ಬಳ್ಳಾರಿ:ಮೊದಲನೇ ಪತ್ನಿ ಇದ್ದರೂ ಮತ್ತೊಂದು ಮದುವೆ ಮಾಡಿಕೊಂಡು ಇದೀಗ ವಂಚನೆ ಮಾಡಿರುವ ಆರೋಪ ಬಳ್ಳಾರಿಯ ಸಬ್ ರಿಜಿಸ್ಟ್ರಾರ್  ಉಮೇಶ್​​​ ವಿರುದ್ದ ಕೇಳಿಬಂದಿದೆ. ಸಂತ್ರಸ್ತೆ ನಜ್ಮೀನ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ.
ವಂಚನೆಗೆ ಒಳಗಾದ ಸಂತ್ರಸ್ತ ಮಹಿಳೆ ತನ್ನ ಮಗುವನ್ನು ಎತ್ತಿಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಗೆ ನಿತ್ಯವು ಅಲೆದಾಡುತ್ತಿದ್ದಾರೆ. ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಸಂತ್ರಸ್ತೆ, ನನಗೆ ನೀನೇ ಬೇಕು. ಮಗು ಕೊಟ್ಟು, ಕೈ ಕೊಟ್ರೆ ಹೆಂಗೆ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ.
ನಜ್ಮೀಮ್​ ಖಾನ್ ಸಬ್‌ ರಿಜಿಸ್ಟ್ರಾರ್ ಕಚೇರಿಗೆ ಬಂದಾಗಲೆಲ್ಲ ಉಮೇಶ್ ಎಸ್ಕೇಪ್ ಆಗ್ತಿದ್ದಾರೆ. ಅಲ್ಲದೆ, ಗೂಂಡಾಗಳನ್ನು ಮನೆಗೆ ಕಳುಹಿಸಿ ಗಲಾಟೆ ಮಾಡಿಸಿ, ಹೆದರಿಸುತ್ತಿರುವುದಾಗಿ ಆರೋಪಿಸಲಾಗಿದೆ. ಕಿರುಕುಳ ನೀಡುತ್ತಿರುವ ಬಗ್ಗೆ ಪ್ರಕರಣ ದಾಖಲಿಸಿದರೆ, ಕ್ರಮಕ್ಕೆ ಮುಂದಾಗುತ್ತೇವೆ ಅಂತಾ ಬಳ್ಳಾರಿ ಎಸ್ಪಿ ಸೈದಯಲ್ ಅದಾವತ್ ಭರವಸೆ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?ಮೊದಲನೇ ಹೆಂಡತಿ ಇದ್ರೂ ಸಬ್​ ರಿಜಿಸ್ಟ್ರಾರ್ ಉಮೇಶ್​ ಇನ್ನೊಬ್ಬ ಮಹಿಳೆಯನ್ನ ಮದುವೆಯಾದ್ದಾನೆ. ದೆಹಲಿ ಮೂಲದ ನಜ್ಮೀಮ್ ಖಾನ್ ಎಂಬ ಮಹಿಳೆಯನ್ನು ಪ್ರೀತಿಯ ಬಲೆಗೆ ಕೆಡವಿ, ಮದುವೆಯಾಗಿ ಮಗು ಕೊಟ್ಟು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಆರು ತಿಂಗಳ ಹಿಂದೆ ನ್ಯಾಯಕ್ಕಾಗಿ ಉಮೇಶ್ ವಿರುದ್ಧ ಬಳ್ಳಾರಿ ಮಹಿಳಾ ಠಾಣೆಯಲ್ಲಿ ಸಂತ್ರಸ್ತೆ ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಮದುವೆಯಾಗಿದ್ದರೂ, ತನ್ನ ಹೆಸರನ್ನು ರೆಹಾನ್ ಅಹಮದ್ ಎಂದು ಸುಳ್ಳು ಹೇಳಿ ಮದುವೆಯಾಗಿದ್ದಾನೆ.
ಮೊದಲನೇ ಹೆಂಡತಿ ಮತ್ತು ಮಕ್ಕಳನ್ನು ತನ್ನ ಅತ್ತಿಗೆ ಹಾಗೂ ಅವರ ಮಕ್ಕಳು ಎಂದು ನಜ್ಮೀಮ್​ ಖಾನ್​ಗೆ ಉಮೇಶ್​ ಪರಿಚಯಿಸಿದ್ದನಂತೆ. ನಜ್ಮೀನ್ ಮೂಲತಃ ದೆಹಲಿಯವರು, ಬೆಂಗಳೂರಲ್ಲಿ ಮಾಡೆಲ್ ಆಗಿ ಕೆಲಸ ಮಾಡ್ತಿದ್ದಾಗ ಉಮೇಶ್ ತನ್ನ ಹೆಸರು ಬದಲಾಯಿಕೊಂಡು ಸ್ನೇಹ ಬೆಳೆಸಿದ್ದಾನೆ. ಬಳಿಕ ಸ್ನೇಹ, ಪ್ರೀತಿ, ಲೈಂಗಿಕ ಸಂಬಂಧ ಹಾಗೂ ಮುಸ್ಲಿಂ ಧರ್ಮದಂತೆ ಮದುವೆ, ಮಗು ಮಾಡಿಕೊಂಡಿದ್ದಾನೆ. ಮೂರ್ನಾಲ್ಕು ವರ್ಷ ಬಳ್ಳಾರಿಗೆ ಬಂದು ಉಮೇಶ್​ ಜತೆಗಿದ್ದಾಗ ಕೊನೆಗೆ ಸತ್ಯ ಬಯಲಾಗಿದೆ. ಉಮೇಶ್​ಗೆ ಅತ್ತಿಗೆ ಇಲ್ಲ, ಹೆಂಡತಿಯನ್ನೇ ಅತ್ತಿಗೆ ಎಂದು ನಂಬಿಸಿದ್ದಾನೆ ಎಂಬುದು ತಿಳಿದಿದೆ. ಇದೆಲ್ಲ ಗೊತ್ತಾದ ಬಳಿಕವೂ ಹತ್ತು‌ ಕೋಟಿ ವರದಕ್ಷಿಣೆ ಕೊಡು ಎಂದು ಉಮೇಶ್ ಪಟ್ಟು ಹಿಡಿದಿದ್ದ ಎಂದು ನಜ್ಮೀನ್ ಆರೋಪ ಮಾಡಿದ್ದಾರೆ.
ಇನ್ನೊಂದೆಡೆ ಹಣಕ್ಕಾಗಿ ಬೇಡಿಕೆ ಇಟ್ಟು ನಜ್ಮೀಮ್​ ಖಾನ್​ ಬ್ಲಾಕ್ಮೇಲ್ ಮಾಡ್ತಿದ್ದಾಳೆ ಅಂತಾ ಬಳ್ಳಾರಿ ಗಾಂಧಿನಗರ ಠಾಣೆಯಲ್ಲಿ ಉಮೇಶ್ ಕೂಡ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸತ್ಯಾಸತ್ಯತೆ ತಿಳಿಯಲು ತನಿಖೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ನಿಲ್ಲದ ದರ ಏರಿಕೆಯ ಬರೆ: 16 ದಿನದಲ್ಲಿ 14 ಬಾರಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ, ಇಂದಿನ ಇಂಧನ​ ದರ ಹೀಗಿದೆ

ಪರಿಶಿಷ್ಟರಿಗೆ ಡಬಲ್ ಗಿಫ್ಟ್: ಭೂ ಒಡೆತನ ಯೋಜನೆ ಸಹಾಯಧನ, ವಸತಿ ಸಬ್ಸಿಡಿ ಹೆಚ್ಚಳ

ಬೆನ್ನು ತಟ್ಟಿದವರಿಗೆ ಧನ್ಯವಾದ; ಎರಡನೇ ಬಾರಿ ಗ್ರ್ಯಾಮಿ ಪಡೆದ ರಿಕ್ಕಿ ಮನದಾಳ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twenty − eleven =
Remember me
