ಬಾಗಲಕೋಟೆ:ಸಲೂನ್​​​ನಲ್ಲಿ ತಲೆ ಕೂದಲಿಗೆ ಕಲರ್ ಹಾಕುವ ಬೆಲೆಯ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಿನ್ನೆ (ಮೇ.26) ಸಂಜೆ ನಡೆದಿದೆ.
ಸಾಗರ ಅವಟಿ (22) ಕೊಲೆಯಾದ ಯುವಕ. ಸದಾಶಿವ ನಾವಿ ಕೊಲೆ ಮಾಡಿದ ಕ್ಷೌರಿಕ. ಈ ಘಟನೆ ಅಸಂಗಿ ಗ್ರಾಮದ ಪ್ರಜ್ವಲ್ ಜೆಂಟ್ಸ್ ಪಾರ್ಲರ್​ನಲ್ಲಿ ಘಟನೆ. ಸಾಗರ ಎಂಬ ಯುವಕ ತಲೆಗೆ ಕಲರ್ ಹಚ್ಚಿಸೋಕೆ ಬಂದಿದ್ದ. ಸಲೂನ್ ಮಾಲೀಕ ಲಕ್ಷ್ಮಣ ಕಲರ್ ಹಚ್ಚೋದಕ್ಕೆ‌ ಮುಂದಾಗಿದ್ದ. ಪಕ್ಕದ ಟೇಬಲ್​ನಲ್ಲಿ ಸದಾಶಿವ ನಾವಿ ಎಂಬ ಕ್ಷೌರಿಕ ಬೇರೊಬ್ಬನ ಕಟಿಂಗ್ ಮಾಡುತ್ತಿದ್ದ.
ಕಲರ್ ಹಚ್ಚೋದಕ್ಕೆ 29 ರೂಪಾಯಿ ಕೊಡುವುದಾಗಿ ಲಕ್ಷ್ಮಣನಿಗೆ ಸಾಗರ ಹೇಳಿದ್ದ. ಇದಕ್ಕೆ ತಕರಾರು ತೆಗದ ಸದಾಶಿವ ನಾವಿ ಜಗಳಕ್ಕೆ ಇಳಿದಿದ್ದ. ಇಬ್ಬರ ಜಗಳ ತಾರಕಕ್ಕೇರಿದಾಗ ತಾಳ್ಮೆ ಕಳೆದುಕೊಂಡ ಸದಾಶಿವ ಕತ್ತರಿಯಿಂದ ಸಾಗರನ ಎದೆಯ ಎಡಭಾಗಕ್ಕೆ ಚುಚ್ಚಿದ್ದಾನೆ. ಕೂಡಲೆ ಸಾಗರನನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.
ಈ‌ ಮೊದಲು ಸದಾಶಿವ ನಾವಿಯನ್ನು ಅವಮಾನ ಮಾಡಿದ್ದ ಸಾಗರ ಆತನನ್ನು ಕಾಡಿಸುತ್ತಿದ್ದನಂತೆ. ಇದರಿಂದ ಸದಾಶಿವ ತೀವ್ರ ಅಸಮಾಧಾನ ಹೊಂದಿದ್ದ. ನಿನ್ನೆಯೂ ಕೂಡ ಕೆಲ ಹೊತ್ತು ಕಾಡಿಸಿದ್ದನಂತೆ. ನಂತರ ತಲೆಗೆ ಕಲರ್ ಹಚ್ಚುವಾಗ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದಾಶಿವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ನನ್ನ ಪತ್ನಿ ಕೈಗೆ ಸಿಕ್ಕಿದ್ದರಲ್ಲಿ ಬಾರಿಸ್ತಾಳೆ.. ಕಾಪಾಡಿ ಸರ್​: ವಿಡಿಯೋ ಸಮೇತ ಕೋರ್ಟ್​ ಮೆಟ್ಟಿಲೇರಿದ ಪ್ರಾಂಶುಪಾಲ

ಆರ್‌ಸಿಬಿ ಪರ ಆಡಲು ಮದುವೆ ಮುಂದೂಡಿದ್ದ ರಜತ್ ಪಾಟಿದಾರ್!

ಡಿಜಿಟಲ್ ಸಾಲದ ಆಪತ್ತು: ಲೋನ್ ಕೊಟ್ಟು ಜೀವ ಹಿಂಡುವ ಅನಧಿಕೃತ ಆ್ಯಪ್​​ಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + fifteen =
Remember me
