ಬೆಂಗಳೂರು:ಫ್ಯಾಟ್ ಸರ್ಜರಿಗೆ ಒಳಗಾಗಿ ಮೃತಪಟ್ಟ ನಟಿ ಚೇತನಾ ರಾಜ್ ಪ್ರಕರಣದಲ್ಲಿ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ತನ್ನ ಮೈ ಮೇಲಿದ್ದ ಚಿನ್ನವನ್ನು ಅಡವಿಟ್ಟು ಫ್ಯಾಟ್​ ಸರ್ಜರಿಗೆ ದಾಖಲಾಗಿದ್ದಳು ಎಂಬ ಸಂಗತಿ ಇದೀಗ ಬಯಲಾಗಿದೆ.
ಚೇತನಾ ರಾಜ್ ಫ್ಯಾಟ್ ಸರ್ಜಿರಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಕೇಳಿದರೆ ಹಣ ಕೊಡುವುದಿಲ್ಲ ಎಂಬುದು ಆಕೆಗೆ ಗೊತ್ತಿತ್ತು. ಹೀಗಾಗಿಯೇ ಮನೆಯವರಿಗೆ ಹೇಳದೆ ತನ್ನ ಬಳಿಯಿದ್ದ ಚಿನ್ನವನ್ನು ಅಡವಿಟ್ಟು 80 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದಳು. ಇದೇ ಹಣವನ್ನ ಡಾ. ಶೆಟ್ಟಿ ಕಾಸ್ಮೆಟಿಕ್ಸ್​ನಲ್ಲಿ ಕಟ್ಟಿ ಫ್ಯಾಟ್ ಸರ್ಜರಿಗೆ ಒಳಗಾಗಿದ್ದಳು ಎಂದು ತಿಳಿದುಬಂದಿದೆ.
ಇದಲ್ಲದೆ ಚೇತನಾ ರಾಜ್, ಫ್ಯಾಟ್ ಸರ್ಜರಿಗೆ ಒಳಗಾಗಲು ಜಿಮ್ ಟ್ರೈನರ್ ಒಬ್ಬರಿಂದ ಸಲಹೆ ಪಡೆದುಕೊಂಡಿದ್ದಳು ಎಂಬ ಮಾಹಿತಿ ಪೊಲೀಸರಿಗೆ ದೊರಕಿದೆ. ಈ ಬಗ್ಗೆ ಚೇತನಾ ಸ್ನೇಹಿತರಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಟ್ರೈನರ್ ಸಲಹೆಯಂತೆ ಚೇತನಾ ಫ್ಯಾಟ್ ಸರ್ಜರಿ ಮಾಡಿಸಿಕೊಂಡಿದ್ದಳು.
ಸದ್ಯ ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿರುವ ಸುಬ್ರಮಣ್ಯನಗರ ಪೊಲೀಸರು, ಮರಣೋತ್ತರ ಪರೀಕ್ಷೆ ಬಂದ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಿದ್ದಾರೆ. ಇತ್ತ ಕಡೆ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಿಂದ ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್​ಗೆ ನೋಟಿಸ್ ನೀಡಲಾಗಿದೆ. ಆಸ್ಪತ್ರೆಯ ಬಾಗಿಲಿಗೆ ಅಧಿಕಾರಿಗಳು ನೋಟಿಸ್​ ಅಂಟಿಸಿದ್ದಾರೆ. ಸಾವಿಗೆ ಸಂಬಂಧಿಸಿದಂತೆ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಸಾಮಾಜಿಕ ಜಾಲತಾಣದಲ್ಲಿ ದಿಢೀರ್​ ವೈರಲ್​ ಆಯ್ತು ಕೆಜಿಎಫ್​ ಬ್ಯೂಟಿ ಶ್ರೀನಿಧಿ ಶೆಟ್ಟಿಯ ಹಾಟ್​ ಅವತಾರಗಳು!

ಹಾಯ್​ ಗಯ್ಸ್​ ನೀವೇಕೆ ಒಮ್ಮೆ ಪ್ರಯತ್ನಿಸಬಾರದು…ಹೊಸ ವೇಷ ಹಾಕಿ ಪ್ರಧಾನಿ ಮೋದಿ ವ್ಯಂಗ್ಯವಾಡಿದ ಪ್ರಕಾಶ್​ ರಾಜ್!​

ಟ್ಯಾಕ್ಸಿ ಸೇವೆಯಲ್ಲಿ ಲೂಟಿ!: ಸರ್ಕಾರ ನಿಗದಿಪಡಿಸಿದ ದರಕ್ಕಿಂತ 3 ಪಟ್ಟು ಹೆಚ್ಚು ವಸೂಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 17 =
Remember me
