ಚಿಕ್ಕಬಳ್ಳಾಪುರ:ಮನೆಯಿಂದ ತಂದೆಯನ್ನು ಹೊರಹಾಕಿದ್ದ‌ ಮಗನಿಗೆ ನ್ಯಾಯಾಲಯ ತಕ್ಕಶಾಸ್ತಿ ಮಾಡಿದೆ. ಮನೆಯಿಂದ ಮಗನನ್ನೇ ಹೊರಹಾಕುವಂತೆ ಕೋರ್ಟ್​ ಪೊಲೀಸರಿಗೆ ಸೂಚನೆ ನೀಡಿದೆ.
ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಅಂಜನಿ ಬಡಾವಣೆಯಲ್ಲಿ ನಡೆದಿದೆ. ನಿವೃತ್ತ ಪ್ರಾಧ್ಯಾಪಕ ಮುನಿಸ್ವಾಮಿ ಅವರನ್ನು ಮಗ ಎಂ.ಸುಭಾಷ್ ಮತ್ತು ಸೊಸೆ ಮಂಜುಳಾ ಬಲವಂತಾಗಿ ಮನೆಯಿಂದ ಹೊರಹಾಕಿದ್ದರು. ಅಂಜನಿ ಬಡಾವಣೆಯ ಮನೆಯನ್ನು ಮುನಿಸ್ವಾಮಿ ಸ್ವಯಾರ್ಜಿತವಾಗಿ ಖರೀದಿಸಿದ್ದರು.
ಮಗ ಮನೆಯಿಂದ ಹೊರ ಹಾಕಿದ್ದನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರದ ಎಸಿ ಕೋರ್ಟ್ ಮತ್ತು ಹೈಕೋರ್ಟ್​ಗಳಲ್ಲಿ ಮುನಿಸ್ವಾಮಿ ಅರ್ಜಿ ಸಲ್ಲಿಸಿದ್ದರು. ಇದೀಗ ವಿಚಾರಣೆ ನಡೆಸಿರುವ ಕೋರ್ಟ್​, ಅಕ್ರಮವಾಗಿ ಮನೆ ಪ್ರವೇಶಿಸಿದ್ದ ಮಗ ಸುಭಾಷ್ ಮತ್ತು ಸೊಸೆ ಮಂಜುಳಾರನ್ನು ಹೊರಹಾಕಿ ಮುನಿಸ್ವಾಮಿ ಪ್ರವೇಶ ಕಲ್ಪಿಸುವಂತೆ ಪೊಲೀಸರಿಗೆ ಆದೇಶ ಹೊರಡಿಸಿದೆ.
ಕೋರ್ಟ್​ನ ಆದೇಶದಂತೆ ಮಗ ಮತ್ತು ಸೊಸೆಯನ್ನ ಹೊರಹಾಕಿರುವ ಚಿಂತಾಮಣಿ ಪೊಲೀಸರು ಮುನಿಸ್ವಾಮಿಗೆ ಪ್ರವೇಶ ಕಲ್ಪಿಸಿದ್ದಾರೆ. ಮನೆಯಿಂದ ಹೊರಹಾಕಿದ್ದಕ್ಕೆ ಮುನಿಸ್ವಾಮಿ ವಿರುದ್ಧ ಮಗ ಮತ್ತು ಸೊಸೆ ಹಿಡಿಶಾಪ ಹಾಕಿದ್ದಾರೆ. ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳಿಗೆ ಈ ತೀರ್ಪು ಎಚ್ಚರಿಕೆ ಗಂಟೆಯಾಗಿದೆ.(ದಿಗ್ವಿಜಯ ನ್ಯೂಸ್​)
VIDEO| ಕಾರು ಚಾಲಕನಿಂದ ಅಪಾಯಕಾರಿ ಯೂಟರ್ನ್​: ವೈರಲ್​ ವಿಡಿಯೋದ ಅಸಲಿಯತ್ತು ಇಲ್ಲಿದೆ…

ಕೆಲಸ ಮುಗಿಸಿಕೊಂಡು ಖುಷಿಯಿಂದಲೇ ಮನೆಗೆ ಮರಳಿದ ಪತಿಗೆ ಕಾದಿತ್ತು ಭಾರೀ ಆಘಾತ..!

ಮಹಾ ಪೈಪೋಟಿ!: ಜೇಮ್ಸ್​, ಆರ್​ಆರ್​ಆರ್, ಬಚ್ಚನ್ ಪಾಂಡೆ..

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:nineteen + 9 =
Remember me
