ಚಾಮರಾಜನಗರ:ಟ್ರ್ಯಾಕ್ಟರ್​ ಹರಿದು ಗಾಯಗೊಂಡಿದ್ದ 5 ವರ್ಷದ ಬಾಲಕ ಮೃತಪಟ್ಟಿದ್ದಕ್ಕೆ ಮನನೊಂದ ಟ್ರ್ಯಾಕ್ಟರ್​​ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕು ಸವಕನಪಾಳ್ಯದಲ್ಲಿ ಘಟನೆ.

ಸವಕನಪಾಳ್ಯದ ಬಾಲಕ ಹರ್ಷ (5) ಮತ್ತು ಸುನೀಲ್​ (23) ಮೃತ ದುರ್ದೈವಿಗಳು. ಕ್ರಿಕೆಟ್​ ಟೂರ್ನಮೆಂಟ್​ಗಾಗಿ ಗುರುವಾರ ಮೈದಾನವನ್ನು ಟ್ರ್ಯಾಕ್ಟರ್​ ಮೂಲಕ ಸಮತಟ್ಟು ಮಾಡಲಾಗುತ್ತಿತ್ತು. ಈ ವೇಳೆ ಸುನೀಲ್​ ಟ್ರ್ಯಾಕ್ಟರ್​ ಚಲಾಯಿಸುತ್ತಿದ್ದ. ಸಮತಟ್ಟು ಮಾಡುವುದನ್ನು ನೋಡುತ್ತಾ ನಿಂತಿದ್ದ ಹರ್ಷನಿಗೆ ಟ್ರ್ಯಾಕ್ಟರ್​ ಡಿಕ್ಕಿ ಹೊಡೆಸು, ಗಂಭೀರವಾಗಿ ಗಾಯಗೊಂಡಿದ್ದ.
ಇದಾದ ತಕ್ಷಣವೇ ಹರ್ಷನನ್ನು ಮಧ್ಯಾಹ್ನ ಗುಂಡ್ಲುಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಹರ್ಷ ಇಹಲೋಕ ತ್ಯಜಿಸಿದ. ಇತ್ತ ಘಟನೆ ನಂತರ ಸುನೀಲ್​ ಮೈಸೂರಿಗೆ ಪರಾರಿಯಾಗಿದ್ದ. ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಸುನೀಲ್​ ಪಿಎಚ್​ಡಿ ಮಾಡುತ್ತಿದ್ದಾನೆ. ಬಾಲಕ ಮೃತಪಟ್ಟ ಸುದ್ದಿ ತಿಳಿದು ಮೈಸೂರಿನ ತನ್ನ ರೂಮಿನಲ್ಲೇ ಸುನೀಲ್​ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಸಂಬಂಧ ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಟೂರ್ನಮೆಂಟ್​ಗಾಗಿ ಮೈದಾನ ಸಮತಟ್ಟು ಮಾಡಲು ಗ್ರಾಮಸ್ಥರೊಬ್ಬರು ಟ್ರ್ಯಾಕ್ಟರ್​ ಪಡೆದು ಸುನೀಲ್​ ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
ಅಕ್ಕನ ಮೇಲೆಯೇ ರೇಪ್ ಮಾಡಿ ಗರ್ಭಿಣಿಯಾಗಿಸಿದ 12ರ ಬಾಲಕ: ಸಂತ್ರಸ್ತೆ ಬಿಚ್ಚಿಟ್ಟ ಭಯಾನಕ ಕತೆಯಿದು!
ಜನ ಕೇಳುವ ಪ್ರಶ್ನೆಗೆ ಉತ್ತರಿಸಲು ಇರಿಸುಮುರಿಸು: ನೋವಿನಿಂದಲೇ ಮಹಿಳಾ ಎಸ್​ಐ ಆತ್ಮಹತ್ಯೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 1 =
Remember me
