ಬೆಂಗಳೂರು:ಯಾರೇ ಆಗಲಿ ಮೊಬೈಲ್​, ಲ್ಯಾಪ್​ಟಾಪ್​ಗಳನ್ನು ರಿಪೇರಿಗೆ ಕೊಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ವೈಯಕ್ತಿಕ ಮಾಹಿತಿಗಳು, ಫೋಟೋ ಅಥವಾ ವಿಡಿಯೋಗಳಿದ್ದರೆ ಅವುಗಳ ಬಗ್ಗೆ ಗಮನಹರಿಸಬೇಕು. ಸ್ವಲ್ಪ ಯಾಮಾರಿದರೆ ಏನಾಗಲಿದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಲ್ಯಾಪ್‌ಟಾಪ್ ರಿಪೇರಿ ಮಾಡಲು ಮನೆಗೆ ಬಂದಿದ್ದಾಗ ಮಹಿಳೆಯ ಖಾಸಗಿ ಪೋಟೋ ಪಡೆದು ಬ್ಲಾಕ್​ಮೇಲ್ ಮಾಡಿದ ಆರೋಪದ ಮೇಲೆ ಬಾಗಲಗುಂಟೆ ಪೊಲೀಸರು ಖತರ್ನಾಕ್​ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಪ್ರವೀಣ್​ ರಾವ್​ ಎಂದು ಗುರುತಿಸಲಾಗಿದೆ. ಈತ ದಾಸರಹಳ್ಳಿಯ ಮಹೇಶ್ವರಿ ನಗರದ ನಿವಾಸಿ. ಲ್ಯಾಪ್​ಟಾಪ್​ ರಿಪೇರಿ ಮಾಡಿಕೊಡಲು ಬಂದವನು ಅದರಲ್ಲಿದ್ದ ಮಹಿಳೆಯ ಖಾಸಗಿ ಫೋಟೋಗಳನ್ನು ಪಡೆದುಕೊಂಡು ಬ್ಲಾಕ್​ಮೇಲ್​ ಮಾಡಲು ಆರಂಭಿಸಿದ್ದ. ಅಲ್ಲದೆ, ಖಾಸಗಿ ಪೋಟೋಗಳನ್ನು ಮಹಿಳೆಯ ಪತಿಯ ಮೊಬೈಲ್​ಗೆ ಶೇರ್ ಮಾಡಿದ್ದ.
ಠಾಣೆಗೆ ದೂರು ಕೊಟ್ಟರೆ ಜೀವ ತಗೆಯುವುದಾಗಿ ಬೆದರಿಕೆ ಹಾಕಿದ್ದ. ಕೊನೆಗೂ ಆತನ ಕಾಟ ತಡೆಯಲಾರದೆ ಮಹಿಳೆ ದೂರು ನೀಡಿದ್ದಳು. ಕಾರ್ಯಾಚರಣೆಗೆ ಇಳಿದ ಬಾಗಲಗುಂಟೆ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಮದುವೆ ಮುಗಿಸಿ ಬರುವಾಗ ನಿಂತಿದ್ದ ಟ್ರಕ್​ಗೆ ಕಾರು ಡಿಕ್ಕಿ: ಸ್ಥಳದಲ್ಲೇ 8 ಮಂದಿ ದುರ್ಮರಣ, ಮೂವರ ಸ್ಥಿತಿ ಗಂಭೀರ

ಬಾಡಿಗೆ ಕಾರಿನೊಳಗೆ ಪೆಟ್ರೋಲ್​ ಸುರಿದುಕೊಂಡು ಪ್ರೇಮಿಗಳಿಬ್ಬರ ದುರಂತ ಸಾವು: ಉಡುಪಿಯಲ್ಲಿ ದುರ್ಘಟನೆ

ನಟ ಅಲ್ಲು ಅರ್ಜುನ್​ ವರದಕ್ಷಿಣೆ ತೆಗೆದುಕೊಂಡಿದ್ದಾರಾ? ಅಚ್ಚರಿಯ ಹೇಳಿಕೆ ನೀಡಿದ ಪತ್ನಿ ಸ್ನೇಹಾ ರೆಡ್ಡಿ ತಂದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
