ಬೆಂಗಳೂರು:ಭೀಕರ ಕಾರು ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗವನ್ನು ದಾನ ಮಾಡುವ ಮೂಲಕ ಕುಟುಂಸ್ಥರು ಮಾನವೀಯತೆ ಮೆರೆದಿದ್ದಾರೆ.
ಯುವಕ ದೀಪಕ್ (26) ಅಂಗಾಂಗವನ್ನು ದಾನ ಮಾಡಿರುವ ಕುಟುಂಬಸ್ಥರು ಇಬ್ಬರ ಬದುಕಿಗೆ ಆಸರೆಯಾಗಿದ್ದಾರೆ. ಸೆ.25 ರಂದು ನೈಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ನಿಂತಿದ್ದ ಕ್ಯಾಂಟರ್​ಗೆ ಹಿಂಬದಿಯಿಂದ ಸ್ವಿಫ್ಟ್​ ಕಾರು ಡಿಕ್ಕಿ ಹೊಡೆದಿತ್ತು.
ಭೀಕರ ಅಪಘಾತದಲ್ಲಿ ದೀಪಕ್​ ಮೆದುಳಿಗೆ ಬಲವಾದ ಪೆಟ್ಟು ಬಿದ್ದು ನಿಷ್ಕ್ರಿಯಗೊಂಡಿತ್ತು. ಬದುಕುವುದಿಲ್ಲ ಎಂದರಿತ ಕುಟುಂಬಸ್ಥರು, ಸಾವಿನ ನೋವಲ್ಲೂ ದೀಪಕ್​ ಅವರ ಕಿಡ್ನಿ, ಕಣ್ಣು ಹಾಗೂ ಚರ್ಮ ಸೇರಿದಂತೆ ಹಲವು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸದ್ಯ ದೀಪಕ್​ ಮೃತದೇಹ ಆರ್.ಆರ್.ನಗರದ ಎಸ್.ಎಸ್.ಸ್ಪರ್ಶ್ ಆಸ್ಪತ್ರೆಯಲ್ಲಿದೆ. ಇಂದು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗುತ್ತದೆ.(ದಿಗ್ವಿಜಯ ನ್ಯೂಸ್​)
ಒಂದೇ ಒಂದು ಮೆಸೇಜ್​ನಿಂದ ಹಣ, ಗೌರವ ಎಲ್ಲವನ್ನು ಕಳ್ಕೊಂಡು ಫೇಸ್​ಬುಕ್​ ಲೈವ್​ನಲ್ಲಿ ಕಣ್ಣೀರಿಟ್ಟ ನಟಿ!

ಆಲಿಯಾ​ ಜತೆ ಮಲಗುವುದೆಂದರೆ ಅದೊಂದು ಹೋರಾಟ! ರಣಬೀರ್​​ ಹೇಳಿಕೆಗೆ ಆಲಿಯಾ ಉತ್ತರ ಹೀಗಿತ್ತು….

ಒಬ್ಬಳಿಗಾಗಿ ಇಬ್ಬರ ಗಲಾಟೆ: ಪ್ರಿಯತಮೆ-ನಗರಸಭೆ ಸದಸ್ಯನ ಕಿರುಕುಳ… ಚಿಕ್ಕಬಳ್ಳಾಪುರದಲ್ಲಿ ನಡೆಯಿತು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 8 =
Remember me
