ಬಳ್ಳಾರಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋ ಮತ್ತು ಪೋಸ್ಟ್​ಗಳು ಹರಿದಾಡುತ್ತಿರುತ್ತವೆ. ಹಾಗಂದ ಮಾತ್ರಕ್ಕೆ ಅಲ್ಲಿರುವ ಎಲ್ಲ ಮಾಹಿತಿಗಳು ನಿಜವಾಗಿರುವುದಿಲ್ಲ. ಜಾಲತಾಣದ ಮೇಲೆ ಇನ್ನೂ ಸರಿಯಾದ ಕಡಿವಾಣ ಇಲ್ಲದ ಕಾರಣ ಸಾಕಷ್ಟು ದಾರಿ ತಪ್ಪಿಸುವ ಪೋಸ್ಟ್​ಗಳು ಪ್ರತಿನಿತ್ಯ ಪ್ರಕಟಗೊಳ್ಳುತ್ತಲೇ ಇರುತ್ತವೆ. ಹೀಗಾಗಿ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ನಾನಾ ಎಡವಟ್ಟುಗಳಿಗೆ ಎಡೆಮಾಡಿಕೊಡುತ್ತದೆ. ಅದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ.
ನೀವು ಗಮನಿಸಿರಬಹುದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದು ವೈರಲ್​ ಆಗುತ್ತಿದೆ. ಅದರಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಮೃತದೇಹವನ್ನು ಉಪ್ಪಿನ ರಾಶಿಯಲ್ಲಿ ಇಟ್ಟರೇ ಮತ್ತೆ ಬದುಕುತ್ತಾನೆ ಎಂದು ಬರೆಯಲಾಗಿದೆ. ಈ ಪೋಸ್ಟ್​ ಜಾಲತಾಣದಲ್ಲಿ ಅದರಲ್ಲೂ ಫೇಸ್​ಬುಕ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ವೈರಲ್​ ಆಗಿರುವ ಪೋಸ್ಟ್​ ಅನ್ನೇ ಸತ್ಯ ಎಂದು ನಂಬಿದ ಗ್ರಾಮದ ಕೆಲ ಜನರು, ಮೊನ್ನೆ ಬಾಲಕನೊಬ್ಬನು ಮೃತಪಟ್ಟಾಗ, ಇದೇ ರೀತಿ ಬದುಕುಳಿಸಲು ಪ್ರಯತ್ನ ಪಟ್ಟಿದ್ದಾರೆ. ನಾಲ್ಕು ತಾಸುಗಳ ಕಾಲ ಬಾಲಕನ ಮೃತ ದೇಹವನ್ನು ಉಪ್ಪಿನಲ್ಲಿಟ್ಟಿದ್ದರು ಆದರೆ, ಎಷ್ಟೇ ಹೊತ್ತಾದ್ರೂ‌ ಬಾಲಕ ಬದುಕುಳಿಯದ‌‌ ಹಿನ್ನಲೆಯಲ್ಲಿ ಕೊನೆಗೆ ಶವಸಂಸ್ಕಾರ ಮಾಡಿದ್ದಾರೆ.
ಈ ವಿಚಿತ್ರ ಘಟನೆ ಬಳ್ಳಾರಿ ತಾಲ್ಲೂಕಿನ ಸಿರವಾರ ಗ್ರಾಮದಲ್ಲಿ ಶನಿವಾರ ನಡೆದಿದೆ. ಸುರೇಶ್​ (10) ಎಂಬ ಬಾಲಕ ಸ್ನೇಹಿತರೊಂದಿಗೆ ಈಜಲು ತೆರಳಿದ್ದ. ಈ ವೇಳೆ ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪಾಲಕರು ಮತ್ತು ಗ್ರಾಮಸ್ಥರು ಉಪ್ಪಿನ ರಾಶಿಯ ಪ್ರಯತ್ನ ಮಾಡಿದ್ದಾರೆ.
ಉಪ್ಪಿನ ರಾಶಿಯಲ್ಲಿ ಮಲಗಿಸಿದರೆ ಮತ್ತೆ ಬದುಕುತ್ತಾರೆಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸಂದೇಶದಿಂದಾಗಿ ಈ ವ್ಯರ್ಥ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ನಾಲ್ಕೈದು ಚೀಲ ಉಪ್ಪನ್ನು ವ್ಯರ್ಥ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಪಿಎಸ್​ಐ ನೇಮಕಾತಿ ಹಗರಣ: ಹಣ ಪಡೆದಿದ್ದನ್ನು ಒಪ್ಪಿಕೊಂಡ ಬಿಜೆಪಿ ಶಾಸಕ ಬಸವರಾಜ ದಢೇಸುಗೂರು?

ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದನ್ನು ಸಹಿಸಲಾರದೇ ಮಗನ ಸಹಪಾಠಿಯನ್ನೇ ಕೊಂದ ಮಹಿಳೆ!

ಮಠಗಳಲ್ಲಿ ಲೈಂಗಿಕ ಹಗರಣ: ಮಹಿಳೆಯರ ಆಡಿಯೋ ವೈರಲ್​- ಮನನೊಂದು ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 6 =
Remember me
