ಬಳ್ಳಾರಿ:ಮಾರ್ಚ್‌ 19 ರಂದು ಕಂಪ್ಲಿ ತಾಲೂಕಿನ ವಿಠ್ಠಲಾಪುರದ ಗುಡ್ಡದಲ್ಲಿ ಪತ್ತೆಯಾಗಿದ್ದ ಅನಾಮಧೇಯ ವ್ಯಕ್ತಿಯ ತಲೆಬುರುಡೆ ಪ್ರಕರಣವನ್ನು ಬಳ್ಳಾರಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಲೆ ಬುರುಡೆ, ಶರ್ಟ್ ಆಧಾರದ ಮೇಲೆ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಾರ್ಚ್‌ 19 ರಂದು ಕಂಪ್ಲಿ ತಾಲೂಕಿನ ವಿಠ್ಠಲಾಪುರದ ಗುಡ್ಡದಲ್ಲಿ ಕೊಲೆ ನಡೆದಿತ್ತು. ಜೇರ್ವಗಿ ತಾಲೂಕಿನ ಬಳ್ಳಂಡುಗಿ ತಾಲೂಕಿನ ಅಮರೇಶ ಕೊಲೆಯಾಗಿದ್ದ ವ್ಯಕ್ತಿ.
ಅಮರೇಶ ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದ ಇಂದಿರಾ ಪ್ಲಾಂಟ್​ನಲ್ಲಿ ಹಮಾಲಿ‌ ಕೆಲಸ ಮಾಡುತ್ತಿದ್ದ. ಶರ್ಟ್ ಆಧಾರದ ಮೇಲೆ ಗಂಗಾವತಿಯ ರಾಯಲ್ ಟೈಲರ್​ನಲ್ಲಿ ಪೊಲೀಸರು ಸಾಕ್ಷಿ ಸಂಗ್ರಹಿಸಿದ್ದರು. ಅನಾಮಧೇಯ ಶವ ಪತ್ತೆಯಾದ ಬಗ್ಗೆ ಕಂಪ್ಲಿ ಪೊಲೀಸರು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದ್ದರು. ಕಂಪ್ಲಿ ಪೊಲೀಸರ ಪ್ರಕಟಣೆ ಕಂಡು ಅಮರೇಶ ನಾಪತ್ತೆ ಬಗ್ಗೆ ಕುಟುಂಬಸ್ಥರು ಸುಳಿವು ನೀಡಿದ್ದರು. ಬಳಿಕ ಶರ್ಟ್. ತೆಲೆ ಬರುಡೆ, ಕೊರಳ ಚೈನ್ ಆಧಾರದ ಮೇಲೆ ಕೊಲೆಯಾದ ವ್ಯಕ್ತಿಯ ಗುರುತನ್ನು ಕುಟುಂಬಸ್ಥರು ಪತ್ತೆ ಮಾಡಿದ್ದರು.
ಹಲವು ಸಾಕ್ಷಿ ಆಧಾರದ ಮೇಲೆ ಕಿರಣಕುಮಾರ್ ಹಾಗೂ ರೇವಣಸಿದ್ದ ಎಂಬುವರನ್ನು ಪೊಲೀಸರು ಬಂಧಿಸಿದ್ದು, ತೆಲೆ ಮರೆಸಿಕೊಂಡಿರುವ ಮಲ್ಲಯ್ಯ, ಸಂಗಣ್ಣಗೆ ಪೊಲೀಸರ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಆರೋಪಿ ಕಿರಣ ಕುಮಾರ್ ತಂಗಿಯನ್ನ ಚುಡಾಯಿಸಿದಕ್ಕೆ ಅಮರೇಶನನ್ನು ಆರೋಪಿಗಳು ಕೊಲೆ ಮಾಡಿದ್ದಾರೆಂದು ತಿಳಿದುಬಂದಿದೆ. ಮಾರ್ಚ್ 28 ರಂದು ಕಂಪ್ಲಿ ಪೊಲೀಸ್​ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು.
ಇದೀಗ ಕೊಲೆ ಪ್ರಕರಣವನ್ನು ಕಂಪ್ಲಿ ಪೊಲೀಸರು ಭೇದಿಸಿದ್ದು, ಠಾಣೆಯ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕಂಪ್ಲಿ ಠಾಣೆಯ ಪಿಎಸ್ ಐ ಹಾಗೂ ಸಿಬ್ಬಂದಿಗಳಿಗೆ ಬಳ್ಳಾರಿ ಎಸ್ಪಿ ಸೈದುಲು ಅಡಾವತ್ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
ನೀವು ನನಗೋಸ್ಕರ ನಾನು ಹೇಳಿದ್ದನ್ನು ಮಾಡಿದ್ರೆ ನಿಮಗೋಸ್ಕರ ನಾನು ಬೆತ್ತಲಾಗ್ತೀನಿ ಅಂದ್ರು ಪೂನಂ ಪಾಂಡೆ!

ಅವಿಶ್ವಾಸ ನಿರ್ಣಯದಿಂದ ಪಾಕ್​ ಪಿಎಂ ಇಮ್ರಾನ್​ ಖಾನ್ ಸೇಫ್​ ಆಗ್ತಾರಾ? ಇಂದೇ ಇಮ್ರಾನ್ ಸರ್ಕಾರದ ಭವಿಷ್ಯ ನಿರ್ಧಾರ​

ಚಾಯ್​-ಸ್ಯಾಮ್​ ಭವಿಷ್ಯ ನಿಜವಾಯ್ತು ಇದೀಗ ಪ್ರಭಾಸ್​ ಬಗ್ಗೆ ಭಯಾನಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eight − seven =
Remember me
