ಬೆಂಗಳೂರು:ಚೆನ್ನೈ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನ ಮಹಿಳೆಗೆ ವಿಮಾನದ ಒಳಗಡೆ ಕಿರುಕುಳ ಕೊಟ್ಟು ಇದೀಗ ಜೈಲು ಪಾಲಾಗಿದ್ದಾನೆ. ಈ ಕುರಿತ ಒಂದು ವರದಿ ಇಲ್ಲಿದೆ.
ಕೃಷ್ಣನ್ ಬಜೇನಿಯಾ ಬಂಧಿತ ಆರೋಪಿ. ಮೂಲತಃ ಚೈನೈ ಮೂಲದವನಾದ ಈತ ವಿಮಾನದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಇದೀಗ ಜೈಲು ಸೇರಿದ್ದಾನೆ. ಮಹಿಳೆಯೊಬ್ಬರು ಮಾರ್ಕೆಟಿಂಗ್ ಕೆಲಸಕ್ಕೆಂದು ಚನ್ನೈಗೆ ಹೋಗಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. ಇದೇ ಏಪ್ರಿಲ್ 18ರ ರಾತ್ರಿ 10 ಗಂಟೆ ಸುಮಾರಿಗೆ ಇಂಡಿಗೋ 6e6225 ವಿಮಾನದಲ್ಲಿ ಮಹಿಳೆ ಬರುತ್ತಿದ್ದಾಗ, ಹಿಂಬದಿ ಸೀಟ್‌ ನಂ-20a ರಲ್ಲಿ‌ ಕುಳಿತಿದ್ದ ಚನ್ನೈ ಮೂಲದ ಕೃಷ್ಣನ್.ಪಿ. ಎಂಬಾತ ಮುಂದಿನ ಸೀಟಿನಲ್ಲಿ‌ ಕುಳಿತಿದ್ದ ಮಹಿಳೆಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಮಹಿಳೆ ಕೂಡಲೇ ಎಚ್ಚೆತ್ತು ವಾರ್ನಿಂಗ್ ಮಾಡಿದರೂ ಬಿಡದ ಈ ಅಸಾಮಿ ಮತ್ತೆ ಅದೇ ಚಾಳಿ ಮುಂದುವರೆಸಿ ಪೊಲೀಸರ ಅತಿಥಿಯಾಗಿದ್ದಾನೆ.
ವಿಮಾನದಲ್ಲಿ ರಾತ್ರಿ 10ರ ನಂತರ ಕೃಷ್ಣನ್ ಇದೇ ರೀತಿ ಮೂರ್ನಾಲ್ಕು ಸಲ‌ ಮಹಿಳೆ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ವಿಮಾನದ ಕ್ಯಾಬಿನ್ ಕ್ರ್ಯೂಗೆ ದೂರು ನೀಡಿದ್ದರು. ಈ ವೇಳೆ ಕೃಷ್ಣನ್ ಜತೆ ಕೂತಿದ್ದ ದಂಪತಿ ಸಹ ಈತನ ಪಾಪ ಕರ್ಮದ ಬಗ್ಗೆ ಸಿಬ್ಬಂದಿಗೆ ತಿಳಿಸಿದ್ದರಂತೆ. ಹೀಗಾಗಿ ವಿಮಾನದಿಂದ ಇಳಿದ ಕೂಡಲೇ ಕೆಂಪೇಗೌಡ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾಳೆ. ದೂರು ಪಡೆದ ಪೊಲೀಸರು ಕೃಷ್ಣನ್ ನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಖಾಸಗಿ ಕೆಲಸಕ್ಕೆ ಅಂತ ಬಂದಿದ್ದ ಕೃಷ್ಣನ್ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟು ಇದೀಗ ಜೈಲು ಸೇರಿದ್ದಾನೆ.(ದಿಗ್ವಿಜಯ ನ್ಯೂಸ್​)
ಬಸ್ಸಿನೊಳಗೆ ಕುಸಿದು ಬಿದ್ದ ಯುವಕನಿಗೆ ಪುನರ್ಜನ್ಮ ನೀಡಿದ ನರ್ಸ್​ಗೆ ಮೆಚ್ಚುಗೆಯ ಮಹಾಪೂರ!

ಅಪಾಯಕಾರಿ ಓವರ್​ಟೇಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಸಹೋದರಿಯರಿಬ್ಬರಿಗೆ ಪ್ರಭಾವಿ ಪುತ್ರನಿಂದ ಥಳಿತ!

ತೋಟದಲ್ಲಿ ಪಂಪ್​ಸೆಟ್​ ಕದಿಯಲು ಬಂದ ಶಂಕೆಯಲ್ಲಿ ದಲಿತ ಯುವಕರಿಬ್ಬರ ಹತ್ಯೆ: 13 ಮಂದಿ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
