ಬೆಂಗಳೂರು:ನಡು ರಸ್ತೆಯಲ್ಲೇ ವಿದ್ಯಾರ್ಥಿನಿಯರು ಕೈ ಕೈ ಮಿಲಾಯಿಸಿರುವ ಘಟನೆ ನಗರದ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ನಡೆದಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ವಿಡಿಯೋ ವೈರಲ್​ ಆದ ಬಳಿಕ ಈ ಪ್ರಕರಣ ಎಲ್ಲರ ಗಮನ ಸೆಳೆದಿದೆ. ಆದರೆ, ಜಡೆ ಜಗಳದ ಹಿಂದಿರುವ ಕಾರಣ ಏನೆಂಬುದು ಯಾರಿಗೂ ತಿಳಿದಿರಲಿಲ್ಲ. ಇದೀಗ ಆ ಕಾರಣ ಬಯಲಾಗಿದೆ.
ಸುಮಾರು 20 ವಿದ್ಯಾರ್ಥಿನಿಯರು ಸೆಂಟ್ ಮಾರ್ಕ್ಸ್​ನ ನಡು ರಸ್ತೆಯಲ್ಲೇ ಬಡಿದಾಡಿಕೊಂಡಿದ್ದರು. ಕೈಯಲ್ಲಿ ಬೇಸ್​ ಬಾಲ್​ ಬ್ಯಾಟ್ ಹಾಗೂ ಹಾಕಿ ಸ್ಟಿಕ್​​ ಹಿಡಿದು ಹೊಡೆದಾಡಿಕೊಂಡಿದ್ದರು. ವಿದ್ಯಾರ್ಥಿನಿಯರ ಪಾಲಕರು ಕೂಡ ಗಲಾಟೆಯಲ್ಲಿ ಭಾಗಿಯಾಗಿದ್ದರು. ಎರಡು ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿಗಳ ನಡುವೆ ಈ ಮಾರಾಮಾರಿ ನಡೆದಿತ್ತು.
ದಿಗ್ವಿಜಯ ನ್ಯೂಸ್​ಗೆ ಬಂದಿರುವ ಮಾಹಿತಿ ಪ್ರಕಾರ ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಸುಮಾರು 20 ರಿಂದ 25 ನಿಮಿಷಗಳ ಕಾಲ ವಿದ್ಯಾರ್ಥಿನಿಯರು ಕಿತ್ತಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ 5ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಾಯಗಳಾಗಿವೆ. ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದು ಎರಡು ಪ್ರತಿಷ್ಠಿತ ಶಾಲೆಗಳಿಗೂ ಮಾಹಿತಿ ಸಿಕ್ಕಿಲ್ಲ. ಆದರೆ, ಮೂಲಗಳ ಪ್ರಕಾರ ಶಾಲೆಯ ರ‍್ಯಾಂಕಿಂಗ್​​ ವಿಚಾರದಲ್ಲಿ ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ. ರ‍್ಯಾಂಕಿಂಗ್​​ನಲ್ಲಿ ನಮ್ಮ ಶಾಲೆ ಗ್ರೇಟ್​ ಎನ್ನುವ ವಿಚಾರದಲ್ಲಿ ಎರಡು ಪ್ರತಿಷ್ಠಿತ ಶಾಲೆಗಳ ನಡುವೆ ಆರಂಭವಾದ ವಾಗ್ವಾದ ಜಡೆ ಜಗಳದಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ.
ಗಲಾಟೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿ ಕೇಸ್ ದಾಖಲಾಗಿಲ್ಲ. ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ವಿಡಿಯೋವಂತೂ ವೈರಲ್​ ಆಗಿದೆ.(ದಿಗ್ವಿಜಯ ನ್ಯೂಸ್​)
ಚೇತನಾ ರಾಜ್​ ಸಾವು ಪ್ರಕರಣ: ತಲೆಯಲ್ಲಿ ಕೂದಲು ಇಲ್ಲದಿದ್ರೂ… ಸ್ಯಾಂಡಲ್​ವುಡ್​ ವಿರುದ್ಧ ಸಮರ ಸಾರಿದ ನಟಿ ರಮ್ಯಾ!

ಮೈಸೂರಲ್ಲಿ ವಿಕೃತ ಕಾಮಿ: ಈತನ ಗಾಳಕ್ಕೆ ಬಿದ್ದ ಯುವತಿಯರ ಪಾಡು ಹೇಳತೀರದು… ಮೊಬೈಲ್​ ನೋಡಿ ಬೆಚ್ಚಿಬಿದ್ದ ಪೊಲೀಸರು

ಬಾಲಿವುಡ್​ ಬೆಡಗಿಯರ ಬುಟ್ಟಿಗೆ ಬೀಳಿಸಿ ಕಂಬಿ ಎಣಿಸ್ತಿರೋ ಈತನಿಗೆ ನೆನಪಾಗ್ತಿದ್ದಾಳಂತೆ ಪತ್ನಿ! ಜೈಲಲ್ಲೇ ಉಪವಾಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 9 =
Remember me
