ಬೆಂಗಳೂರು:ವಿಧಾನಸಭೆಗೆ ಅವಧಿಪೂರ್ವ ಚುನಾವಣೆ ಬಗ್ಗೆ ಪಕ್ಷದ ಯಾವುದೇ ಹಂತದಲ್ಲಿ ಚರ್ಚೆಯಾಗಿಲ್ಲ, ಅದೆಲ್ಲ ಊಹಾಪೋಹ. ಮಾಧ್ಯಮಗಳೇ ಹುಟ್ಟು ಹಾಕಿದ ಚರ್ಚೆಯೇ ಹೊರತು ನಮ್ಮ ಪಕ್ಷದೊಳಗೆ ಅಂತಹ ವಿಚಾರವೂ ಪ್ರಸ್ತಾಪವಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಳ್ಳಿಹಾಕಿದರು.
ಆರ್ ಟಿ ನಗರದ ತಮ್ಮ ನಿವಾಸದ ಬಳಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪಂಚರಾಜ್ಯಗಳ ಚುನಾವಣೆ ಫಲಿತಾಂಶವು ರಾಜ್ಯದ ಮೇಲೆ ಪರಿಣಾಮ ಬೀರಲಿದೆ, ಕಾರ್ಯಕರ್ತರಲ್ಲಿ ಉತ್ಸಾಹ‌ ಹೆಚ್ಚಿಸಲಿದೆ ಎಂಬುದನ್ನು ಈಗಾಗಲೇ ಹೇಳಿದ್ದೇನಲ್ಲ ಎಂದರು.
ಈ ಫಲಿತಾಂಶದ ಬಳಿಕ ಕೆಲವರು ಪಕ್ಷ ತೊರೆಯುವ ಆಲೋಚನೆ ಬದಲಾಯಿಸಿದ್ದಾರಲ್ಲ? ಎಂಬ ಪ್ರಶ್ನೆಗೆ ಬೊಮ್ಮಾಯಿ‌ ಉತ್ತರಿಸಿ, ಯಾರೊಬ್ಬರೂ ಪಕ್ಷ ತೊರೆಯುವುದಿಲ್ಲ, ರೆಕ್ಕೆಪುಕ್ಕ, ಬಾಲ ಇಲ್ಲದ ವದಂತಿಗಳಗಷ್ಟೇ. ಇನ್ನು ಮನಸ್ಸು ಬದಲಾಯಿಸುವ ಪ್ರಶ್ನೆಯೇ ಉದ್ಭವಿಸದು. ಪಕ್ಷಕ್ಕೆ ಯಾರೆಲ್ಲ ಬರಲಿದ್ದಾರೆ ಎನ್ನುವುದು ಕಾದು ನೋಡಿ ಎಂದು ನಿಗೂಢವಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬೊಮ್ಮಾಯಿ‌ ಅವರು ತಮ್ಮ ನಿವಾಸದ ಬಳಿ ಭಾನುವಾರ ಸಾರ್ವಜನಿಕರ ಕುಂದು-ಕೊರತೆ ಅಹವಾಲು ಸ್ವೀಕರಿಸಿದರು.

ಮೃತ ಗಂಡ ಬಂದು ಬ್ಯಾಂಕ್‌ನ ಹಣ ವಿತ್‌ಡ್ರಾ ಮಾಡಿದ! ಎಚ್.ಡಿ.ಕೋಟೆ ಬ್ಯಾಂಕ್‌ನಲ್ಲಿ ಇದೆಂಥ ದೋಖಾ

ಒಂದೇ ದಿನದಲ್ಲಿ ಪೆಟ್ರೋಲ್​ 77, ಡೀಸೆಲ್​ 55 ರೂ. ಹೆಚ್ಚಳ; ಭಾರತೀಯರಿಗೂ ಕಾದಿದೆ ತೈಲಾಘಾತ!

ಅನಾರೋಗ್ಯ ಪೀಡಿತ ತಾಯಿಗೆ ಔಷಧ ತರಲು ಹೋಗ್ತಿದ್ದ ಯೂಕ್ರೇನ್​ ಮಹಿಳೆಗೆ ಗುಂಡಿಟ್ಟು ಹತ್ಯೆಗೈದ ರಷ್ಯಾ ಪಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − one =
Remember me
