ಬೆಂಗಳೂರು:ಜುಲೈ 7 ರಂದು ಮಾರತ​ಹಳ್ಳಿ ಲಾಡ್ಜ್​ನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ಸ್ಫೋಟಕ ಸಂಗತಿಯೊಂದು ಬಯಲಿಗೆ ಬಂದಿದೆ.
ರಾಜಗೋಪಾಲ್ (24) ಮೃತ ವ್ಯಕ್ತಿ. ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪದ ಮೇಲೆ ತಮಿಳು ವಣ್ಣನ್ ಎಂಬಾತನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರ ನಡುವೆ ಸಲಿಂಗಕಾಮ ಸಂಬಂಧವಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ.
ವಿವರಣೆಗೆ ಬರುವುದಾದರೆ, ಜುಲೈ 4 ರಂದು ರಾಜಗೋಪಾಲ್, ಮಾರತಹಳ್ಳಿಯ ರಿಲ್ಯಾಕ್ಸ್ ಲಾಡ್ಜ್​ನಲ್ಲಿ ರೂಂ ಬುಕ್ ಮಾಡಿದ್ದ. ಈ ವೇಳೆ ರಾಜಗೋಪಾಲ್​ ಜತೆಗೆ ತಮಿಳುವಣ್ಣನ್​ ಸಹ ಇದ್ದ. ಎರಡು ದಿನದ ಬಳಿಕ ರೂಂ ರಿನೀವಲ್ ಮಾಡಿರಲಿಲ್ಲ. ಇದರಿಂದ ಅನುಮಾನಗೊಂಡ ಲಾಡ್ಜ್​ ಸಿಬ್ಬಂದಿ ಕೋಣೆಯನ್ನು ಪರಿಶೀಲಿಸಿದಾಗ ರಾಜಗೋಪಾಲ್​ ಶವ ಪತ್ತೆಯಾಗಿತ್ತು.
ತಕ್ಷಣ ಲಾಡ್ಜ್​ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಕುತ್ತಿಗೆ ಹಿಸುಕಿ ಉಸಿರು ಗಟ್ಟಿಸಿ ಕೊಲೆಯಾಗಿದೆ ಎಂಬುದು ಬಯಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರಿಗೆ ರಾಜಗೋಪಾಲ್​ ಜೊತೆ ತಮಿಳು ವಣ್ಣನ್​ ಇದ್ದ ಎಂಬ ವಿಚಾರ ಗೊತ್ತಾಯಿತು. ಆತ ಎಸ್ಕೇಪ್​ ಆಗಿರುವ ಸಂಗತಿಯು ತಿಳಿಯಿತು. ನಂತರ ಆತನ ಬಂಧನಕ್ಕೆ ಬಲೆ ಬೀಸಿದ ಪೊಲೀಸರು, ಅದರಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ತಮಿಳು ವಣ್ಣನ್​ ವಿಚಾರಣೆ ವೇಳೆ ಸಾಕಷ್ಟು ಸ್ಫೋಟಕ ಸಂಗತಿ ಬಯಲಿಗೆ ಬಂದಿದೆ. ಕಳೆದ 4 ವರ್ಷಗಳಿಂದ ಇಬ್ಬರು ಸಲಿಂಗಕಾಮ ಸಂಬಂಧ ಹೊಂದಿದ್ದರು. ಕೊಲೆ ಆರೋಪಿ ತಮಿಳುವಣ್ಣನ್ ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ. ಇದಕ್ಕೂ ಮೊದಲು ತಮಿಳುನಾಡಿನ ಚೆನ್ನೈನಲ್ಲಿ ಆಸ್ಪತ್ರೆಯೊಂದರಲ್ಲಿ ಇಬ್ಬರು ಕೆಲಸ ಮಾಡ್ತಿದ್ದರು. ಇಬ್ಬರಿಗೂ ಮದುವೆ ಆಗಿತ್ತು. ಆದಾಗ್ಯೂ ತಮ್ಮ ಸಂಬಂಧ ಮುಂದುವರಿಸಿದರಿಂದ ಇಬ್ಬರ ದಾಂಪತ್ಯವೂ ಮುರಿದುಬಿದ್ದಿತ್ತು.
ಮದುವೆ ಮುರಿದು ಬಿದ್ದ ಬಳಿಕ ಆರೋಪಿ ತಮಿಳು ವಣ್ಣನ್ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಲ್ಯಾಬ್​ನಲ್ಲಿ ಕೆಲಸ ಮಾಡ್ತಿದ್ದ. ಚೆನ್ನೈನಿಂದ ಆಗಾಗ ರಾಜಗೋಪಾಲ್​ನನ್ನು ಮಾರತಹಳ್ಳಿಯ ಲಾಡ್ಜ್​ಗೆ​ ಕರೆಸಿಕೊಳ್ತಿದ್ದ ಎಂಬುದು ಸಂಗತಿ ತಿಳಿದುಬಂದಿದೆ. ಆದರೆ, ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂಬುದು ಇನ್ನು ತಿಳಿದಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.(ದಿಗ್ವಿಜಯ ನ್ಯೂಸ್​)
ಬಿಬಿಎಂಪಿ ಲಾರಿಗೆ ದಂಪತಿ ಬಲಿ: ಇಬ್ಬರು ಹೆಣ್ಣು ಮಕ್ಕಳ ನೆರವಿಗೆ ನಿಂತ ಟ್ರಾಫಿಕ್ ಪೊಲೀಸರು

ಕಾರುಗಳ ಕಳ್ಳಸಂಚಾರ; ವೈಟ್​ಬೋರ್ಡ್ ವಾಹನಗಳನ್ನು ಟ್ಯಾಕ್ಸಿಯಾಗಿ ಬಳಸಿ ಅಕ್ರಮ

ಭಾರತೀಯ ಕಂಪನಿಗಳಿಂದ ಅಮೆರಿಕದಲ್ಲಿ 2 ಲಕ್ಷ ಉದ್ಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 8 =
Remember me
