ಬೆಂಗಳೂರು:ಕಾಂಗ್ರೆಸ್​ ನಾಯಕ ಹಾಗೂ ವಯನಾಡು ಕ್ಷೇತ್ರದ ಸಂಸದ ರಾಹುಲ್​ ಗಾಂಧಿ ಅವರ ವಿದೇಶ ಪ್ರವಾಸವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್​ ಬಗ್ಗೆ ರಾಜ್ಯ ಬಿಜೆಪಿ ಕೂನಲ್ಲಿ ವ್ಯಂಗ್ಯವಾಡಿದೆ.
ರಾಹುಲ್​ ಎಲ್ಲಿದ್ದೀಯಪ್ಪಾ ಎಂಬ ಹ್ಯಾಸ್​ಟ್ಯಾಗ್​ನೊಂದಿಗೆ ಕಾಂಗ್ರೆಸಿಗರಿಗೊಂದು ಕ್ವಿಜ್ ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ಸರಣಿ ಕೂ ಮಾಡಿದೆ.
ಕಾಂಗ್ರೆಸ್ ಪಕ್ಷದ ಮಹತ್ವದ ಸಭೆಗೆ ಮುಹೂರ್ತ ನಿಗದಿಯಾದಾಗ ರಾಹುಲ್ ಗಾಂಧಿ ವಿದೇಶ ಪ್ರವಾಸ ತೆರಳುತ್ತಾರೋ? ಅಥವಾ ರಾಹುಲ್ ಗಾಂಧಿ ವಿದೇಶಕ್ಕೆ ಪ್ರವಾಸಕ್ಕೆ ತೆರಳಿದಾಗ ಕಾಂಗ್ರೆಸ್ ಸಭೆ ನಿಗದಿಯಾಗುತ್ತದೆಯೋ?
ಕಾಂಗ್ರೆಸ್‌ ಪಕ್ಷ ಸಂಕಷ್ಟದಲ್ಲಿರುವಾಗಲೆಲ್ಲ ಪಕ್ಷ ಕರೆಯುವ ಪ್ರಮುಖ ಸಭೆಗಳಿಗೂ ಮುನ್ನ ರಾಹುಲ್‌ ಗಾಂಧಿ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಲಂಡನ್, ನೇಪಾಳ, ಇಟಲಿ, ಹೀಗೆ ವರ್ಷದಾದ್ಯಂತ ತಿರುಗಾಡುವ ರಾಹಲ್‌ ಗಾಂಧಿಗೆ ವಯನಾಡಿಗೆ ತೆರಳಲು ಸಮಯವೇ ಇಲ್ಲ. ಅಮೇಥಿಯ ಫಲಿತಾಂಶ ವಯನಾಡಿನಲ್ಲೂ ಮರುಕಳಿಸುವುದು ಸ್ಪಷ್ಟ.
ತನ್ನದೇ ಪಕ್ಷದ ನೀತಿ-ನಿರೂಪಣಾ ಸಭೆಗೆ ಚಕ್ಕರ್ ಹಾಕುವ ವ್ಯಕ್ತಿಯಿಂದ ರಾಷ್ಟ್ರ ಮುನ್ನಡೆಸಲು ಸಾಧ್ಯವೇ? ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿ ಬ್ಯುಸಿ ಇರುವುದರಿಂದ ಭಾರತ್ ಜೋಡೋ ಯಾತ್ರೆಯ ಸಿದ್ಧತಾ ಸಭೆಯನ್ನು ಯುರೋಪ್‌ಗೆ ವರ್ಗಾಯಿಸಲಾಗುತ್ತದೆಯೇ?
–BJP KARNATAKA (@BJP4Karnataka)13 July 2022

ಪಂಜಾಬ್, ಉತ್ತರ ಪ್ರದೇಶ ಚುನಾವಣೆಗಳಲ್ಲಿ ಸೋತ ನಂತರ ಕೊನೆಯ ಪಕ್ಷ ಸೋಲಿನ ಅವಲೋಕನ, ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬಹುದಿತ್ತು. ಆದರೆ ಕಾಂಗ್ರೆಸ್‌ ಯುವರಾಜ ನೇಪಾಳಕ್ಕೆ ಹೋಗಿ ಮೋಜು ಮಸ್ತಿ ಮಾಡುತ್ತಿದ್ದರು. ಇಂತಹ ನಾಯಕತ್ವ ಹೊಂದಿರುವ ಪಕ್ಷ ಭಾರತದಿಂದ ಮುಕ್ತವಾಗದಿರಲು ಯಾವ ಕಾರಣಗಳಿವೆ?
ಅಕ್ಟೋಬರ್ ತಿಂಗಳಲ್ಲಿ ಭಾರತ್ ಜೋಡೋ ಯಾತ್ರೆ, ಉಳಿದ ಎಲ್ಲಾ ತಿಂಗಳು ಭಾರತದಿಂದ ವಿದೇಶಕ್ಕೆ ಓಡೋ ಯಾತ್ರೆ! ನಕಲಿ ಗಾಂಧಿ ವಂಶದ ಕುಡಿಯ ರಾಜಕಾರಣ.
ಸೋಲು ಹಾಗೂ ಸಿದ್ಧತೆ ಎಂದರೆ ರಾಹುಲ್ ಗಾಂಧಿ ಅವರಿಗೆ ಬೇಸರವೇ? ಏಕೆಂದರೆ, ಪಂಜಾಬ್, ಯುಪಿ ಚುನಾವಣೆ ಸೋತಾಗ ನೇಪಾಳ ಯಾತ್ರೆ. ಅಗ್ನಿವೀರ್ ಟೂಲ್ ಕಿಟ್ ಮಕಾಡೆ ಬಿದ್ದಾಗ ಲಂಡನ್ ಜಾತ್ರೆ. ಗೋವಾ ಕಾಂಗ್ರೆಸ್ ಇಕ್ಕಟ್ಟಿಗೆ ಸಿಕ್ಕಾಗ ಯುರೋಪ್ ಮಾತ್ರೆ. ವ್ಹಾವ್‌, ಉತ್ತರ ಕುಮಾರ ರಾಹುಲ್ ಎಂದು ಬಿಜೆಪಿ ಸರಣಿ ಕೂ ಮೂಲಕ ವ್ಯಂಗ್ಯವಾಡಿದೆ.
–BJP KARNATAKA (@BJP4Karnataka)13 July 2022

ಇದು ಲೋನ್​​ ಆ್ಯಪ್​ ಹಿಂದಿನ ಕರಾಳತೆ: 20 ಸಾವಿರ ರೂ. ಸಾಲಕ್ಕೆ 2 ಲಕ್ಷ ಪಾವತಿಸಿದ್ರೂ ಮಹಿಳೆಗೆ ಬದ್ಕೋಕೆ ಬಿಡ್ಲಿಲ್ಲ

ಹೀಗೆ ಸುಮ್ಮನಿದ್ದರೆ ಪ್ಯಾನ್​ ಇಂಡಿಯಾ ಕ್ರೇಜ್​ ಕಣ್ಮರೆಯಾಗಲಿದೆ… ಯಶ್​ ತಕ್ಷಣ ಈ ಕೆಲ್ಸ ಮಾಡಲೇಬೇಕಿದೆ!

PSI ಚಿತ್ರಹಿಂಸೆಗೆ ಅಮಾಯಕ ಬಲಿ: ವಿಜಯಪುರದ ಯುವಕನ ಈ ವಿಡಿಯೋ ನೋಡ್ತಿದ್ರೆ ಕರುಳು ಚುರ್​ ಅನ್ನುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
