ಬೀದರ್​:ದೇಶಾದ್ಯಂತ ಡೀಸೆಲ್​ ಬೆಲೆ ನೂರರ ಗಡಿ ಸಮೀಪಿಸುತ್ತಿದ್ದರೆ, ಬೀದರ್​ನಲ್ಲಿ ಮಾತ್ರ ಕೇವಲ 70 ರೂಪಾಯಿಗೆ ದೊರೆಯುತ್ತಿದೆ. ಎಲ್ಲರಿಗೂ ಆಶ್ಚರ್ಯವಾಗಬಹುದು. ಅದಕ್ಕೆ ಕಾರಣ ಏನೆಂಬುದು ಇಲ್ಲಿದೆ ನೋಡಿ.
ಬೀದರ್​ನ ಹುಮನಾಬಾದ್​ ಮತ್ತು ಬಸವಕಲ್ಯಾಣದಲ್ಲಿ ಬಯೋ ಡೀಸೆಲ್​ ದಂಧೆ ನಡೆಯುತ್ತಿದೆ. ಕೈಗಾರಿಕೆ ಪ್ರದೇಶಗಳಲ್ಲಿ ಬಳಸುವ ಬಯೋ ಡೀಸೆಲ್​ ಅಕ್ರಮ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಹೈದರಾಬಾದ್​-ಮುಂಬೈ ಹೆದ್ದಾರಿಯಲ್ಲಿ ಅಕ್ರಮ ಮಾರಾಟ ಮಾಡುತ್ತಿರುವ ಜಾಲವೊಂದು ಪತ್ತೆಯಾಗಿದೆ.
ಪೆಟ್ರೋಲ್​ ಬಂಕ್​ಗಳಲ್ಲಿ ಡೀಸೆಲ್​ 95 ರೂಪಾಯಿಗೆ ಲಭ್ಯವಾಗುತ್ತಿದೆ. ಆದರೆ, ಇಲ್ಲಿ 70 ರೂಪಾಯಿಗೆ ದೊರೆಯುತ್ತಿದೆ. ಬಂಕ್​ಗಳಲ್ಲಿ ಹೆಚ್ಚಿನ ಹಣ ಕೊಡಬೇಕಾಗಿರುವುದರಿಂದ ಜನರೀಗ ಬಯೋ ಡೀಸೆಲ್​ ಕಡೆ ಮುಖ ಮಾಡಿದ್ದಾರೆ. ಕೆಲ ಕಂಪನಿಗಳೇ ಇದರಲ್ಲಿ ಒಳಗೊಂಡಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿರುವ ಬೀದರ್​ ಜಿಲ್ಲಾಧಿಕಾರಿ ರಾಮಚಂದ್ರನ್​ ಆರ್​ ಅನಧಿಕೃತವಾಗಿ ಡೀಸೆಲ್​ ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಈಗಾಗಲೇ ಎಫ್​ಐಆರ್​ ದಾಖಲಾಗಿದೆ. ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಉಗ್ರ ಕೃತ್ಯಕ್ಕೆ ಸರ್ಕಾರಿ ಹಣ?: ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಡೆದಿದೆ ಅಕ್ರಮ ವ್ಯವಹಾರ..

‘ಪ್ರಧಾನಿ ಮೋದಿ ವಿರುದ್ಧ ಬರೆಯಬಲ್ಲ, ಭಾರತ ವಿರೋಧಿ ವರದಿಗಾರರು ಬೇಕಾಗಿದ್ದಾರೆ’

ಪೊಲೀಸರು ಅಪಘಾತ ಸ್ಥಳಕ್ಕೆ ಹೋದಾಗ ಚಿದಾನಂದ ಸವದಿ ಸ್ಥಳದಲ್ಲೇ ಇದ್ದರು: ಬಾಗಲಕೋಟೆ ಎಸ್​​ಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 16 =
Remember me
