ಬೆಂಗಳೂರು:ನಗರದ ವಾಹನ ಚಾಲಕರು ತುಂಬಾ ಎಚ್ಚರಿಕೆ ವಹಿಸಬೇಕಾದ ಸುದ್ದಿ ಇದು. ಏಕೆಂದರೆ, ನೀವು ತಪ್ಪು ಮಾಡದೇ ಇದ್ರೂ ನಿಮ್ಮ ವಾಹನಕ್ಕೆ ದಂಡ ಬಿದ್ದಿರುತ್ತದೆ. ಅಂಥದ್ದೊಂದು ಖತರ್ನಾಕ್​ ಕೃತ್ಯ ನಗರದಲ್ಲಿ ನಡೆಯುತ್ತಿದ್ದು, ಇದೀಗ ಬೆಳಕಿಗೆ ಬಂದಿದೆ.
ಹೌದು, ನಗರದಲ್ಲಿ ನಕಲಿ‌ ನಂಬರ್ ಪ್ಲೇಟ್ ಹಾವಳಿ ಹುಟ್ಟಿಕೊಂಡಿದೆ. ಯಾರದ್ದೋ ಹೆಸರಿನಲ್ಲಿರುವ ನಂಬರ್ ಇನ್ಯಾವುದೋ ವಾಹನಕ್ಕೆ ಬಳಕೆ ಮಾಡಲಾಗುತ್ತಿದೆ. ದಂಡದ ರಶೀದಿ ಬಂದಾಗಲೇ ಈ ಬಗ್ಗೆ ವಾಹನ ಮಾಲೀಕರಿಗೆ ಗೊತ್ತಾಗುತ್ತಿದ್ದು, ಬೆಂಗಳೂರು ಸಂಚಾರಿ ಪೊಲೀಸರಿಗೆ ನಿರಂತವಾಗಿ ದೂರು ಬರುತ್ತಿದೆ.
ಬಜಾಜ್ ಡಿಸ್ಕವರ್​ಗೆ ನೊಂದಣಿಯಾದ ಸೇಮ್ ನಂಬರ್ ಅಪಾಚೆ ವಾಹನಕ್ಕಿದ್ದು, ಆಂಧ್ರ ಪ್ರದೇಶದಲ್ಲಿದ್ದವರಿಗೂ ದಂಡ ಬಿದ್ದಿದೆ. ಜೀವನ್​ ಎಂಬುವರು ಎರಡು ವರ್ಷದಿಂದ ಆಂಧ್ರದಲ್ಲೆ ವಾಸ ಮಾಡುತ್ತಿದ್ದಾರೆ. ಅವರ ಬೈಕ್ ಕೂಡ ಅವರ ಬಳಿಯೇ ಇದೇ. ಆದರೆ ಬೆಂಗಳೂರು ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಆಗಿದೆ ಎಂದು ದಂಡ ಬಿದ್ದಿದೆ. ಇದನ್ನು ಗಮನಿಸಿರುವ ಜೀವನ್​ ಟ್ವೀಟ್​ ಮೂಲಕ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ಒಂದು ತಿಂಗಳಿನಲ್ಲಿ ಈ ಸಂಬಂಧ ನೂರಾರು ದೂರುಗಳು ದಾಖಲಾಗಿದೆ. ಕಿಡಿಗೇಡಿಗಳು ನಕಲಿ ನಂಬರ್ ಪ್ಲೇಟ್ ಬಳಸಿ ವಾಹನ ಬಳಸುತ್ತಿದ್ದಾರೆ. ನಕಲಿ ನಂಬರ್ ಪ್ಲೇಟ್ ಬಳಸಿ ಅಪರಾಧ ಕೃತ್ಯ ಎಸಗಿರುವ ಸಾಧ್ಯತೆಯೂ ಇದೆ. ಸದ್ಯ ನಕಲಿ‌ ನಂಬರ್ ಪ್ಲೇಟ್ ಹಾವಳಿಗೆ ಕಡಿವಾಣ ಹಾಕಬೇಕಿದೆ.(ದಿಗ್ವಿಜಯ ನ್ಯೂಸ್​)
ಅಪ್ರಾಪ್ತೆ ಮೇಲೆ ಅತ್ಯಾಚಾರ​ ಪ್ರಕರಣ: ಶಾಕಿಂಗ್​ ಹೇಳಿಕೆ ಕೊಟ್ಟ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ತಿಂಗಳ ಹಿಂದಷ್ಟೇ ಜನಿಸಿದ್ದ ಮುದ್ದು ಮಗುವಿಗೆ ತಂದೆಯಾಗಿದ್ದ ಪೊಲೀಸ್​ ಪೇದೆ ಬಾಳಲ್ಲಿ ದುರಂತ

ರಕ್ಷಣಾ ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್​ನಿಂದ ಕೆಳಗೆ ಬಿದ್ದು ವ್ಯಕ್ತಿ ದುರಂತ ಸಾವು: ಭಯಾನಕ ದೃಶ್ಯ ಸೆರೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seventeen + eight =
Remember me
