ಬಳ್ಳಾರಿ:ಆಡಳಿತಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಬಳ್ಳಾರಿ‌ ಮಹಾನಗರ ಪಾಲಿಕೆಗೆ ಮೇಜರ್ ಸರ್ಜರಿ ಮಾಡಲು ಲೇಡಿ ಕಮಿಷನರ್ ಮುಂದಾಗಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಬಳ್ಳಾರಿ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್​ ಅವರು ದಿಟ್ಟ ನಡೆ ಅನುಸರಿದ್ದು, ಒಂದೇ ಬಾರಿಗೆ 60 ಅಧಿಕಾರಿಗಳು‌ ಹಾಗು ನೌಕರರನ್ನು ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ತುಕ್ಕು ಹಿಡಿದಿರುವ ಆಡಳಿತಕ್ಕೆ ಮೇಜರ್​ ಸರ್ಜರಿ ಮಾಡಲು ಪ್ರೀತಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಐದರಿಂದ ಹತ್ತು ವರ್ಷದವರೆಗೂ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಶಿಫಾರಸ್ಸು ಮಾಡಿದ್ದು, ಒಂದೇ ಸ್ಥಳದಲ್ಲಿ ಬೀಡು ಬಿಟ್ಟಿರುವ ಪಾಲಿಕೆ ಅಧಿಕಾರಿಗಳ ಎದೆಯಲ್ಲಿ ಈಗಾಗಲೇ ತಳಮಳ ಶುರುವಾಗಿದೆ. ಲೇಡಿ ಕಮಿಷನರ್ ನಡೆಗೆ ಅಧಿಕಾರಿಗಳಲ್ಲಿ ನಡುಕ ಉಂಟಾಗಿದ್ದರೆ, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ವರ್ಗಾವಣೆ ಮಾಡಿ ಅಂತಾ ನಗರಾಭಿವೃದ್ದಿ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪ್ರೀತಿ ಅವರು ಪತ್ರ ಬರೆದು ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದಾರೆ. ರಾಜ್ಯದ ಎಲ್ಲ ಕಡೆ ಇದೀ ನಿಯಮ ಅಳವಡಿಸಿಕೊಂಡರೆ ಆಡಳಿತದಲ್ಲಿ ಒಂದಿಷ್ಟು ಬದಲಾವಣೆ ಕಾಣಬಹುದು ಎಂಬುದು ಜನರ ನಂಬಿಕೆಯಾಗಿದೆ.(ದಿಗ್ವಿಜಯ ನ್ಯೂಸ್​)
ಸಾಯಿ ಪಲ್ಲವಿ ತುಂಡುಡುಗೆ ತೊಡದಿರಲು ಈ ಒಂದು ಕೆಟ್ಟ ಘಟನೆಯೇ ಕಾರಣ! ನೊಂದು ಕಣ್ಣೀರು ಹಾಕಿದ್ದರಂತೆ…

ನೀರಿನ ಸಂಪ್​​ ಅಗೆಯುವಾಗ ಸಿಕ್ಕ ನಿಧಿ ಆಸೆಗೆ ಬಿದ್ದು 15 ಲಕ್ಷ ರೂ. ಕಳೆದುಕೊಂಡ ಉದ್ಯಮಿಯ ವ್ಯಥೆಯಿದು!

ಎಸ್ಸೆಸ್ಸೆಲ್ಸಿಯಲ್ಲಿ ಗಣಿತದಲ್ಲಿ 36, ವಿಜ್ಞಾನದಲ್ಲಿ 38, ಇಂಗ್ಲಿಷ್​ನಲ್ಲಿ 35 ಅಂಕಗಳಿಸಿದ ಇವರು ಇಂದು ಜಿಲ್ಲಾಧಿಕಾರಿ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:15 − 3 =
Remember me
