ಬಾಗಲಕೋಟೆ:ಬೈಕ್ ಮೇಲೆ ಬಂದ ಇಬ್ಬರು ಖದೀಮರು ನವರಾತ್ರಿ ಪೂಜೆಗೆ ತೆರಳುತ್ತಿದ್ದ ಯುವತಿಯರಿಬ್ಬರ ಮೇಲೆ ದಾಳಿ ನಡೆಸಿ, ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ ಘಟನೆ ಹುನಗುಂದ ಪಟ್ಟಣದ ಜಡಿಮಠ ಅಜ್ಜನವರ ಶಾಪಿಂಗ್ ಮಹಲ್ ಹತ್ತಿರ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಿನ್ನೆ (ಸೆ.28) ಬೆಳಗ್ಗೆ 4.30 ರಿಂದ 5 ಗಂಟೆ ನಡುವಿನ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸುಧಾ ಮತ್ತು ಅರ್ವತಿ ಎನ್ನುವ ಯುವತಿಯರಿಬ್ಬರು ಪೂಜೆಯ ತಟ್ಟೆ ಹಿಡಿದುಕೊಂಡು ಹೊರಟಿದ್ದರು. ಈ ವೇಳೆ ಖದೀಮರಿಬ್ಬರು ಬೈಕ್​ನಲ್ಲಿ ಬಂದು ಯುವತಿಯರ ಬಳಿ ದಿಢೀರನೇ ವಾಹನ‌ ನಿಲ್ಲಿಸುತ್ತಾರೆ. ಆಗ ಇಬ್ಬರು ಯುವತಿಯರು ಓಡುತ್ತಾರೆ. ಓರ್ವ ಖದೀಮ ಬೈಕ್​ನಿಂದ ಕೆಳಗಿಳಿದು ಸುಧಾ ಎನ್ನುವ ಯುವತಿಯ ಕತ್ತಿಗೆ ಕೈಹಾಕಿ ಎಳೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವತಿ ಕೊಸರಿಕೊಂಡು ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ.
ಸರ ಕಿತ್ತುಕೊಳ್ಳಲು ಪ್ರಯತ್ನ ನಡೆಸಿದರೂ ಅದು ಯಶಸ್ವಿಯಾಗಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯುವತಿ ಯಾವುದೇ ದೂರು ಕೊಟ್ಟಿಲ್ಲ. ಬೈಕ್​ನಲ್ಲಿ ಬಂದಿದ್ದವ ಯಾರೆಂಬುದರ ಬಗ್ಗೆ ಮಾಹಿತಿ ಇಲ್ಲ. ನವರಾತ್ರಿ ಹಿನ್ನಲೆಯಲ್ಲಿ ನಸುಕಿನ ಜಾವ ಯುವತಿಯರಿಬ್ಬರು ಬನ್ನಿಗಿಡಕ್ಕೆ ಪೂಜೆ ಸಲ್ಲಿಸಲು ಹೋಗುತ್ತಿದ್ದರು. ಹೀಗೆ ಪೂಜೆಗೆ ಹೋಗುವ ವೇಳೆ ಈ ಘಟನೆ ನಡೆದಿದ್ದು, ಇದರಿಂದ ಸ್ಥಳೀಯ ಮಹಿಳೆಯರಲ್ಲಿ ಆತಂಕ ಮೂಡಿಸಿದೆ.
ಬಾಗಲಕೋಟೆ: ಬೈಕ್ ಮೇಲೆ ಬಂದ ಇಬ್ಬರು ಖದೀಮರು ನವರಾತ್ರಿ ಪೂಜೆಗೆ ತೆರಳುತ್ತಿದ್ದ ಯುವತಿಯರಿಬ್ಬರ ಮೇಲೆ ದಾಳಿ ನಡೆಸಿ, ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ ಘಟನೆ ಹುನಗುಂದ ಪಟ್ಟಣದ ಜಡಿಮಠ ಅಜ್ಜನವರ ಶಾಪಿಂಗ್ ಮಹಲ್ ಹತ್ತಿರ ನಡೆದಿದೆ.#Bagalkot#Miscreants#ChainSnatching#NavaratriPooja#BagalkotPolicepic.twitter.com/0ms0oEuzLZ
— Vijayavani (@VVani4U)September 29, 2022

ತಾತನಾದ ಜನಾರ್ದನ ರೆಡ್ಡಿ; ಬಳ್ಳಾರಿಗೆ ಭೇಟಿ ನೀಡಲು ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್​ಗೆ ಮನವಿ

ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಿರ್ಮಲಾ ಸೀತಾರಾಮನ್

ಕಾಂಡೋಮ್​ ಬೇಕಾ ಎಂದು ವಿದ್ಯಾರ್ಥಿನಿಯರನ್ನು ಕೇಳಿದ ಮಹಿಳಾ ಅಧಿಕಾರಿಗೆ ಎದುರಾಯ್ತು ಸಂಕಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
