ಬೆಂಗಳೂರು:ಚಾಲೆಂಜಿಂಗ ಸ್ಟಾರ್​ ದರ್ಶನ್​ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣವೂ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ನಟ ದರ್ಶನ್​ ಮತ್ತು ನಿರ್ಮಾಪಕ ಉಮಾಪತಿ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳನ್ನು ಮುಂದಿಟ್ಟಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತಷ್ಟು ಬೆಳವಣಿಗೆಗಳು ಈ ಪ್ರಕರಣದಲ್ಲಿ ಆಗಿದೆ.
ಪ್ರಕರಣದ ಪ್ರಮುಖ ಕೇಂದ್ರ ಬಿಂದುವೇ ಈ ಅರುಣಾ ಕುಮಾರಿ. ಈಕೆಯೇ ಮೋಸ ಮಾಡಲು ಯತ್ನಿಸಿದಳಾ? ಎಂಬ ಅನುಮಾನ ಮೂಡಿದೆ. ಏಕೆಂದರೆ ಆಕೆಯ ಹಿನ್ನೆಲೆಯನ್ನು ನೋಡಿದರೆ ಅವಳೊಬ್ಬಳು ಖತರ್ನಾಕ್​ ಲೇಡಿ ಎಂಬ ವಿಚಾರ ಬೆಳಕಿಗೆ ಬಂದಿದೆ.
ಈಗಾಗಲೇ ಅನೇಕರಿಗೆ ಅರುಣಾ ಕುಮಾರಿ ಮೋಸ ಮಾಡಿರುವ ಆರೋಪಗಳು ಕೇಳಿಬಂದಿದೆ. ಅಸಲಿಗೆ ಆರೋಪಿ ರೋಲ್​ಕಾಲ್​ ಗಿರಾಕಿ ಎಂಬ ಮಾತುಗಳು ಕೇಳಿಬಂದಿವೆ. ಫೇಸ್​ಬುಕ್​ ಮತ್ತು ಮೆಸೆಂಜರ್​ ಮೂಲಕ ಜನರಿಗೆ ಆರೋಪಿ ಗಾಳಾ ಹಾಕುತ್ತಿದ್ದಳಂತೆ. ಬಳಿಕ ಮಳ್ಳಿಯಂತೆ ಮಾತನಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ತನ್ನ ಫೇಸ್​ಬುಕ್​ ಖಾತೆಯ ಫ್ರೆಂಡ್ಸ್​ ಲೀಸ್ಟ್​ನಲ್ಲಿದ್ದವರ ಬಳಿಯೂ ಈಕೆ ಹಣವನ್ನು ಕೇಳುತ್ತಿದ್ದಳು ಎನ್ನಲಾಗಿದೆ. ಹಣ ಕೊಟ್ಟರೆ ಫ್ರೆಂಡ್​ಶಿಫ್​, ಇಲ್ಲವಾದ್ರೆ ಅವರ ಫ್ರೆಂಡ್​​ಶಿಫ್​ಗೆ ಬ್ರೇಕ್​ ಹಾಕ್ತಿದ್ದಳಂತೆ. ಫೇಸ್​ಬುಕ್​ನಲ್ಲಿ ಚೆಂದ..ಚೆಂದ ಫೋಟೋ ಅಪ್​ಲೋಡ್​ ಮಾಡಿ, ಪಡ್ಡೆ ಹುಡುಗರಿಗೆ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿ ಪರಿಚಯ ಮಾಡಿಕೊಂಡು ಚಾಟ್​ ಮೂಲಕ ಸಲುಗೆ ಬೆಳೆಸಿಕೊಂಡು ಹಣ ಕೇಳುತ್ತಿದ್ದಳು ಎಂಬ ಆರೋಪವಿದೆ. ಆಕೆ ಫ್ರೆಂಡ್ಸ್​ ಲಿಸ್ಟ್​ನಲ್ಲಿ 2500 ಹುಡುಗರು ಇರುವುದು ಬೆಳಕಿಗೆ ಬಂದಿದೆ.
ಈಕೆ ಗಾಳಕ್ಕೆ ಸಿಲುಕಿ ಹಲವು ಯುವಕರು ಹಣ ಕಳೆದುಕೊಂಡಿರುವ ಶಂಕೆ ಕೂಡ ಈಗ ವ್ಯಕ್ತವಾಗಿದೆ. ಅಲ್ಲದೆ, ಅನೇಕ ನಕಲಿ ಫೇಸ್​ಬುಕ್​ ಖಾತೆಗಳನ್ನು ಸಹ ಅರುಣಾ ಕುಮಾರಿ ತೆರೆದಿದ್ದಾರೆ ಎಂಬುದು ಪೊಲೀಸ್​ ತನಿಖೆಯ ವೇಳೆ ಬಯಲಾಗಿದೆ. ಪ್ರಕರಣದಲ್ಲಿ ಅರುಣಾ ಕುಮಾರಿ ಹಿನ್ನೆಲೆಯನ್ನು ಪೊಲೀಸರು ಕೆದಕಿದಾಗ ಈ ಮಹತ್ವದ ವಿಚಾರಗಳು ಬೆಳಕಿಗೆ ಬಂದಿದೆ. ಇದೀಗ ಇಡೀ ಪ್ರಕರಣ ಅರುಣಾ ಕುಮಾರಿಯ ಮೇಲೆ ಕೇಂದ್ರೀಕೃತವಾಗಿದ್ದು, ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.(ದಿಗ್ವಿಜಯ ನ್ಯೂಸ್​)
ಅವರ್ ಬಿಟ್, ಇವರ್ ಬಿಟ್, ಇವನ್ಯಾರು? ಹೊಸ ಆಡಿಯೋದಲ್ಲಿ ಕೇಳಿಬಂತು ಮತ್ತೊಬ್ಬನ ಹೆಸರು

ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣ: ಉಮಾಪತಿ ಗೌಡರ ಮೇಲೆಯೇ ಮೂಡುತ್ತಿವೆ ಹಲವು ಅನುಮಾನ

ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಗೋಣಿ ಚೀಲದ ಗಂಟು ತೆರೆಯುತ್ತಿದ್ದಂತೆ ಬಿಚ್ಚಿಕೊಳ್ತು ನಿಗೂಢ ಪ್ರಕರಣದ ಭಯಾನಕ ಸಂಚು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − thirteen =
Remember me
