ಬೆಂಗಳೂರು:ನಾಳೆ (ಜ.30) ಸರ್ವೋದಯ ದಿನಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಷೇಧಿಸಿದೆ.
ನಾಳೆ ಭಾನುವಾರ ಆಗಿರುವುದರಿಂದ ನಗರದಲ್ಲಿ ಬಹುತೇಕ ಮಾಂಸದಂಗಡಿಗಳು ತುಂಬಿ ತುಳುಕುತ್ತಿರುತ್ತವೆ. ಬಿಬಿಎಂಪಿ ಆದೇಶ ಮಾಂಸಪ್ರಿಯರಿಗೆ ಶಾಕ್​ ಆದರೂ, ಹಿಂದಿನಿಂದಲೂ ಸರ್ವೋದಯ ದಿನದಂದು ಇದು ನಡೆದುಕೊಂಡು ಬರುತ್ತಿರುವುದರಿಂದ ಎಲ್ಲರೂ ಬಿಬಿಎಂಪಿ ಆದೇಶವನ್ನು ಪಾಲಿಸಲೇಬೇಕಿದೆ. ಆದೇಶವನ್ನು ಮೀರಿ ಮಾಂಸ ಮಾರಾಟ ಮಾಡಿದರೆ ಸೂಕ್ತ ಕ್ರಮವನ್ನು ಬಿಬಿಎಂಪಿ ತೆಗೆದುಕೊಳ್ಳಲಿದೆ.
ಜನವರಿ 30 ಗಾಂಧೀಜಿ ಅವರ ಪುಣ್ಯ ಸ್ಮರಣೆಯ ದಿನ. ಇದನ್ನು ಹುತಾತ್ಮರ ದಿನವಾಗಿಯೂ ಆಚರಿಸಲಾಗುತ್ತದೆ. ಗಾಂಧಿ ಅವರು ಅಹಿಂಸೆಯ ಪ್ರತಿರೂಪ ಆಗಿರುವುದರಿಂದ ಅವರ ಪುಣ್ಯ ಸ್ಮರಣೆಯಂದು ಪ್ರಾಣಿ ವಧೆ ಮತ್ತು ಮಾಂಸ ಮಾರಾಟಕ್ಕೆ ಕಡಿವಾಣ ಹಾಕಲಾಗುತ್ತದೆ. ಈ ದಿನದಂದು ದೇಶಕ್ಕಾಗಿ ತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಲಾಗುತ್ತದೆ.

ಮಾಜಿ ಸಿಎಂ ಬಿಎಸ್​ವೈ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆಗೆ ಕಾರಣ ಬಿಚ್ಚಿಟ್ಟ ಗೃಹ ಸಚಿವ ಆರಗ ಜ್ಞಾನೇಂದ್ರ

ರಾಜ್ಯದ 4.53 ಲಕ್ಷ ರೈತ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ; ರೈತ ವಿದ್ಯಾನಿಧಿ ಯೋಜನೆಯಲ್ಲಿ ಬೆಳಗಾವಿ ಪ್ರಥಮ

ಬಿಜೆಪಿ ದೇಶದ ಶ್ರೀಮಂತ ಪಕ್ಷ; ಒಟ್ಟು ಆಸ್ತಿ 4, 847 ಕೋಟಿ ರೂಪಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + eleven =
Remember me
