ಬಳ್ಳಾರಿ:ರೈತರೊಂದಿಗೆ ನಡೆಯುತ್ತಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಯುವ ಕಾಂಗ್ರೆಸ್ ರಾಜಾಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್​ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.
ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಯುವ ಕಾಂಗ್ರೆಸ್​ನಿಂದ ನಿನ್ನೆ (ಸೆ.24) ರಾತ್ರಿ ರೈತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಲಪಾಡ್​ ಅವರು ರೈತರನ್ನು ಉದ್ದೇಶಿಸಿ ಮಾತನಾಡುತ್ತಾ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್​ ಆರೋಪ ಮಾಡಿದರು. ಈ ವೇಳೆ ರೈತನೊಬ್ಬ ಮಧ್ಯ ಪ್ರವೇಶಿಸಿ, ವಿರೋಧಿಸಲು ಮುಂದಾದಾಗ, ಆತನಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಏಕವಚನದಲ್ಲಿ ಮಾತನಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ವಿವರಣೆಗೆ ಬರುವುದಾದರೆ, ಬಿಜೆಪಿ ಸರ್ಕಾರ 40 ಪರ್ಸೆಂಟ್​ ಕಮಿಷನ್​ ಪಡೆಯುತ್ತಿದೆ ಎಂದು ನಾವು ಹೇಳಿದ್ದಲ್ಲ. ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರೇ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಅಲ್ಲದೆ, ಅವರದೇ ಪಕ್ಷದ ಕಾರ್ಯಕರ್ತ ಸಂತೋಷ್​ ಪಾಟೀಲ್​ ಅವರ ಜೀವ ಹೋಗಿದ್ದು ಕೂಡ ಇವರ 40 ಪರ್ಸೆಂಟ್​ ಕಮಿಷನ್​ನಿಂದ ಎಂದು ನಲಪಾಡ್​ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ವೇದಿಕೆ ಪಕ್ಕದಲ್ಲಿದ್ದ ರೈತನೊಬ್ಬ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇದರಿಂದ ಸಿಟ್ಟಿಗೆದ್ದ ನಲಪಾಡ್​, ಯಾವನೋ ಅವನು ಕುಡಿದು ಬಿಟ್ಟು ಹೇಳುವುದನ್ನು ಕೇಳಿ ನೀವು ಟೆನ್ಸನ್​ ತೆಗೆದುಕೊಳ್ಳಬೇಡಿ. ನಾನು ಹೇಳುವುದನ್ನು ಕೇಳಿ ಎಂದು ನಲಪಾಡ್ ಹೇಳುತ್ತಾರೆ.
ನಲಪಾಡ್ ಮಾತಿಗೆ ರೊಚ್ಚಿಗೆದ್ದ ಸಂವಾದದಲ್ಲಿ ಭಾಗಿಯಾಗಿದ್ದ ರೈತ, ಯಾವನೋ-ಗೀವನೋ ಅಂದ್ರೆ ಸರಿಯಿರಲ್ಲ ಎಂದು ಅವಾಜ್ ಹಾಕಿದರು. ಅಲ್ಲಿದ್ದ ಇತರೆ ರೈತರು ಎಷ್ಟೇ ಸಮಾಧಾನ ಪಡಿಸಿದರೂ ರೈತ ಸುಮ್ಮನಾಗದಿದ್ದಾಗ ಪೊಲೀಸರು ಮಧ್ಯ ಪ್ರವೇಶಿಸಿ, ರೈತನ ಸಮಾಧಾನ ಮಾಡಿದರು.(ದಿಗ್ವಿಜಯ ನ್ಯೂಸ್​)
ಬಿಜೆಪಿ ನಾಯಕನ ಪುತ್ರನಿಂದ ಯುವತಿ ಕೊಲೆ: ಮರಣೋತ್ತರ ವರದಿಯಲ್ಲಿ ಸ್ಫೋಟಕ ರಹಸ್ಯ ಬಯಲು

ಮೊದಲು ಮಾನವನಾಗು; ‘ತೋತಾಪುರಿ’ ತಿಂದ ಅದಿತಿ ಮನದ ಮಾತು…

ರಾಜಕಾರಣಿ ಪುತ್ರನ ರೆಸಾರ್ಟಲ್ಲಿ​​ ಗ್ರಾಹಕರಿಗೆ ‘ಸ್ಪೆಷಲ್ ಸರ್ವಿಸ್’ ಕೊಡಲು ಒಪ್ಪದ ರಿಷೆಪ್ಷನಿಸ್ಟ್​ ಯುವತಿಯ ಕೊಲೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
