ವಿಜಯಪುರ:ಮಳೆ ಬರಲಿ ಅಂತಾ ಏನೇನೋ ವಿಚಿತ್ರ ಆಚರಣೆಗಳನ್ನು ಮಾಡುವುದು ಹಲವೆಡೆ ಇನ್ನೂ ಪ್ರಚಲಿತದಲ್ಲಿವೆ. ಈಗಾಗಲೇ ಮಳೆಗಾಗಿ ಗುರ್ಜಿ ಪೂಜೆ, ಗುಳ್ಳವನ ಆಚರಣೆ, ಕತ್ತೆಗಳ ಮದುವೆ, ಕಪ್ಪೆಗಳ ಮದುವೆ, ಅರೆಬೆತ್ತಲೆ ಪೂಜೆ ಸೇರಿದಂತೆ ಹೋಮ-ಹವನ ಮಾಡೋದನ್ನು ನೋಡಿದ್ದೀರಿ, ಆದರೆ ಶವದ ಬಾಯಿಗೆ ನೀರುಣಿಸಿದ್ದು ಎಲ್ಲಾದರೂ ಕೇಳಿದ್ದೀರಾ ಅಥವಾ ಕಂಡಿದ್ದೀರಾ?

ಅಚ್ಚರಿಯಾದರೂ ಅಂಥದ್ದೊಂದು ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿರುವುದು ಅಕ್ಷರಶಃ ಸತ್ಯ. ಇಲ್ಲಿ ಮಳೆಗಾಗಿ ವಿಚಿತ್ರ ಆಚರಣೆ ಮಾಡಿದ್ದಾರೆ. ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ಪೈಪ್ ಮೂಲಕ ನೀರು ಹಾಕಿ ಮಳೆಗಾಗಿ ಆಚರಣೆ ಮಾಡಿದ್ದಾರೆ.

ಇನ್ನೂ ಜಿಲ್ಲೆಯಲ್ಲಿ ಮಳೆಯಾಗದ ಕಾರಣ ರೈತಾಪಿ ವರ್ಗ ಆತಂಕಗೊಂಡಿದ್ದಾರೆ. ಅದಕ್ಕಾಗಿ ಶವದ ಬಾಯಿಗೆ ನೀರು ಹಾಕಿದರೆ ಮಳೆ ಬರುತ್ತೇ ಅನ್ನೋ ನಂಬಿಕೆ ಗ್ರಾಮಸ್ಥರಲ್ಲಿ ಇದೆ. ಹೀಗಾಗಿ ಗೋರಿಯಲ್ಲಿದ್ದ ಶವದ ಬಾಯಿಗೆ ಟ್ಯಾಂಕರ್ ಮೂಲಕ ನೀರು ತಂದು ಹಾಕಿದ್ದಾರೆ.
VIDEOS| ಶ್ರೀಲಂಕಾ ಅಧ್ಯಕ್ಷರ ಮನೆಯೊಳಗೆ ಪ್ರತಿಭಟನಾಕಾರರ ಮೋಜು-ಮಸ್ತಿಯ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​

SSLC ಪರೀಕ್ಷೆಯಲ್ಲಿ ಛತ್ತೀಸ್​ಗಢದ IAS ಅಧಿಕಾರಿ ಪಡೆದಿರುವ ಒಟ್ಟು ಅಂಕ​ ನೋಡಿದ್ರೆ ಹುಬ್ಬೇರೋದು ಖಚಿತ!

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಪ್ರಧಾನಿ ನಿವಾಸಕ್ಕೆ ಬೆಂಕಿಯಿಟ್ಟ ಪ್ರತಿಭಟನಾಕಾರರು, ಅಧ್ಯಕ್ಷರ ರಾಜೀನಾಮೆಗೆ ದಿನ ಫಿಕ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − two =
Remember me
