ಚಾಮರಾಜನಗರ:ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್​ ಕೊರತೆಯಿಂದ 24 ಮಂದಿ ಸಾವಿಗೀಡಾದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ವೈದ್ಯಕೀಯ ಅವ್ಯವಸ್ಥೆಗೆ ಸಾಕ್ಷಿಯಾಗಿ ಭಾರಿ ಚರ್ಚೆಗೆ ಗ್ರಾಸವಾದ ಈ ಘಟನೆಯನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬ ಕೆಲ ಸ್ಫೋಟಕ ಮಾಹಿತಿಯನ್ನು ನೀಡಿದ್ದಾನೆ.
ಸೋಂಕಿತರು ಮೃತಪಡುವುದನ್ನು ಕಣ್ಣಾರೆ ಕಂಡು ಕಳೆದ ಸೋಮವಾರ ಬೆಳ್ಳಂಬೆಳ್ಳಗೆ ಆಸ್ಪತ್ರೆಯಿಂದ ಓಡಿಹೋದ ಕರೊನಾ ರೋಗಿ ದುರಂತದ ಕರಾಳತೆಯನ್ನು ದಿಗ್ವಿಜಯ ನ್ಯೂಸ್​ನಲ್ಲಿ ಬಿಚ್ಚಿಟ್ಟಿದ್ದಾನೆ.
ಭಾನುವಾರ ರಾತ್ರಿ 11.30ಕ್ಕೆ ಆಕ್ಸಿಜನ್ ಕೊರತೆ ಎದುರಾಯಿತು. ಸೋಂಕಿತರ ಚೀರಾಟ ಹಾಗೂ ನರಳಾಟ ಹೆಚ್ಚಾಯ್ತು. ನನ್ನ ಕಣ್ಣ ಮುಂದೆಯೇ ಸುಮಾರು 30 ರಿಂದ 40 ಮಂದಿ ಸತ್ತರು ಎಂದು ತಿಳಿಸಿದ್ದಾನೆ.
ನಾನು ಆಸ್ಪತ್ರೆಯ ಕೆಳಮಹಡಿಯಲ್ಲಿ ದಾಖಲಾಗಿದ್ದೆ. ಈ ಎಲ್ಲಾ ದೃಶ್ಯಗಳನ್ನು ಕಂಡು ಆಸ್ಪತ್ರೆಯಿಂದ ಓಡಿಹೋದೆ. ಸದ್ಯ ತೋಟದ ಮನೆಯಲ್ಲಿಯೇ ಇದ್ದೇನೆ. ನೀವು ಗುಣಮುಖರಾಗಿದ್ದೀರಿ ಎಂದು ಭಾನುವಾರ ರಾತ್ರಿ ತಿಳಿಸಿದ್ರು. ಅಲ್ಲೆ ಇದ್ರೆ ನಾನು ಸಹ ಸತ್ತು ಹೋಗುತ್ತೇನೆ ಎಂಬ ಭಯದಿಂದ ಆಸ್ಪತ್ರೆಯಿಂದ ಕಾಲ್ಕಿತ್ತೆ ಎಂದು ಪ್ರತ್ಯಕ್ಷದರ್ಶಿ ಹೇಳಿದರು.
ನನಗೆ ಈಗಲು ಸಾಕಷ್ಟು ಸುಸ್ತಾಗ್ತಿದೆ. ಈವರೆಗೆ ಆಸ್ಪತ್ರೆಯ ಯಾವೊಬ್ಬ ವೈದ್ಯರು ಸಹ ನನ್ನನ್ನು ಸಂಪರ್ಕಿಸಿಲ್ಲ ಎನ್ನುತ್ತಾ ಭಾನುವಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತ ಘಟನೆಯ ಕರಾಳತೆಯನ್ನು ಸೋಂಕಿತ ಬಿಚ್ಚಿಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​)
ಚಾಮರಾಜನಗರ ಆಕ್ಸಿಜನ್​ ದುರಂತ: ರಹಸ್ಯ ಬಿಚ್ಚಿಟ್ಟ ಅಧಿಕಾರಿಗಳ ವಾಟ್ಸ್​ಆ್ಯಪ್​ ಗ್ರೂಪ್​ ಚಾಟಿಂಗ್​!

ಮೈಸೂರು ಡಿಸಿ v/s ಚಾಮರಾಜನಗರ ಡಿಸಿ: ರೋಹಿಣಿ ಸಿಂಧೂರಿ ಸುಳ್ಳು ಲೆಕ್ಕ ಕೊಟ್ಟು ಸಿಕ್ಕಿಬಿದ್ರಾ?

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ 14 ಮಂದಿ ಸಾವು: ಸಾಕಷ್ಟು ಆಕ್ಸಿಜನ್​ ಇದ್ದರೂ ಮೃತಪಟ್ಟಿದ್ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + thirteen =
Remember me
