆನ್ನುತ್ತಿದ್ದಾರೆ. ಉಚಿತ ವಿದ್ಯುತ್ 200 ಯೂನಿಟ್ ಮೇಲ್ನೋಟಕ್ಕೆ ಬಿಂಬಿಸಿ ಬೇರೆ ಲೆಕ್ಕಾಚಾರ ಹಾಕಿದ್ದಾರೆ. ಜತೆಗೆ ವಿದ್ಯುತ್ ದರ ಏರಿಕೆ ಮಾಡಿ ಜನರಿಗೆ ವಂಚಿಸಿದ್ದಾರೆ’ ಎಂದು ಆರೋಪ ಮಾಡಿದ್ದಾರೆ.
ಗೆದ್ದ ಹುಮ್ಮಸ್ಸಿನಲ್ಲಿ ಮಂತ್ರಿಗಳು ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಈ ಧೋರಣೆಯನ್ನು ಖಂಡಿಸುತ್ತದೆ. ಜನರಿಗೆ ಧ್ವನಿಯಾಗಿ ಬಿಜೆಪಿ ಕೆಲಸ ಮಾಡಲಿದೆ ಎಂದು ಆರ್.ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪುತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − four =
Remember me
