ಬೆಂಗಳೂರು:ಬೂಸ್ಟರ್ ಡೋಸ್​ಗೆ ಹಣ ನೀಡುವ ಬಗ್ಗೆ ಪ್ರಧಾನಿಯವರ ಜತೆ ಸಭೆ ನಂತರ ತೀರ್ಮಾನಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 60 ನೇ ವಯಸ್ಸಿನ ಮೇಲ್ಪಟವರಿಗೆ ಉಚಿತವಾಗಿ ನೀಡ್ತಿದ್ದೇವೆ. 2 ಡೋಸ್ ಶೇ. 98 ಆಗಿದೆ. 60 ವರ್ಷ ಮೇಲ್ಪಟ್ಟವರು ಮೂರನೇ ಡೋಸ್ ಶೇ 54 ಪರ್ಸಂಟೇಜ್ ಆಗಿದೆ ಎಂದರು.
ಕಳೆದ ಒಂದು ವಾರದಿಂದ ದೇಶದಲ್ಲಿ ಕರೊನಾ ಪ್ರಕರಣ ಹೆಚ್ಚಾಗ್ತಿದೆ. ನಾಳೆ ಪ್ರಧಾನಿಯವರ ಜೊತೆ ಸಭೆ ಇದೆ. ಸಭೆಯಲ್ಲಿ ಏನೇಲ್ಲ ಚರ್ಚೆ ಆಗುತ್ತೆ ನೋಡಿಕೊಂಡು ಮುಂದು ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
3 ನೇ ಅಲೆಯಲ್ಲಿ ಹೆಚ್ಚಿನ ಸಾವು ನೋವು ಆಗಿಲ್ಲ. ಕರೊನಾ ಲಸಿಕೆ ವ್ಯಾಪಕವಾಗಿ ನೀಡಿರುವುದರಿಂದ ಕರೊನಾ ನಿಯಂತ್ರಣದಲ್ಲಿದೆ. ಲಸಿಕೆ ಪಡೆಯದವರು ಕೂಡಲೇ ಲಸಿಕೆ ಪಡೆಯಿರಿ. ಎರಡು ಡೋಸ್ ಪಡೆಯದವರು ಈಗಲೇ ಲಸಿಕೆ ಹಾಕಿಸಿಕೊಳ್ಳಿ ಎಂದು ಜನತೆಯಲ್ಲಿ ಮನವಿ ಮಾಡಿದರು.
ಐಐಟಿ ಕಾನ್ಪೂರ್ ಅವರ ಪ್ರಕಾರ ಜೂನ್ ಅಂತ್ಯದಿಂದ 4 ನೇ ಅಲೆ ಪ್ರಾರಂಭ ಆಗಬಹುದೆಂದು ಹೇಳಿದ್ದಾರೆ. ಇಲ್ಲಿಯವರೆಗೂ ಅವರು ಹೇಳಿದ ರೀತಿಯೇ ಆಗಿದೆ. ಅಲೆ ಬರುವವರೆಗೂ ಕಾಯದೆ ಕೂಡಲೇ ಲಸಿಕೆ ಪಡೆಯಬೇಕು. ಲಕ್ಷಾಂತರ ಡೋಸ್ ಲಸಿಕೆ ನಮ್ಮ ಬಳಿ ಇದೆ. ಆದರೆ ಜನರು ಏಕೆ ಲಸಿಕೆ ಪಡೆಯುತ್ತಿಲ್ಲ. ಅಲೆ ಬಂದಾಗ ಎಲ್ಲರೂ ಒಟ್ಟಾಗಿ ಬರುವುದಕ್ಕಿಂತ ಈಗಲೇ ಲಸಿಕೆ ಪಡೆಯಿರಿ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ 4 ನೇ ಅಲೆ ಬಂದಿದೆ ಅಂತ ಹೇಳಲು ಸಾಧ್ಯವಿಲ್ಲ. ಕೇಸ್​​ನ ಪ್ರಮಾಣ ಇನ್ನು ಕಡಿಮೆ ಇದೆ. ಹೀಗಾಗಿ ಈಗಲೇ 4 ನೇ ಅಲೆ ರಾಜ್ಯಕ್ಕೆ ಬಂದಿದೆ ಅಂತ ಹೇಳಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಮ್ಮ ರಾಜ್ಯದಲ್ಲಿ ಎರಡು ಡೋಸ್ 10 ಕೋಟಿಗೂ ಹೆಚ್ಚು ಲಸಿಕೆ ನೀಡಿದ್ದೇವೆ. ಲಸಿಕೆಯಿಂದ ಸಾವು ನೋವು ಸಂಭವಿಸಿಲ್ಲ. ವ್ಯಾಕ್ಸಿನ್ ತೆಗೆದುಕೊಂಡರೆ ಕೋವಿಡ್ ಬರಲ್ಲ ಅಂತಲ್ಲ. ಸಾವು ನೋವಿನ ಪ್ರಮಾಣ ಕಡಿಮೆ ಇರುತ್ತೆ. ಮೂರನೇ ಡೋಸ್ ತೆಗೆದುಕೊಂಡವರ ಪ್ರಮಾಣ ಕಡಿಮೆ ಇದೆ ಎಂದರು. ಕನಿಷ್ಠ ಜನಜಂಗುಳಿ ಇರುವ ಕಡೆ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಿ ಒಳಾಂಗಣ ಹಾಗೂ ಜನರ ಗುಂಪು ಇರುವ ಕಡೆ ಮಾಸ್ಕ್ ಕಡ್ಡಾಯವಾಗಿ ಬಳಸಿ ಎಂದು ಹೇಳಿದರು.
ಜೂನ್ ವೇಳೆಗೆ ಅಥವಾ ಒಂದು ತಿಂಗಳ ಮುಂಚೆಯೇ 4ನೇ ಅಲೆ ಬರುವ ಸಾಧ್ಯತೆ ಇದೆ. ಜೂನ್​ನಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್- ಅಕ್ಟೋಬರ್ ವರೆಗೂ 4ನೇ ಅಲೆ ಇರಬಹುದು ಎಂದರು. ಕೋವಿಡ್​ನಿಂದ ಶಾಲೆಗಳ ಮೇಲೆ ಪರಿಣಾಮ ವಿಚಾರವಾಗಿ, ಕೋವಿಡ್ ಬಂದು ಎರಡು ವರ್ಷ ಆಗಿದೆ. ಹೀಗಾಗಿ ನಾವು ಕೂಡಾ ಕೋವಿಡ್ ಜೊತೆ ಬದುಕಲು ಕಲಿಯಬೇಕು. ಮಾಸ್ಕ್, ಲಸಿಕಾಕರಣದ ಬಗ್ಗೆ ಜನರು ನಿಗಾವಹಿಸಬೇಕು ಎಂದರು.
ಬರುವಂತಹ ದಿನಗಳಲ್ಲಿ ವರ್ಷಕ್ಕೊಂದು ಡೋಸ್ ಪಡೆಯಬೇಕಾ..? ಯಾವ ರೀತಿ ತಗೊಬೇಕು ಎಂಬ ಬಗ್ಗೆ ಅವಲೋಕನ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರ ಈ ದೃಷ್ಟಿಯಿಂದ ಅವಲೋಕನ ನಡೆಸಲಿದೆ ಎಂದು ತಿಳಿಸಿದರು. ಓಮಿಕ್ರಾನ್ ರೂಪಾಂತರ ಅಂತ ತಳಿ ಇದು ಅಂತ ಹೇಳಲಾಗ್ತಿದೆ. ಈ ಬಗ್ಗೆ ಲ್ಯಾಬ್ ವರದಿ ಕಳಿಸಲಾಗಿದೆ. 2- 3 ದಿನಗಳಲ್ಲಿ ವರದಿ ಬರಬಹುದು ಎಂದು ಸುಧಾಕರ್ ತಿಳಿಸಿದರು.
ತಲೆಗೆ ಮುತ್ತಿಟ್ಟು ಅತಿರೇಕ ವರ್ತನೆ ತೋರಿದ ಕೃನಾಲ್​ ವಿರುದ್ಧ ಟೀಕಾ ಪ್ರಹಾರ ನಡೆಸಿದ ಹಿರಿಯ ಆಟಗಾರರು!

ಏಕಕಾಲದಲ್ಲಿ ಇಬ್ಬರು ಬದ್ಧ ವೈರಿಗಳನ್ನು ಸೋಲಿಸುವ ಅವಕಾಶ ಬಂದಿದೆ: ಶಿವರಾಮೇಗೌಡರಿಂದ ದಳಪತಿಗಳಿಗೆ ಸೆಡ್ಡು

ನನಗೆ ಉತ್ತರ ಬೇಕಿದೆ… ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಎಂ.ಎಸ್​. ಧೋನಿ ಪತ್ನಿ ಸಾಕ್ಷಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
