ಕೊಳ್ಳೇಗಾಲ:ಎಟಿಎಂ ಉಪಯೋಗಿಸಲು ಬರದೆ ಇರುವವರು ಅಪರಿಚಿತರ ಕೈಗೆ ಕಾರ್ಡ್ ಕೊಟ್ಟರೆ ಆಗೋ ಮೋಸಕ್ಕೆ ಈ ಪ್ರಕರಣ ಉದಾಹರಣೆ‌.
ಪಟ್ಟಣದ ಕೆನರಾ ಬ್ಯಾಂಕ್ ಎಟಿಎಂಗೆ ಕಳೆದ ಎರಡ್ಮೂರು‌ ದಿನಗಳ ಹಿಂದೆ ಜಾಗೇರಿ ಗ್ರಾಮದ‌ ಶೇಶುರಾಜ್ ಹೋಗಿದ್ದರು. ಎಟಿಎಂ ಬಳಕೆ ಮಾಡೋಕೆ ಬಾರದ ಕಾರಣ ಅಲ್ಲೇ ಇದ್ದ ಅಪರಿಚಿತನ ಕೈಗೆ ಕಾರ್ಡ್ ಕೊಟ್ಟು 500 ರೂ. ಪಡೆದು ಕೊಂಡು ಮನೆಗೆ ತೆರಳಿದ್ದರು.
ಒಂದು ದಿನದ ಬಳಿಕ ಇವರಿಗೆ ನಿಮ್ಮ ಖಾತೆಯಿಂದ 19 ಸಾವಿರ ರೂ. ಡ್ರಾ ಆಗಿದೆ ಎಂಬ ಮೆಸೇಜ್ ಮೊಬೈಲ್​ಗೆ ಬಂದಿದೆ. ತನ್ನ ಬಳಿಯೇ ಎಟಿಎಂ ಕಾರ್ಡ್ ಇದ್ದರೂ‌ ಹೇಗೆ ಹಣ ಡ್ರಾ ಆಗಿದೆ ಎಂದು ಶೇಶುರಾಜ್​ಗೆ ಆಶ್ಚರ್ಯವಾಗಿದೆ‌. ಜೇಬಲ್ಲಿದ್ದ ಎಟಿಎಂ ಕಾರ್ಡ್ ತೆಗೆದು ನೋಡಿದಾಗ ಅದು ಬೇರೆ ಕಾರ್ಡ್ ತನ್ನದಲ್ಲ ಎಂದು ಗೊತ್ತಾಗಿದೆ. ಈ‌ ಹಿಂದೆ ಯಾರ ಕೈಗೆ ಕಾರ್ಡ್ ಕೊಟ್ಟಿದ್ದೆ ಅನ್ನೋದು ನೆನಪಾಗಿದೆ.
ಮಾ.24ರಂದು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಶೇಶುರಾಜ್ ದೂರು ದಾಖಲಿಸಿದ್ದಾರೆ. ಎರಡ್ಮೂರು ದಿನಗಳ‌ ಹಿಂದೆ ಎಟಿಎಂಗೆ ತೆರಳಿ 500 ರೂ. ತೆಗೆದುಕೊಡೋಕೆ ಅಂತ ಅಪರಿಚಿತ ವ್ಯಕ್ತಿಗೆ ಕಾರ್ಡ್ ಕೊಟ್ಟಿದ್ದೆ. ಆಗ ಅವನು ನನ್ನ ಕಾರ್ಡ್ ಬದಲಾಯಿಸಿ ಬೇರೆ ಕಾರ್ಡ್ ಕೊಟ್ಟಿದ್ದಾನೆ. ಇದು ನನಗೆ ಗೊತ್ತಾಗಿಲ್ಲ‌.‌ ಒಂದು ದಿನದ ಬಳಿಕ ಯಳಂದೂರಿನ ಎಟಿಎಂವೊಂದರಲ್ಲಿ 19 ಸಾವಿರ ರೂ.ಡ್ರಾ ಮಾಡಿದ್ದಾನೆ. ಅವನನ್ನು ಹುಡುಕಿ ಹಣ ವಾಪಸ್ ಕೊಡಿಸಿ ಎಂದು ಕೋರಿದ್ದಾರೆ.
ಗ್ರಾಹಕರಿಗೆ ಮತ್ತೆ ಕಹಿ ಸುದ್ದಿ: ನಾಲ್ಕೇ ದಿನದಲ್ಲಿ 3ನೇ ಬಾರಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ, ಇಂದಿನ ದರ ಹೀಗಿದೆ…

ಸಿನಿಮಾ ನೋಡ್ಕೊಂಡು ಆಟೋ ಹತ್ತಿದ ವೈದ್ಯೆ ಮೇಲೆ ಗ್ಯಾಂಗ್​ರೇಪ್: ಇಬ್ಬರು ಅಪ್ರಾಪ್ತರು ಸೇರಿ ಐವರು ಅಂದರ್​​

ಕಾಶ್ಮೀರ್​ ಫೈಲ್ಸ್​ ಚಿತ್ರಕ್ಕೆ ತೆರಿಗೆ ಮುಕ್ತಕ್ಕೆ ಬೇಡಿಕೆ: ಸಿಎಂ ಕೇಜ್ರಿವಾಲ್​ ಉತ್ತರ ಕೇಳಿ ದಂಗಾದ ಬಿಜೆಪಿಗರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + 13 =
Remember me
