ಬೆಂಗಳೂರು:ಚರ್ಚ್ ಬಾಗಿಲು ಮುಚ್ಚಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಘಟನೆ ನಡೆದ ಒಂದು ತಿಂಗಳ ಬಳಿಕ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ವಿಲಿಯಂ ಪ್ರಕಾಶ್ ಬಂಧಿತ ಆರೋಪಿ. ಈ ಸೆಪ್ಟೆಂಬರ್ 16 ರಂದು ಚರ್ಚ್​ನ ಬಾಗಿಲು ಮುಚ್ಚಲು ಹೋಗಿದ್ದ ಗೃಹಿಣಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಘಟನೆ ಸೆಂಟ್ ಚಾಪೆಲ್ ಚರ್ಚ್​ನಲ್ಲಿ ನಡೆದಿತ್ತು.
ಸಂತ್ರಸ್ತ ಮಹಿಳೆಯ ಪತಿ ಚರ್ಚ್​ನಲ್ಲಿ ಕೆಲಸ ಮಾಡ್ತಿದ್ದು, ಪತಿಯ‌ ಸೂಚನೆ ಮೇರೆಗೆ ಮಹಿಳೆ ಚರ್ಚ್ ಬಾಗಿಲು ಮುಚ್ಚಲು ಹೋಗಿದ್ದರು. ಆ ವೇಳೆ ಆಕೆಯನ್ನು ಹಿಂಬಾಲಿಸಿದ್ದ ಆರೋಪಿ ವಿಲಿಯಂ ಪ್ರಕಾಶ್, ಚಾಕುವಿಂದ ಬೆದರಿಸಿ ಅತ್ಯಾಚಾರಕ್ಕೆ ಮುಂದಾಗಿದ್ದ. ಈ ವೇಳೆ ಸಹಾಯಕ್ಕಾಗಿ ಕೂಗಾಡಿದ್ದ ಮಹಿಳೆ, ಆರೋಪಿಯನ್ನು ತಳ್ಳಿ ತಪ್ಪಿಸಿಕೊಂಡಿದ್ದರು.
ಕೂಗಾಡಿದ್ದರಿಂದ ಜನ ಬಂದುಬಿಡುತ್ತಾರೆ ಎಂಬ ಭಯದಿಂದ ವಿಲಿಯಂ ಪ್ರಕಾಶ್ ಸಹ ಸ್ಥಳದಿಂದ ಕಾಲ್ಕಿತ್ತಿದ್ದ. ಗಣೇಶ ಮೆರವಣಿಗೆ ಬರುವಾಗ ಮೆರವಣಿಗೆಯಲ್ಲಿ ಸೇರಿಕೊಂಡು ತಲೆಮರೆಸಿಕೊಂಡಿದ್ದ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಅಶೋಕನಗರ ಪೊಲೀಸರು, ಘಟನೆ ನಡೆದ ತಿಂಗಳ ಬಳಿಕ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಮಾವಿನ ಹಣ್ಣುಗಳನ್ನು ಕದ್ದ ಪೊಲೀಸ್​ ಅಧಿಕಾರಿಯ ಸುಳಿವೇ ಇಲ್ಲ: ಕೋರ್ಟ್​ ಮೆಟ್ಟಿಲೇರಿದ ಹಣ್ಣು ಮಾರಾಟಗಾರ

ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಚಿತ್ರೀಕರಿಸಿದ್ದಕ್ಕೆ ಯುವಕರಿಬ್ಬರನ್ನು ಕೂಡಿಹಾಕಿ ನರ್ಸ್​ಗಳಿಂದ ಥಳಿತ!

ವೈದ್ಯರ ಸೋಗಿನಲ್ಲಿ ರೋಗಿಗಳಿಗೆ ಚಿಕಿತ್ಸೆ: ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಲ್ಯಾಬ್ ಟೆಕ್ನಿಷಿಯನ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − four =
Remember me
