ಚಾಮರಾಜನಗರ:ರಾಜ್ಯದೆಲ್ಲೆಡೆ ಕೋವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿಗದಿಯಾಗಿರುವ ಮದುವೆಗೆ ಬರಬೇಡಿ ಎಂದು ಮದುಮಗಳೊಬ್ಬಳು ಮನವಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಚಾಮರಾಜನಗರ ತಾಲೂಕಿನ ವಿ.ಸಿ‌.ಹೊಸೂರು ಗ್ರಾಮದ ಸುಶ್ಮಾ ಹಾಗೂ ಚನ್ನಪ್ಪನಪುರದ ಶ್ರೇಯಸ್ ನಡುವೆ ನಿಶ್ಚಯವಾಗಿರುವ ಮದುವೆ ಇಂದು ಮತ್ತು ನಾಳೆ ನಡೆಯಲಿದೆ. ಈಗಾಗಲೇ ಸಂಬಂಧಿಕರಿಗೆ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿದೆ. ಆದರೆ, ಕೋವಿಡ್ ಕಾರಣದಿಂದ ವಧು-ವರನ ಮನೆಯವರು ಕುಳಿತು ಮನೆಯಲ್ಲೇ ಸರಳ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಕೋವಿಡ್​ ಇರದೇ ಹೋಗಿದ್ದರೆ ಚಾಮರಾಜನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆ ನೆರವೇರಬೇಕಿತ್ತು. ಆದ್ರೆ ದಿನದಿಂದ ದಿನಕ್ಕೆ ಕೋವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ಸರ್ಕಾರ ಸಹ ವಿವಾಹ ಸಮಾರಂಭಗಳಿಗೆ ಇಷ್ಟೇ ಜನಸಂಖ್ಯೆ ಇರಬೇಕೆಂದು ನಿಯಮ ಮಾಡಿದೆ. ಸಾಕಷ್ಟು ಗೊಂದಲಗಳ ನಡುವೆ ಮಂಟಪದಲ್ಲಿ ಮದುವೆ ಮಾಡುವುದು ಸಮಂಜಸವಲ್ಲ ಎಂಬ ತೀರ್ಮಾನಕ್ಕೆ ಬಂದು ಎರಡು ಕುಟುಂಬ ವಧುವಿನ ಸ್ವಗೃಹದಲ್ಲೆ ಸರಳವಾಗಿ ವಿವಾಹವಾಗಲು ತೀರ್ಮಾನಿಸಿದೆ. ಇದರಿಂದ ಮದುವೆ ಬಾರದೆ, ಇದ್ದಲ್ಲಿಯೇ ಆಶೀರ್ವದಿಸಿ ಎಂದು ವಧು ಮನವಿ ಮಾಡಿದ್ದಾಳೆ. ಈ ವಿಡಿಯೋ ಸದ್ಯ ವೈರಲ್​ ಆಗಿದೆ.(ದಿಗ್ವಿಜಯ ನ್ಯೂಸ್​)
ಕನ್ನಡ ಪ್ರೀತಿಗೆ ಸಲಾಂ! ಹೆಜ್ಜೆ ಹಾಕಿದ್ದು ತೆಲುಗು ಸಿನಿಮಾ ಹಾಡಿಗೆ ಆದ್ರೆ ವಾರ್ನರ್ ಗೆದ್ದಿದ್ದು ಕನ್ನಡಿಗರ ಹೃದಯ

ಒಬ್ಬನ ಹಿಂದೆ ಬಿದ್ದ 200 ಪೊಲೀಸರು! ಕೈಗೆ ಸಿಗದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಈತ ಯಾರು?

ಬಾಡಿಗೆ ತಾಯ್ತನದ ಮೂಲಕ ಮೊದಲ ಮಗುವನ್ನು ಸ್ವಾಗತಿಸಿದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 9 =
Remember me
