ಚಾಮರಾಜನಗರ:ಹುಟ್ಟುಹಬ್ಬದ ಆಚರಣೆ ಬಳಿಕ ಉಳಿದಿದ್ದ ತಂಗಳು ಬಿರಿಯಾನಿ ತಿಂದು 25 ಮಂದಿ ಅಸ್ವಸ್ಥಗೊಂಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ನಡೆದಿದೆ.
ಜುಲೈ 18 ರಂದು ಅರೇಪಾಳ್ಯ ಗ್ರಾಮದಲ್ಲಿ ಸಂತೋಷ್​ ಎಂಬುವವರು ತಮ್ಮ ಮಗನ ಹುಟ್ಟುಹಬ್ಬಕ್ಕೆ ಚಿಕನ್ ಬಿರಿಯಾನಿ ಮಾಡಿಸಿ, ಸ್ನೇಹಿತರು ಹಾಗೂ ಹಿತೈಷಿಗಳಿಗೆ ಆತಿಥ್ಯ ನೀಡಿದ್ದರು. ಮರುದಿನ ಬೆಳಗ್ಗೆ ಸಂತೋಷ್ ಅವರ ಜಮೀನಿಗೆ ಕಬ್ಬು ಕಟಾವಿಗೆ ಬಂದ ಕೂಲಿ ಕಾರ್ಮಿಕರಿಗೆ ಉಳಿದಿದ್ದ ತಂಗಳು ಬಿರಿಯಾನಿ ನೀಡಲಾಗಿತ್ತು. ಅದನ್ನು ತಿಂದವರೆಲ್ಲರಿಗೂ ಸಂಜೆಯಾಗುತ್ತಿದಂತೆ ವಾಂತಿ-ಭೇದಿ ಶುರುವಾಗಿದೆ.
ಸದ್ಯ ಎಲ್ಲರೂ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ವಿಚಾರಣೆಯನ್ನು ನಡೆಸಿದ್ದಾರೆ. ಈ ವಿಚಾರ ತಿಳಿದು ಆಸ್ಪತ್ರೆಗೆ ಧಾವಿಸಿದ ಶಾಸಕ ಎನ್.ಮಹೇಶ್ ಎಲ್ಲರ ಆರೋಗ್ಯವನ್ನು ವಿಚಾರಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಪರೀಕ್ಷೆ ಬರೆಯಲು ಒಳಉಡುಪು ಬಿಚ್ಚಿಸಿದ ಪ್ರಕರಣ: ಇಡೀ ಘಟನೆಯನ್ನು ಮಾಧ್ಯಮ ಮುಂದೆ ಬಿಚ್ಚಿಟ್ಟ ವಿದ್ಯಾರ್ಥಿನಿ

ಜಿಎಸ್​ಟಿಗೆ ಉದ್ಯಮಿಗಳ ಫುಲ್ ಮಾರ್ಕ್ಸ್: ತೆರಿಗೆ ಪದ್ಧತಿಗೆ ಶೇ.45 ಜನರ ಬೆಂಬಲ, ಈ ವ್ಯವಸ್ಥೆ ಹಿಂದಿಗಿಂತಲೂ ಸುಲಭ

ಜನ ಕುರಿಗಳಾದಾಗ ಜನನಾಯಕರು ನರಿಗಳಾಗುತ್ತಾರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
