ಬಾಗಲಕೋಟೆ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಪ್ರಾಡಕ್ಟ್ ಅಂತಾ ಹೆಮ್ಮೆಯಿಂದ ಹೇಳ್ತಿರಲ್ಲಾ, ಅವರು ಜನತಾದಳ ಒದ್ದು ಹೊರಬಂದಿದ್ದೇಕೆ? ಮೊದಲು ಅದಕ್ಕೆ ಉತ್ತರ ಕೊಡಿ ಎಂದು ಸಚಿವ ಕೆ.ಎಸ್​. ಈಶ್ವರಪ್ಪ ಅವರು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.
ಬೊಮ್ಮಾಯಿ ನಮ್ಮ ಪ್ರಾಡಕ್ಟ್ ಎಂದಿದ್ದ ಕುಮಾರಸ್ವಾಮಿ ಹೇಳಿಕೆಗೆ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಜನತಾದಳವನ್ನು ಒದ್ದು ಬಿಜೆಪಗೆ ಬಂದರು. ಮೊದಲು ಅದರ ಬಗ್ಗೆ ಹೇಳಿ ಕುಮಾರಸ್ವಾಮಿಯವರೇ… ಪಕ್ಷ, ಸಂಘಟನೆ, ಸಿದ್ದಾಂತ ಒಪ್ಪಿದವರಿಗೆ ಯಾವ ಸ್ಥಾನಮಾನವಾದರೂ ಕೊಡ್ತೇವಿ ಅನ್ನೋದಕ್ಕೆ ಬೊಮ್ಮಾಯಿ ಸಾಕ್ಷಿ ಎಂದು ತಿರುಗೇಟು ನೀಡಿದರು.
ಇಲ್ಲಿ ಬಂದು ತಲೆ ಹರಟೆ ಮಾಡಿದ್ರೆ ಚರಂಡಿಗೆ ಹೋಗಿ ಉಗಿತೇವಿ, ವಾಂತಿ ಮಾಡ್ತೇವಿ, ನಮಗೆ ಜೀರ್ಣ ಮಾಡಿಕೊಳ್ಳುವ ಶಕ್ತಿ ಜಾಸ್ತಿ ಇದೆ. ನಮ್ಮ ಕಡೆ ಬಂದ ಯಾವ ಕಾರ್ಯಕರ್ತರನ್ನು ತಿರಸ್ಕಾರ ಭಾವನೆಯಿಂದ ನೋಡಲ್ಲ. ಕುಮಾರಸ್ವಾಮಿ ಅವರೇ ನಿಮ್ಮಿಂದ ಇನ್ನು ಎಷ್ಟು ಜನ ಬರ್ತಾರೆ ಗೊತ್ತಿಲ್ಲ. ಜನತಾದಳ ಪಾರ್ಟಿ ಮುಚ್ಚಿಬಿಡ್ತೇವಿ ಅಂತಾ ಒಪ್ಪಿಕೊಂಡು ಬಿಡಿ. ಬಿಜೆಪಿಯಲ್ಲೇ ನಮ್ಮವರಿಗೆ ಸ್ಥಾನಮಾನ ಸಿಗುತ್ತದೆ. ಅದಕ್ಕೆ ಜನತಾದಳ ಯಾಕೆ ಇರಬೇಕು ಅಂತ ತೀರ್ಮಾನ ಮಾಡಿ. ಆನಂದ ಪಡಿ. ಆದ್ರೆ ನಿಮ್ಮ ಶಾಸಕರನ್ನು ಉಳಿಸಿಕೊಳ್ಳಿ, ಪಕ್ಷ ಕಟ್ಟಿಕೊಳ್ಳಿ ಎಂದು ಎಚ್ಡಿಕೆಗೆ ಕಿವಿಮಾತು ಹೇಳಿದರು.(ದಿಗ್ವಿಜಯ ನ್ಯೂಸ್​)
ಚಿಕನ್​, ಮಟನ್​ಗಿಂತಲೂ ಗೋಮಾಂಸವನ್ನೇ ಹೆಚ್ಚು ತಿನ್ನಿ- ಬಿಜೆಪಿಗೆ ಶಾಕ್​ ಕೊಟ್ಟ ಸಂಸದ

ಯುವತಿಯರನ್ನು ನಂಬಿಸಿ, ಬೆದರಿಸಿ ಅಶ್ಲೀಲ ವಿಡಿಯೋ ಚಿತ್ರೀಕರಣ: ಪೊಲೀಸ್ ಬಲೆಗೆ ಬಿದ್ದ ನಟಿ ನಂದಿತಾ!

ಅಶ್ಲೀಲ ವಿಡಿಯೋ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಮುಂಬೈ ಪೊಲೀಸರಿಗೆ ನಟಿಯಿಂದ ಬಿಗ್​ ಆಫರ್!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + twelve =
Remember me
