ಬಾಗಲಕೋಟೆ:ರಜೆ ಮೇಲೆ ಬಂದಿದ್ದ ಯೋಧನೊಬ್ಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಸಹೋದರನಿಂದಲೇ ಕೊಲೆಯಾಗಿರುವ ದುರಂತ ಘಟನೆ ಗುರುವಾರ (ಆ.11) ರಾತ್ರಿ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ.
ಕರಿಸಿದ್ದಪ್ಪ‌ ಕಳಸದ (25) ಕೊಲೆಯಾದ ಯೋಧ. ಊಟ ಮಾಡುವ ವೇಳೆ ಪತ್ನಿ ಜೊತೆ ಜಗಳ ಮಾಡಿದ್ದ ಕಾರಣಕ್ಕೆ ಹತ್ಯೆಯಾಗಿದ್ದಾನೆ. ಕರಿಸಿದ್ದಪ್ಪ, ವಿದ್ಯಾ ಎಂಬುವಳನ್ನು ಪ್ರೀತಿಸಿ ಎರಡು ವರ್ಷದ ಹಿಂದೆ ಮದುವೆಯಾಗಿದ್ದ. ಭಾರತೀಯ ಸೇನೆಯ ರಾಜಸ್ಥಾನ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕರಿಸಿದ್ದಪ್ಪ‌, ರಜೆ ತೆಗೆದುಕೊಂಡು ನಾಲ್ಕು ದಿನದ ಹಿಂದಷ್ಟೇ ಖುಷಿ ಖುಷಿಯಾಗಿ ತವರಿಗೆ ಬಂದಿದ್ದ.
ನಿನ್ನೆ ರಾತ್ರಿ ಊಟ ಮಾಡುವಾಗ ಪತ್ನಿ ವಿದ್ಯಾಳ ಜೊತೆ ಕರಿಸಿದ್ದಪ್ಪ ಜಗಳ ಮಾಡಿದ್ದ. ಈ ವಿಚಾರವನ್ನು ವಿದ್ಯಾ, ತನ್ನ ಸಹೋದರ ಧರಿಗೌಡಗೆ ತಿಳಿಸಿದ್ದಳು. ಇದರಿಂದ ಕುಪಿತಗೊಂಡ ಸಿದ್ದನಗೌಡ, ಭಾವನ ಮನೆಗೆ ಬಂದು ನನ್ನ ಸಹೋದರಿಗೆ ಕಿರುಕುಳ ಕೊಡ್ತೀಯಾ ಅಂತಾ ಚಾಕು ಇರಿದು ಕೊಲೆ ಮಾಡಿದ್ದಾನೆ.
ಘಟನೆ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಕೆರೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಹುಡ್ಗೀರು ಲೈಂಗಿಕ ಸುಖ ಕೇಳಿದ್ರೆ… ವಿವಾದಾತ್ಮಕ ಹೇಳಿಕೆ ನೀಡಿದ “ಶಕ್ತಿಮಾನ್​”ಗೆ ಎದುರಾಯ್ತು ಸಂಕಷ್ಟ!

ಬೆಳಗಾವಿ ಜಿಲ್ಲೆಯಲ್ಲಿ ಎರಡು ಚಿರತೆ ಪ್ರತ್ಯಕ್ಷ: 52 ಶಾಲೆಗಳಿಗೆ ರಜೆ ಘೋಷಣೆ ಮಾಡಿದ ಜಿಲ್ಲಾಧಿಕಾರಿ

ಮದ್ವೆ ಮುರಿದುಬಿತ್ತು ಎಂದು ವದಂತಿ ಹಬ್ಬಿಸಿದವರಿಗೆ ಬೋಲ್ಡ್​ ಫೋಟೋ ಮೂಲಕವೇ ತಿರುಗೇಟು ಕೊಟ್ಟ ಜೋಶ್​ ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
