ಬೆಂಗಳೂರು:ರಂಗಭೂಮಿ ಕಲಾವಿದೆಯೊಬ್ಬರ ಮೇಲೆ ಆ್ಯಸಿಡ್​ ದಾಳಿ ಮಾಡಿರುವ ಘಟನೆ ನಗರದ ನಂದಿನಿಲೇಔಟ್​ನ ಗಣೇಶ ಬ್ಲಾಕ್​ನಲ್ಲಿ ನಡೆದಿದೆ. ಮಾರ್ಚ್​ 18ರಂದು ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ಹೆಸರು ದೇವಿ. ಮಾ. 18 ರಂದು ಮನೆಯ ಜಗಲಿಯ ಮೇಲೆ‌ ಮಲಗಿದ್ದ ವೇಳೆ ಆ್ಯಸಿಡ್ ದಾಳಿ ಮಾಡಲಾಗಿದೆ. ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಿ ಅವರು ಈ ಹಿಂದೆ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅನಾರೋಗ್ಯದ ಕಾರಣ ನೀಡಿ ಬಿಎಂಟಿಸಿ ನಿರ್ವಾಹಕ ಹುದ್ದೆ ತೊರೆದಿದ್ದಾರೆ.
ದೇವಿ ಅವರು ರಂಗಭೂಮಿ ಕಲಾವಿದೆಯಾಗಿದ್ದು, ರಂಗಭೂಮಿಯ ಸಹಪಾಠಿಗಳಿಂದಲೇ ಈ ದುಷ್ಕ್ರತ್ಯ ನಡೆದಿದೆ. ಆರೋಪಿಗಳಾದ ರಮೇಶ್​, ಸ್ವಾತಿ ಮತ್ತು ಯೋಗೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ನಂದಿನಿಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಸಾರ ಹಾಳು ಮಾಡಿದ್ದ ಕೋಪಕ್ಕೆ ಆ್ಯಸಿಡ್ ಅಟ್ಯಾಕ್10 ಸಾವಿರ ಹಣಕ್ಕೆ ಸುಪಾರಿ ಕೊಟ್ಟು ಆ್ಯಸಿಡ್ ದಾಳಿ ನಡೆಸಲಾಗಿದೆ. ಯೋಗೇಶ್ ಎಂಬಾತನಿಗೆ ಆರೋಪಿ ರಮೇಶ್ ಸುಪಾರಿ ನೀಡಿದ್ದ. ದೇವಿಯಿಂದ ರಮೇಶ್ ಸಂಸಾರ ಹಾಳಾಗಿದೆ ಎಂಬ ಆರೋಪ ಇದೆ. ದೇವಿಯ ಮಾತು ಕೇಳಿ ರಮೇಶನನ್ನು ಪತ್ನಿ ಮತ್ತು ಮಕ್ಕಳು ಬಿಟ್ಟು ಹೋಗಿದ್ದಾರಂತೆ. ಇದೇ ನೋವನ್ನ ತನ್ನ ಗೆಳತಿ ಸ್ವಾತಿ ಬಳಿ ರಮೇಶ್​ ಹೇಳಿಕೊಂಡಿದ್ದ. ಈ ವೇಳೆ ಯೋಗೇಶ್​ನನ್ನ ಸ್ವಾತಿ ಪರಿಚಯ ಮಾಡಿಕೊಟ್ಟಿದ್ದಳು.
ನಂತರ ಆರೋಪಿಗಳು ಸಂಚು ರೂಪಿಸಿದ್ದರು. ಈ ವೇಳೆ ಆರೋಪಿಗಳಿಗೆ ದೇವಿ ಮನೆಯನ್ನ ಸ್ವಾತಿ ತೋರಿಸಿಕೊಟ್ಟಿದ್ದಳು. ಮೂರು ಬಾರೀ ಆ್ಯಸಿಟ್ ಹಾಕಲು ಸಂಚು ನಡೆದಿತ್ತು. ಈ ವೇಳೆ ಮಲಗಿದ್ದ ಚಾಪೆಗೆ ಆ್ಯಸಿಡ್ ಹಾಕಿ ಬಂದಿದ್ದರು. ಇದರಿಂದ ದೇವಿ ಮುಖ ಹಾಗೂ ಬೆನ್ನಿಗೆ ತಾಗಿ ಗಂಭೀರ ಗಾಯವಾಗಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದೇವಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಭಿಕ್ಷುಕನ ಜತೆ ಜಿಮ್​ ಟ್ರೈನರ್​ ಪತ್ನಿಯ ಸರಸ: ಆಕೆ ಹೇಳಿದ್ದನ್ನು ಕೇಳಿ ಗಂಡನೇ ಶಾಕ್, ಸಿಸಿಟಿವಿಯಲ್ಲಿ ಕಳ್ಳಾಟ ಸೆರೆ!​

ನ್ಯಾಯಾಧೀಶರಿಗೆ ವೈ ಶ್ರೇಣಿಯ ಭದ್ರತೆ: ಸೋಕಾಲ್ಡ್ ಸೆಕ್ಯುಲರ್​ಗಳು ಎಲ್ಲಿ ಎಂದು ಸಿಎಂ ಬೊಮ್ಮಾಯಿ ಆಕ್ರೋಶ

ತಮನ್ನಾ ಹರಿಬಿಟ್ಟ ಬಿಕಿನಿ​ ವಿಡಿಯೋ ನೋಡಿ ದಂಗಾದ ನೆಟ್ಟಿಗರು: ಮಿಲ್ಕಿ ಬ್ಯೂಟಿಯ ಹಾಟ್​ ಅವತಾರ ವೈರಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
