ಬೆಂಗಳೂರು:ಸ್ಪೈ ಕ್ಯಾಮೆರಾ ಬಳಸಿ ಮಹಿಳೆಯ ನಗ್ನ ವಿಡಿಯೋಗಳನ್ನು ಚಿತ್ರೀಕರಿಸಿ ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮಾನ ಹರಾಜಾ ಮಾಡುವುದಾಗಿ ಬೆದರಿಸಿ ಅವರಿಂದ ಲೈಂಗಿಕ ಸುಖ ಪಡೆಯಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸುವಲ್ಲಿ ನಗರದ ಈಶಾನ್ಯ ವಿಭಾಗದ ಸಿ.ಇ.ಎನ್. ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹೇಶ್ (30) ಬಂಧಿತ ಆರೋಪಿ. ಪರಿಚಯಸ್ಥ ಮಹಿಳೆಯರು ಮನೆಗೆ ಬಂದಾಗ ಅಥವಾ ಪರಿಚಯಸ್ಥರ ಮನೆಗೆ ಹೋದಾಗ ಸ್ಪೈ ಕ್ಯಾಮೆರಾವನ್ನು ಇಟ್ಟು ಆರೋಪಿ ರಹಸ್ಯವಾಗಿ ವಿಡಿಯೋ ಮಾಡಿಕೊಳ್ಳುತ್ತಿದ್ದ. ಮೊಬೈಲ್ ಚಾರ್ಜರ್​ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಮಹಿಳೆಯರ ನಗ್ನ ವಿಡಿಯೋ ಮಾಡಿಕೊಳ್ಳುತ್ತಿದ್ದ.
ಇದಾದ ಬಳಿಕ ಮಹಿಳೆಗೆ ಇನ್ಸ್ಟಾ ಗ್ರಾಂನಲ್ಲಿ‌ ಮಸೇಜ್​ ಮಾಡುತ್ತಿದ್ದ. ನಕಲಿ ಖಾತೆಯಿಂದ ಮಹಿಳೆಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ. ಅಲ್ಲದೆ, ತನ್ನೊಂದಿಗೂ ಅಶ್ಲೀಲವಾಗಿ ಮಾತಾಡುವಂತೆ ಒತ್ತಾಯಿಸುತ್ತಿದ್ದ. ಇಲ್ಲವಾದರೆ ತನ್ನ ಬಳಿ ಇರುವ ವಿಡಿಯೋ ಪೋಸ್ಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ.
ಕೆಲ ವಿಡಿಯೋ ತುಣುಕನ್ನು ಕಳಿಸಿ, ತನ್ನ ಲೈಂಗಿಕ ಬಯಕೆಯನ್ನು ಈಡೇರಿಸುವಂತೆ ಆರೋಪಿ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಎರಡು ಸ್ಪೈ ಕ್ಯಾಮೆರಾ, ಲ್ಯಾಪ್​ಟಾಪ್, ಎರಡು ಪೆನ್​ಡ್ರೈವ್​, ಎರಡು ಮೆಮೊರಿ ಕಾರ್ಡ್​ ಮತ್ತು ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ.
ರಾಷ್ಟ್ರಗೀತೆ ಆರಂಭಕ್ಕೂ ಮುನ್ನ ರಾಹುಲ್​ ನಡೆದುಕೊಂಡ ರೀತಿಗೆ ನೆಟ್ಟಿಗರ ಬಹುಪರಾಕ್​: ವಿಡಿಯೋ ವೈರಲ್​

ವಿಮಾನ ಲ್ಯಾಂಡ್​ ಆಗುವ ಸಮಯದಲ್ಲೇ ನಿದ್ರೆಗೆ ಜಾರಿದ ಇಬ್ಬರು ಪೈಲಟ್​ಗಳು: ಮುಂದೇನಾಯ್ತು?

ಜೊತೆಜೊತೆಯಲಿ ತಂಡದಲ್ಲಿ ಸಮಸ್ಯೆ; ಧಾರಾವಾಹಿಯಿಂದ ಅನಿರುದ್ಧ ಹೊರಕ್ಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 5 =
Remember me
