ಬೆಳಗಾವಿ:ಕಟ್ಟವೊಂದರಲ್ಲಿ ಹೂ ಕೀಳಲು ಹೋಗಿ ಆಯತಪ್ಪಿ ಕೆಳಗಡೆ ಬಿದ್ದು ಮೃತಪಟ್ಟಿದ್ದ ಹಿಂದು ಬಾಲಕಿಯ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮುಸ್ಲಿಂ ಬಾಂಧವರು ಮಾನವೀಯತೆ ಮೆರೆದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ವಿದ್ಯಾಶ್ರೀ ಹೆಗಡೆ (10) ಮೃತಪಟ್ಟ ಬಾಲಕಿ. ಬೆಳಗಾವಿಯ ವೀರಭದ್ರ ನಗರದ ನಿವಾಸಿಯಾಗಿದ್ದ ವಿದ್ಯಾಶ್ರೀ, ನಿನ್ನೆ ಮನೆಯ ಮೇಲ್ಮಹಡಿಯಲ್ಲಿ ಹೂ ಕೀಳಲು ಹೋಗಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಳು. ಈ ವೇಳೆ ಆಕೆಯನ್ನು ರಕ್ಷಿಸಲು ಯಾರು ಮುಂದೆ ಬಾರದಿದ್ದಾಗ ಸ್ಥಳೀಯ ಮುಸ್ಲಿಂ ಮುಖಂಡರು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾಶ್ರೀಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಿಸದೇ ವಿದ್ಯಾಶ್ರೀ ಕೊನೆಯುಸಿರೆಳೆದಳು.
ವಿದ್ಯಾಶ್ರೀ ಅವರ ಪಾಲಕರು ಮೂಲತಃ ಉಡುಪಿಯವರಾಗಿದ್ದು, ಬಹಳ ವರ್ಷಗಳ ಹಿಂದೆಯೇ ಬೆಳಗಾವಿಗೆ ಬಂದು ನೆಲಸಿದೆ. ವಿದ್ಯಾಶ್ರೀ ಮೃತಪಟ್ಟ ಬಳಿಕ ಸ್ಥಳೀಯರು ಹಾಗೂ ಸಂಬಂಧಿಕರು ಅಂತ್ಯಕ್ರಿಯೆಗೆ ಬರದೇ ಇದ್ದಾಗ, ಸ್ವತಃ ಮುಸ್ಲಿಂ ಮುಖಂಡರೇ ಮುಂದೆ ಬಂದು ಲಿಂಗಾಯತ ಸಂಪ್ರದಾಯದಂತೆ ವಿದ್ಯಾಶ್ರೀಯ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಬೆಳಗಾವಿ ಸದಾಶಿವ ನಗರ ಸ್ಮಶಾನದಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿದೆ. ಇದಕ್ಕೂ ಮುನ್ನ ಗಂಭೀರ ಗಾಯಗೊಂಡಿದ್ದ ವಿದ್ಯಾಶ್ರೀಯನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಿ, ಆಸ್ಪತ್ರೆಯ ಖರ್ಚನ್ನು ಸಹ ಮುಸ್ಲಿಂ ಬಾಂಧವರೇ ಭರಿಸಿದ್ದಾರೆ. ಮುಸ್ಲಿಂ ಬಾಂಧವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.(ದಿಗ್ವಿಜಯ ನ್ಯೂಸ್​)
ಒಂದೇ ಸಮಯದಲ್ಲಿ 2 ಬಾರಿ ಬೈಕ್​ ಸವಾರನ ಜೀವ ಉಳಿಸಿದ ಹೆಲ್ಮೆಟ್! ವಿಡಿಯೋ ನೋಡಿದ್ರೆ ನೀವೆಂದು ಹೆಲ್ಮೆಟ್ ಮರೆಯೊಲ್ಲ

ರೈಲಿನ ಕಿಟಕಿಯಿಂದ ಕೈ ತೂರಿ ಮೊಬೈಲ್​ ದೋಚಲು ಯತ್ನಿಸಿದ ಖದೀಮನಿಗೆ 10 ಕಿ.ಮೀ ನರಕ ದರ್ಶನ!

ಒಂದೇ ದಿನಕ್ಕೆ ಶ್ರೀಮಂತನಾಗಲು ಹೋಗಿ ಪೊಲೀಸರ ಕೈಗೆ ತಗ್ಲಾಕೊಂಡ ಗುಮಾಸ್ತ! ಈತನ ದುಷ್ಕೃತ್ಯಕ್ಕೆ ಪತ್ನಿಯೂ ಸಾಥ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 7 =
Remember me
