ಬೆಂಗಳೂರು:ತಾನೋರ್ವ ಸಹಾಯಕ ಪೊಲೀಸ್​ ಕಮಿಷನರ್​ (ಎಸಿಪಿ) ಎಂದು ಹೇಳಿಕೊಂಡು, ವ್ಯಕ್ತಿಯೊಬ್ಬರನ್ನು ನಂಬಿಸಿ, ಅವರಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಖತರ್ನಾಕ್​ ಅಸಾಮಿಗಾಗಿ ಕೆಂಗೇರಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ನವೀನ್, ಬಂಧಿತ ಆರೋಪಿ. ಶಂಕರಪ್ಪ ಎಂಬುವರಿಗೆ ಸುಮಾರು 20 ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಹುಂಡೈ ಶೋ ರೂಂನಲ್ಲಿ ಕಾರ್ ಸರ್ವೀಸ್​ಗೆ ಬಂದಿದ್ದ ನವೀನ್, ತಾನೊರ್ವ ಜಯನಗರ ಎಸಿಪಿ ಎಂದು ಹೇಳಿಕೊಂಡು ಶಂಕರಪ್ಪನನ್ನು ಪರಿಚಯಿಸಿಕೊಂಡಿದ್ದ.
ಪರಿಚಯದ ಬಳಿಕ ಶಂಕರಪ್ಪನಿಗೆ ಕಾರು ನೀಡುವುದಾಗಿ ನಂಬಿಸಿ, ಬೇರೆ ಬೇರೆ ಅವಶ್ಯಕತೆಗಳಿಗೆ ಹಣ ತೆಗೆದುಕೊಂಡು ಇದೀಗ ವಂಚನೆ ಮಾಡಿದ್ದಾನೆ. ಆರೋಪಿ ನವೀನ್​, ಹಾವೇರಿ ಜಿಲ್ಲೆಯ ಇನ್ಸ್​ಪೆಕ್ಟರ್ ಒಬ್ಬರ ಮಗನೆಂದು ತಿಳಿದುಬಂದಿದೆ.
ಸದ್ಯ ಶಂಕರಪ್ಪ ಅವರು ನವೀನ್​ ವಿರುದ್ಧ ಕೆಂಗೇರಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ನಕಲಿ ಎಸಿಪಿ ನವೀನ್​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಬೈಕ್​ ಸವಾರ ದುರಂತ ಸಾವು, ಸ್ಥಳೀಯರ ಆಕ್ರೋಶ

ತನ್ನ 10 ತಿಂಗಳ ಮಗುವನ್ನು ಕೆಳಗಿಟ್ಟು ಕಾಲುವೆಗೆ ಜಿಗಿದು ಮುಳುಗುತ್ತಿದ್ದ ಯುವಕನನ್ನು ರಕ್ಷಿಸಿದ ದಿಟ್ಟ ಮಹಿಳೆ!

ಬೆಂಗಳೂರಲ್ಲಿ ಗಂಡನ ಕೊಂದು ಮಂಡ್ಯದಲ್ಲಿ ಸಿಕ್ಕಿಬಿದ್ದ ಪತ್ನಿ: ಪೊಲೀಸ್​ ತನಿಖೆಯಲ್ಲಿ ಕೊಲೆ ರಹಸ್ಯ ಬಯಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seven =
Remember me
