ಬಳ್ಳಾರಿ:ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ತಮ್ಮ ಶ್ವಾನದ ಜೊತೆ ರಕ್ಷಿತ್​ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಬಳಿಕ ಫೇಸ್​ಬುಕ್​ ಮೂಲಕ ಚಾರ್ಲಿ ಸಿನಿಮಾದಲ್ಲಿನ ಶ್ವಾನದ ನಟನೆ ಹಾಗೂ ನಟ ರಕ್ಷಿತ್ ಶಟ್ಟಿಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜನಾರ್ದನ ರೆಡ್ಡಿ ಹಾಗೂ ಪತ್ನಿ ಅರುಣಾ ನಡುವೆ ಪ್ರತ್ಯೇಕ ಆಸನದಲ್ಲಿ ಕೂರಿಸಿಕೊಂಡು ತಮ್ಮ ಶ್ವಾನಕ್ಕೆ ಜನಾರ್ದನ ರೆಡ್ಡಿ ಸಿನಿಮಾ ತೋರಿಸಿದ್ದಾರೆ. ಅಂದಹಾಗೆ ರೆಡ್ಡಿ ಅವರ ಶ್ವಾನದ ಹೆಸರು ರಾಕಿ.
ಶ್ವಾನಗಳ ಕುರಿತು ಜನಾರ್ದನ ರೆಡ್ಡಿ ಮಾಡಿರುವ ಫೇಸ್​ಬುಕ್​ ಪೋಸ್ಟ್ ಈ ಕೆಳಕಂಡಂತಿದೆ….
ನಾನು 2015ರ ಸಮಯದಲ್ಲಿ ಕೆಲವು ಕಷ್ಟದ ದಿನಗಳಿಂದ ನೆಮ್ಮದಿ ಪಡೆದು ಮನೆಗೆ ಬಂದಾಗ ಪ್ರೀತಿಯಿಂದ ನಾಯಿ ಮರಿಯೊಂದನ್ನು ಸಾಕಿದೆನು. ಅದರೊಂದಿಗೆ ಬಲು ಪ್ರೀತಿಯಿಂದ ಕಾಲ ಕಳೆಯುತ್ತಿದ್ದೇನೆ. ಅದಕ್ಕೆ “ರಾಖಿ” ಎಂದು ನಾಮಕರಣವು ಮಾಡಿದ್ದೇವೆ. ಎಷ್ಟು ನಂಬಿಕೆ ವಿಶ್ವಾಸ, ಇಂತಹ ಪ್ರೀತಿಯ ಪ್ರಾಣಿಯನ್ನು ಅದೇಕೇ ಮೂಖನಾಗಿಸಿದೆ ಭಗವಂತ ಎಂತೆಲ್ಲಾ ಯೋಚಿಸುತ್ತಿರುವಾಗಲೇ ಚಾರ್ಲಿ 777 ಚಿತ್ರದ ಮೂಲಕ ನಾಯಕ ರಕ್ಷಿತ್ ಶೆಟ್ಟಿ ಅವರು ಶ್ವಾನದ ಪ್ರೀತಿ, ವಿಶ್ವಾಸ, ನಂಬಿಕೆ ಇದೆಲ್ಲದರ ಬಗ್ಗೆ ಜಗತ್ತಿಗೆ ಸಾರಿ ತೋರಿಸಿದ್ದಾರೆ.
ಚಾರ್ಲಿ 777 ಚಿತ್ರವನ್ನು ನಾನು ಮತ್ತು ನನ್ನ ಕುಟುಂಬದ ಸದಸ್ಯರು ನೋಡುತ್ತಿದ್ದ ಸಂದರ್ಭದಲ್ಲಿ ರಾಖಿಯು ನನ್ನ ಪಕ್ಕದಲ್ಲಿ ಕುಳಿತು ಚಿತ್ರವನ್ನು ನೋಡುತ್ತಿತ್ತು. ಚಿತ್ರದಲ್ಲಿ ಚಾರ್ಲಿಯನ್ನು ಕಂಡಾಗಲೆಲ್ಲಾ ನಮ್ಮ ರಾಖಿಯ ಕಿವಿ ಅರಳಿ ನಿಲ್ಲುತ್ತಿದ್ದವು. ಅದರ ಪ್ರೀತಿ ಮಮಕಾರ ನನಗೆ ಅರ್ಥವಾಗುತ್ತಿತ್ತು.(ದಿಗ್ವಿಜಯ ನ್ಯೂಸ್​)
ಅದು ಹೇಗೆ ಬೇಕಾದರೂ ಆಗಬಹುದು: ತುಮಕೂರಿನಲ್ಲಿ ಸ್ಫೋಟಕ ಹೇಳಿಕೆ ನೀಡಿದ ಮಾಜಿ ಸಿಎಂ ಎಚ್​​​ಡಿಕೆ

ಮೊದಲ ಬಾರಿಗೆ ಅಶ್ಲೀಲ ದೃಶ್ಯದಲ್ಲಿ ನಟನೆ: ನಟಿ ಇಶಾ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಬಾಬಿ ಡಿಯೋಲ್​

ಬಿಜೆಪಿ ಅಭಿವೃದ್ಧಿ ಸಮೀಕ್ಷೆ: ಚುನಾವಣೆಗೆ ಕಮಲ ಪಾಳಯ ಮೂರನೇ ಸರ್ವೆ

Sign in to your account
Please enter an answer in digits:five + eight =
Remember me
