ಬೆಂಗಳೂರು:ರಾಜ್ಯಸಭಾ ಚುನಾವಣೆಯ ಮತದಾನ ಆರಂಭವಾಗಿದ್ದು, ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವಿನ ಪೈಪೋಟಿ ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಇದರ ನಡುವೆ ಜೆಡಿಎಸ್​ ನಾಯಕ ಸಿಎಂ ಇಬ್ರಾಹಿಂ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಮಾಧ್ಯಮದವರ ಜತೆ ಮಾತನಾಡಿದ ಸಿಎಂ ಇಬ್ರಾಹಿಂ, ಬೇರೆಯವರು ತಾಳಿ ಕಟ್ಟುವವರಿಗೆ ಲವ್ ಲೆಟರ್ ಬರೆದ್ರೇ ಆಗುತ್ತಾ‌? ಪಕ್ಕದ ಮನೆಯ ಧರ್ಮಪತ್ನಿಗೆ ಪತ್ರ ಬರೆಯುತ್ತೀರಾ? ಇದು ಅಪರಾಧ ಅಲ್ವಾ? ಇದು ನೈತಿಕತೆಯಾ? ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕದಲ್ಲಿ ಹೊಸ ಇತಿಹಾಸ ಶುರುವಾಗುತ್ತದೆ. ಬಿಜೆಪಿನಾ ಸೋಲಿಸಲೇಬೇಕು ಅಂತಿದ್ರೆ ಮೊದಲ ಪ್ರಾಶಸ್ತ್ಯ ಮತ ನಿಮಗೆ ಹಾಕೊಂಡು ಎರಡನೇ ಪ್ರಾಶಸ್ತ್ಯ ಮತ ನಮಗೆ ಕೊಡಿ. ಆದರೆ, ಅದನ್ನು ಕೊಡೋಕೆ ನೀವು ತಯಾರಿಲ್ಲ. ಎರಡನೇ ಮತ ಕೊಡುವುದಕ್ಕೆ ನಾವು ತಯಾರಿದ್ದೇವೆ ಎಂದು ಇಬ್ರಾಹಿಂ ಹೇಳಿದರು.
ಹಿಂದಿನ ಚರಿತ್ರೆ ಇದೆ ನಂಗೆ ಗೊತ್ತಿದೆ. ನಮ್ಮನ್ನು ಪೀಡಿಸಬೇಡಿ ನಮ್ಮ ಪಾಡಿಗೆ ನಮ್ಮನ್ನು ಬಿಡಿ. ನಾವು ಬಿಚ್ಚೋಕೆ ಶುರುಮಾಡಿದ್ರೇ ನಿಮಗೆ ಓಡಾಡೋಕೆ ಕಷ್ಟ ಆಗುತ್ತದೆ ಎಂದು ಸಿದ್ದರಾಮಯ್ಯಗೆ ಸಿಎಂ ಇಬ್ರಾಹಿಂ ಎಚ್ಚರಿಕೆ ನೀಡಿದರು.(ದಿಗ್ವಿಜಯ ನ್ಯೂಸ್​)
ಈ ಯುವತಿ ತನ್ನನ್ನು ತಾನೇ ಮದ್ವೆಯಾಗಿದ್ದರ ಹಿಂದಿನ ಉದ್ದೇಶ ಇದೇನಾ? ಅನುಮಾನಕ್ಕೆ ಪುಷ್ಟಿ ನೀಡಿದ ಅಂಶವಿದು!

ಸ್ವಿಮ್ಮಿಂಗ್​ ಪೂಲ್​ ಒಳಗೆ ನೂಕಿದ ಮ್ಯಾನೇಜರ್​ಗೆ ಚಪ್ಪಲಿ ಏಟು ಕೊಟ್ಟ ನಟಿ ಸನ್ನಿ ಲಿಯೋನ್​! ವಿಡಿಯೋ ವೈರಲ್​

ವಿಮಾನ ಸಿಬ್ಬಂದಿಯೊಬ್ಬರಿಂದ ಅಸಭ್ಯ ವರ್ತನೆ: ಟ್ವೀಟ್​ ಮೂಲಕ ನೋವು ಬಿಚ್ಚಿಟ್ಟ ನಟಿ ಪೂಜಾ ಹೆಗ್ಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − thirteen =
Remember me
