ಮೈಸೂರು:ನಟ ದರ್ಶನ್ ಹೆಸರಲ್ಲಿ ಹಣ ವಂಚನೆ ಯತ್ನ ಪ್ರಕರಣವು​ ಅವರ್ ಬಿಟ್, ಇವರ್ ಬಿಟ್, ಇವನ್ಯಾರು? ಎನ್ನುವಂತಾಗಿದೆ. ಇದೀಗ ಮತ್ತೊಂದು ಆಡಿಯೋ ವೈರಲ್​ ಆಗಿದ್ದು, ಅದರಲ್ಲಿ ಮಲ್ಲೇಶ್​ ಎಂಬ ಹೆಸರು ಕೇಳಿಬರುತ್ತಿದೆ.
ದರ್ಶನ್ ಸ್ನೇಹಿತರ ಬಳಿ ಆರೋಪಿ ಅರುಣಾ ಕುಮಾರಿಯನ್ನು ಕಳುಹಿಸಿದ್ದು ನಿರ್ಮಾಪಕ ಅಲ್ಲ ಎನ್ನುತ್ತಿದೆ ಹೊಸ ಆಡಿಯೋ. ಹಾಗಾದ್ರೆ ಅರುಣಾ ಕುಮಾರಿಯನ್ನು ಕಳುಹಿಸಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ಕಗ್ಗಾಂಟಾಗುತ್ತಿದೆ. ಆರೋಪಿ ಮಹಿಳೆಯ ಹೇಳಿಕೆಯು ಭಿನ್ನವಾಗಿರುವುದರಿಂದ ಯಾವುದು ಸರಿ? ತಪ್ಪು? ಎಂಬ ಗೊಂದಲು ಮೂಡುತ್ತಿದೆ.
ಅರುಣಾ ಕುಮಾರಿ ಹಾಗೂ ದರ್ಶನ್ ಸ್ನೆಹಿತ ಹರ್ಷ ‌ಮೆಲಂಟಾ ಜತೆಗಿನ ಮೊಬೈಲ್ ಸಂಭಾಷಣೆ ಸದ್ಯ ವೈರಲ್​ ಆಗಿದೆ. ಅದರಲ್ಲಿ ಮಲ್ಲೇಶ್ ಎಂಬುವರು ನನ್ನನ್ನು ಕಳುಹಿಸಿದ್ರು ಎಂದು ಅರುಣಾ ಕುಮಾರಿ ಹೇಳಿಕೊಂಡಿದ್ದಾರೆ. ಉಮಾಪತಿಯನ್ನು ನಾನೇ ಸಂಪರ್ಕ ಮಾಡಿದ್ದೆ. ಅವರು ದರ್ಶನ್ ಸ್ನೇಹಿತರು ಎನ್ನುವ ಕಾರಣಕ್ಕೆ ಭೇಟಿ ಮಾಡಿದ್ದೆ. ಅವರ ಮೂಲಕ ದರ್ಶನ್ ಭೇಟಿಯಾಗಬಹುದು ಎಂಬ ಕಾರಣಕ್ಕೆ ಸಂಪರ್ಕ ಮಾಡಿದೆ. ಉಮಾಪತಿ ಸಹೋದರ ದೀಪು ಕೂಡ ನನಗೆ ಗೊತ್ತಿಲ್ಲ ಎಂದು ಅರುಣಾ ಕುಮಾರಿ ಹೇಳಿರುವುದು ಆಡಿಯೋದಲ್ಲಿದೆ.
ಹೊಸ ಆಡಿಯೋದಿಂದ ಪ್ರಕರಣದಲ್ಲಿ ಮತ್ತೊಮ್ಮೆ ಗೊಂದಲ ಸೃಷ್ಟಿಯಾಗಿದೆ. ಹಾಗಿದ್ರೆ ದರ್ಶನ್ ಸ್ನೇಹಿತರ ನಡುವೆ ಹುಳಿ ಹಿಂಡುವ ಕೆಲಸ ಮಾಡಿದ್ದು ಯಾರು? ದರ್ಶನ್ ಹೇಳಿದ ಆ ಹಿಂದಿರುವ ವ್ಯಕ್ತಿ ಯಾರು ಎಂಬುದು ಇದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.(ದಿಗ್ವಿಜಯ ನ್ಯೂಸ್​)
ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣ: ಉಮಾಪತಿ ಗೌಡರ ಮೇಲೆಯೇ ಮೂಡುತ್ತಿವೆ ಹಲವು ಅನುಮಾನ

ನಟ ದರ್ಶನ್ ಸುದ್ದಿಗೋಷ್ಠಿ: ಉಮಾಪತಿ ಅಂಗಳದಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣದ ಚೆಂಡು

ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣ: ತಪ್ಪೊಪ್ಪಿಕೊಂಡ ಬಂಧಿತ ಆರೋಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 7 =
Remember me
