ಬೆಳಗಾವಿ:ಕುಂದಾ ನಗರಿ ಬೆಳಗಾವಿಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಛರಿಕಾ ಕ್ರಮವಾಗಿ ಜಿಲ್ಲೆಯ 52 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಆಗಸ್ಟ್ 5 ರಂದು ಬೆಳಗಾವಿಯ ಜಾಧವ್​ ನಗರದಲ್ಲಿ ಚಿರತೆ ಪತ್ತೆಯಾಗಿತ್ತು. ಇದಾದ ಬಳಿಕ ಬೆಳಗಾವಿಯ ಗಾಲ್ಫ್ ಮೈದಾನದಲ್ಲೂ ಚಿರತೆ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಬೆಳಗಾವಿ ನಗರದ 22 ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಈಗಾಗಲೇ ಘೋಷಣೆ ಮಾಡಲಾಗಿದ್ದ ರಜೆಯನ್ನು ಇಂದೂ ಕೂಡ ಮುಂದುವರಿಸಲಾಗಿದೆ.
ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಕಳೆದ ರಾತ್ರಿ ಚಿರತೆ ಪ್ರತ್ಯಕ್ಷ ಹಿನ್ನೆಲೆಯಲ್ಲಿ ಮೂಡಲಗಿ ಪಟ್ಟಣ, ಮಸಗುಪ್ಪಿ, ಶಿವಾಪೂರ ಗ್ರಾಮದ 30 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಧರ್ಮಟ್ಟಿ ಗ್ರಾಮದ ಅನಿಲ್ ಎಂಬುವರ ತೋಟದ ಮನೆಗೆ ನುಗ್ಗಿದ ಚಿರತೆ, ಮೇಕೆ ಹೊತ್ತೊಯ್ದಿದೆ.
ಬೆಳಗಾವಿ ಜಾಧವ್ ನಗರದಲ್ಲಿ ಏಳು ದಿನಗಳ ಹಿಂದೆ ಪತ್ತೆಯಾಗಿದ್ದ ಚಿರತೆ ಮತ್ತು ನಿನ್ನೆ ರಾತ್ರಿ ಮೂಡಲಗಿ ಗ್ರಾಮದಲ್ಲಿ ಪತ್ತೆಯಾಗಿರುವ ಚಿರತೆ ಸೆರೆಹಿಡಿಯಲು ಎರಡು ಕಡೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು 52 ಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಮದ್ವೆ ಮುರಿದುಬಿತ್ತು ಎಂದು ವದಂತಿ ಹಬ್ಬಿಸಿದವರಿಗೆ ಬೋಲ್ಡ್​ ಫೋಟೋ ಮೂಲಕವೇ ತಿರುಗೇಟು ಕೊಟ್ಟ ಜೋಶ್​ ನಟಿ!

ನಾನು ನನ್ನೊಳಗಿನವನು; ರವಿ ಬೋಪಣ್ಣನಿಂದ ಕೆಲಸ ಕಲಿತರಂತೆ ರವಿಚಂದ್ರನ್

ಇಡಿ, ಸಿಬಿಐ ಮನೆಗೇ ಬರ್ಲಿ ಬಿಡಿ… ಇಲ್ಲೇ ಕಚೇರಿ ಮಾಡಿ ಕೊಡುವೆ: ಕೇಂದ್ರಕ್ಕೆ ತೇಜಸ್ವಿ ಯಾದವ್ ಟಾಂಗ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 10 =
Remember me
