ಬಾಗಲಕೋಟೆ:ಬೀಳಗಿ ತಾಲೂಕಿನ ಬಾಡಗಂಡಿ ಬಳಿ ರಾಷ್ಟ್ರೀಯ ಹೆದ್ದಾರಿ 218ರ ರಸ್ತೆಯಲ್ಲಿ ಕ್ಯಾಂಟರ್ ಪಂಚರ್ ತಿದ್ದಿಸಲು ನಿಂತ ಪ್ರಯಾಣಿಕರ ಮೇಲೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವಿಗೀಡಾದ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.
ಮೃತರಲ್ಲಿ ರಜಾಕ್ ಹಾಗೂ ರಾಮಸ್ವಾಮಿ ಎಂಬುವವರು ಬೀಳಗಿ ತಾಲೂಕಿನ ಗೋವಿನದಿನ್ನಿ ಗ್ರಾಮದವರಾಗಿದ್ದು, ನಾಶಿರ್‌ ಮುಲ್ಲಾ, ಮಲ್ಲಪ್ಪ‌ ಮಳಲಿ ಬೀಳಗಿ ಪಟ್ಟಣದವರಾಗಿದ್ದು ಸರಿಸುಮಾರು 38-40 ಆಸುಪಾಸಿನ ವಯೋಮಾನದವರು. ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕ್ಯಾಂಟರ್​ನಲ್ಲಿ ಈರುಳ್ಳಿ ತುಂಬಿಕೊಂಡು ಬೆಂಗಳೂರಿಗೆ ಮಾರಾಟ ಮಾಡಲು ಹೊರಟಿದ್ದರು. ವಿಜಯಪುರ ಜಿಲ್ಲೆ ಕಾರಜೋಳ ಗ್ರಾಮದಿಂದ ಕ್ಯಾಂಟರ್ ಬೆಂಗಳೂರಗೆ ಹೊರಟಿತ್ತು. ಬೀಳಗಿ ತಾಲೂಕಿನ ಬಾಡಗಂಡಿ ಬಳಿ ವಾಹನ ಪಂಚರ್ ಆಗಿದೆ. ಬಳಿಕ ಚಾಲಕ ನಾಶೀರ್ ಮುಲ್ಲಾ ವಾಹನ ಮಾಲೀಕ ಮಲ್ಲಪ್ಪ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾನೆ. ಬೀಳಗಿ ಪಟ್ಟಣದಿಂದ ರಾಮಸ್ವಾಮಿ ಎನ್ನುವ ವ್ಯಕ್ತಿಯ ಟಂಟಂನಲ್ಲಿ ಟೈರ್ ಹಾಕಿಕೊಂಡು ಪಂಚರ್​ ಆಗಿದ್ದ ಸ್ಥಳಕ್ಕೆ ಒಟ್ಟು ಐವರು ತೆರಳಿದ್ದರು.
ಒಬ್ಬ ಸ್ಟೇಪ್ನಿ ಹತ್ತಿರ ಕೆಲಸ ಮಾಡ್ತಿದ್ದು, ಉಳಿದ ನಾಲ್ವರು ವಾಹನ ಪಕ್ಕ ನಿಂತಿದ್ರು. ಈ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. ಬೀಳಗಿ ಆಸ್ಪತ್ರೆಯಲ್ಲಿ ನಾಲ್ವರ ಶವ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ಆಸ್ಪತ್ರೆ ಆವರಣದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಹನಾ ಸಾವು ಪ್ರಕರಣ: ನಟಿಯ ಕೋಣೆಯಲ್ಲಿ ಪತ್ತೆಯಾದ ಡೈರಿಯಲ್ಲಿ ಗಂಡನ ಕರಾಳ ಮುಖ ಬಯಲು

ಅಂಗವಿಕಲನಿಗೆ ಆಧಾರ್ ಕೊಡಿಸಿದ ಪಿಎಂ ಕಚೇರಿ! ಎರಡು ವರ್ಷದ ಸಮಸ್ಯೆಗೆ ಮುಕ್ತಿ

ನೀನು ನಾನು ಉಪ್ಪಿ ಹೇಳೋದು ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − four =
Remember me
