ಬಳ್ಳಾರಿ:ನಿನ್ನೆ (ಫೆ.19) ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ಖಡ್ಗ‌ ಹಿಡಿದು ನಿಷೇಧಾಜ್ಞೆ ಇರುವ ಪ್ರದೇಶದಲ್ಲಿ ಬೈಕ್ ರ್‍ಯಾಲಿ ಮಾಡಿದ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಳ್ಳಾರಿಯ ಸರಳಾದೇವಿ ಕಾಲೇಜು ಮುಂಭಾಗ 20 ಕ್ಕೂ ಹೆಚ್ಚು ಬೈಕ್​ಗಳಲ್ಲಿ ಬಂದು ಯುವಕರು ರ್‍ಯಾಲಿ ಮಾಡಿದ್ದರು. ಸದ್ಯ ಸರಳಾದೇವಿ ಕಾಲೇಜು ಬಳ್ಳಾರಿಯಲ್ಲಿ ಹಿಜಾಬ್ ವಿವಾದದ ಕೇಂದ್ರವಾಗಿದೆ. ಹೀಗಾಗಿ ಜಿಲ್ಲಾಡಳಿತ ಕಾಲೇಜಿನ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿ ಮಾಡಿದೆ.
ನಿಷೇಧಾಜ್ಞೆ ನಡುವೆಯೂ ಬೈಕ್ ರ್‍ಯಾಲಿ ಗಾದಿಲಿಂಗ, ಬಾಲಾಜಿ, ವಿನಯ್, ಸೂರಿ, ರಾಹುಲ, ಸಂತೋಷ್, ಶಿವರಾಂ ಮತ್ತು ಶ್ರೀಧರ್ ವಿರುದ್ಧ ಐಪಿಸಿ 153 ಸೆಕ್ಷನ್ ಅಡಿಯಲ್ಲಿ ಬಳ್ಳಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂದಿನ ಕ್ರಮ ಹಾಗೂ ಹೆಚ್ಚಿನ ತನಿಖೆಗೆ ಗಾಂಧಿ ನಗರ ಠಾಣೆಯ ಇನ್ಸ್​ಪೆಕ್ಟರ್​ಗೆ ಪೊಲೀಸ್​ ವರಿಷ್ಠಾಧಿಕಾರಿ ಸೈದುಲ್ ಅದಾವತ್ ಸೂಚನೆ ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಟಾರ್ಗೆಟ್ ಇಂಡಿಯಾ; ಭಾರತದ ವಿರುದ್ಧ ದಾವೂದ್ ಹೊಸ ಷಡ್ಯಂತ್ರ

VIDEO| ಯುನೈಸ್​ ಬಿರುಗಾಳಿ ನಡುವೆಯೂ ಸುರಕ್ಷಿತ ಲ್ಯಾಂಡಿಂಗ್:​ ಏರ್​ ಇಂಡಿಯಾ ಪೈಲಟ್ಸ್​ಗೆ ಭಾರೀ ಮೆಚ್ಚುಗೆ​

ಊಟದ ಬಿಲ್ ದಿನಕ್ಕೆ 60 ಸಾವಿರ ರೂಪಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 2 =
Remember me
