ಬೆಂಗಳೂರು:ಬಸ್ ನಿಧಾನವಾಗಿ ಚಾಲನೆ ಮಾಡಿದ್ದಕ್ಕೆ ಹಾಗೂ ನಿಗದಿತ ಅವಧಿಗಿಂತ ಮುಂಚಿತವಾಗಿ ಆಗಮಿಸಿ ನಿಗಮಕ್ಕೆ ನಷ್ಟ ಮಾಡಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಬಿಎಂಟಿಸಿ ಚಾಲಕರಿಗೆ ತಿಳುವಳಿಕೆ ಮತ್ತು ಪಾಲನಾ ಪತ್ರಗಳನ್ನು ನೀಡುವ ಮೂಲಕ ನಿಗಮ ಎಚ್ಚರಿಕೆ ನೀಡಿದೆ.
ಬಿಎಂಟಿಸಿ ಬಸ್ ಮಾರ್ಗಸಂಖ್ಯೆ ‘410ಕೆ’ ಅನ್ನು ಚಾಲಕ ಎತ್ತಿನಗಾಡಿಯ ರೀತಿಯಲ್ಲಿ ತುಂಬಾ ವಿಳಂಬವಾಗಿ ಚಾಲನೆ ಮಾಡಿದ್ದರಿಂದ ಕೆಲಸಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲವೆಂದು ಪ್ರಯಾಣಿಕರೊಬ್ಬರು ನಿಗಮಕ್ಕೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಲು ಚಾಲಕರಿಗೆ ನಿಗಮವು ತಿಳುವಳಿಕೆ ಪತ್ರ ನೀಡಿದೆ.
ಇನ್ನೂ ಮಾರ್ಗಸಂಖ್ಯೆ ‘25ಬಿ’ಯಲ್ಲಿ ಕರ್ತವ್ಯ ನಿರ್ವಹಿಸಿ ಹಿಂತಿರುಗುವಾಗ ಜಯನಗರಕ್ಕೆ 30 ನಿಮಿಷ ಮುಂಚಿತವಾಗಿ ಬಂದು ಕಾಲಹರಣ ಮಾಡಿ ಸಾರಿಗೆ ಆದಾಯ ತಪ್ಪಿಸಿದ್ದೀರಿ. ನಿಗದಿತ ಆದಾಯ 3 ಸಾವಿರ ಇದರ ಬದಲು 2,740 ರೂ. ತಂದಿದ್ದೀರಿ, ಕೊನೆಯ ಸುತ್ತುವಳಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ಖಾಲಿ ಸುತ್ತುಗಳಿಯ ಕಾರ್ಯಚರಣೆ ಮಾಡೀರುತ್ತೀರಿ. ಇದರಿಂದ ಸಂಸ್ಥೆಯ ಆದಾಯಕ್ಕೆ ನಷ್ಟವಾಗಿದೆ. ಆ ಮೂಲಕ ನಿಗಮದ ನಿಯಮಗಳನ್ನು ಉಲ್ಲಂಸಿದ್ದೀರಿ ಎಂದು ಅಪಾದನಾ ಪತ್ರ ನೀಡಿ ನಿಗಮ ಎಚ್ಚರಿಕೆ ನೀಡಿದೆ.
ಬಾಲಯ್ಯ ಜತೆ ನಟಿಸಲ್ಲ!; ವಯಸ್ಸಿನ ಅಂತರಕ್ಕೆ ಹೆದರಿದ್ರಾ ಕೃತಿ?

ಜೋಗದ ಗುಂಡಿಯಲ್ಲಿ ವಿಜಯ್ ತೇಜಸ್ವಿನಿ; ಥ್ರಿಲ್ಲರ್ ಜೋಗ 101 ಚಿತ್ರದಲ್ಲಿ ನಟನೆ

ಗೋರಖ್​ಪುರದ ಚಹರೆ ಬದಲಿಸುತ್ತಿರುವ ಬಾಬಾ ಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 17 =
Remember me
