ಚಾಮರಾಜನಗರ:ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನಡೆದ 24 ಕರೊನಾ ಸೋಂಕಿತರ ದುರಂತ ಸಾವಿನ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಕಾಂಗ್ರೆಸ್​ ನಾಯಕ ಪುಟ್ಟರಂಗಶೆಟ್ಟಿ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಈಗಲೂ ಜಿಲ್ಲಾಸ್ಪತ್ರೆಯಲ್ಲಿ 50 ಜನ‌ ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾರಂತೆ. ಆಸ್ಪತ್ರೆಯಲ್ಲಿ ಒಟ್ಟು 170 ಕರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ‌ 15 ದಿನಗಳಿಂದ 50 ರೋಗಿಗಳು ಗಂಭೀರ ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ಯಾವ ಸಮಯದಲ್ಲಿ ಏನಾಗಲಿದೆ ಎಂಬುದನ್ನ‌ ಹೇಳುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಪುಟ್ಟರಂಗಶೆಟ್ಟಿ ಮಾಹಿತಿ ನೀಡಿದರು.
120 ಜನರು ನಾರ್ಮಲ್‌ ಕಂಡಿಷನ್​ನಲ್ಲಿದ್ದಾರೆ. ತಕ್ಷಣದಿಂದಲೇ ಜಿಲ್ಲಾಸ್ಪತ್ರೆಗೆ ‌ಬೆಡ್​ಗಳ ಅವಶ್ಯಕತೆ ಇದೆ. ಸರ್ಕಾರಕ್ಕೆ ಈಗಾಗಲೇ ಡಿಸಿ ಪತ್ರ ಬರೆದು ಬೆಡ್ ಕೊರೆತೆ ಗಮನ ಸೆಳೆದಿದ್ದಾರೆ. ಈಗಲಾದ್ರೂ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದು ಡಿಸಿಗೆ ಹೇಳಿದ್ದೇನೆ ಎಂದರು.
ಬೆಡ್ ಸಮಸ್ಯೆ ‌‌ನೀಗಿಸುವುದಕ್ಕೆ ವೈಯಕ್ತಿಕವಾಗಿ‌ ಸಹಾಯ ಮಾಡಲು ನಾನು ಸಿದ್ಧನಿದ್ದೇನೆಂದು ಮಾಜಿ ಸಚಿವ ಪುಟ್ಟರಂಗಶೆಟ್ಟಿ ಇದೇ ಸಮಯದಲ್ಲಿ ಭರವಸೆ ನೀಡಿದರು.(ದಿಗ್ವಿಜಯ ನ್ಯೂಸ್​)
ಐದು ತಿಂಗಳ ಮಗು ಉಳಿಸಲು 16 ಕೋಟಿ ರೂ. ದೇಣಿಗೆ ಸಂಗ್ರಹಿಸಿದ ದಂಪತಿ!

ಮತ್ತೆ ಮಾರಟೋರಿಯಂ ಅವಕಾಶ ಪ್ರಕಟಿಸಿದ ಆರ್​ಬಿಐ

ವಿಜಯವಾಣಿ ಸಂಪಾದಕೀಯ: ಆರ್ಥಿಕ ಚೇತರಿಕೆಗೆ ಆರ್​ಬಿಐನ ಪೂರಕ ಕ್ರಮಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fourteen =
Remember me
