ಒಂದು ತಿಂಗಳ ಕಾಲ ಸೈಲೆಂಟ್ಆಗಿದ್ದ ಕೊಳ್ಳಿಭೂತ ಇದೀಗ ಮತ್ತೆ ಎಂಟ್ರಿ ಕೊಡುತ್ತಿದೆ. ದೇಶದಲ್ಲಿ ಅಬ್ಬರಿಸಿ ಬೊಬ್ಬಿರಿದ ಕರೊನಾವೈರಸ್, ಕೆಲ ದಿನಗಳ ಹಿಂದೆ ಮರೆಯಾಗೇ ಹೋಯ್ತು ಅಂತಾ ಎಲ್ಲರೂ ಅಂದುಕೊಂಡರು. ಎರಡನೇ ಅಲೆಯಲ್ಲಿ ಗುಡಿಸಿ ಗುಂಡಾಂತರ ಮಾಡಿದ ಕರೊನಾ ಹೆಮ್ಮಾರಿ, ಇದೀಗ ಮೂರನೇ ಅಲೆ ರೂಪದಲ್ಲಿ ವಕ್ಕರಿಸುತ್ತಿದೆ. ಇಡೀ ದೇಶದಲ್ಲೂ ಅಷ್ಟೇ ಕೆಲ ದಿನಗಳ ಹಿಂದೆ 29 ಸಾವಿರಕ್ಕೆ ಇಳಿದ ಕರೊನಾ ಕೇಸ್​​ಗಳ ಸಂಖ್ಯೆ ಇದೀಗ ದಿಡೀರ್ ಅಂತಾ 40-41 ಸಾವಿರ ದಾಟಿದೆ. ಸತತ ನಾಲ್ಕನೇ ದಿನ 40 ಪ್ಲಸ್ ಕರೊನಾ ಕೇಸ್​ಗಳಿಗೆ ಸಾಕ್ಷಿಯಾಗಿದೆ ಭಾರತ.
ರಾಜ್ಯದಲ್ಲೂ ಕರೊನಾ ಮಹಾಮಾರಿ ಮೂರನೇ ಅಲೆ ಕಾರ್ಮೋಡ ಆವರಿಸಿದೆ. ಬೆಂಗಳೂರಿನಲ್ಲೂ ನಿಧಾನವಾಗಿ ಗರಿಬಿಚ್ಚುತ್ತಿದೆ ಕರೊನಾವೈರಸ್ ಸೋಂಕು. ಯಾವಾಗ ನೆರೆ ಕೇರಳ, ಮಹಾರಾಷ್ಟ್ರಗಳಲ್ಲೂ ಕರೊನಾ ಕುಣಿತ ಒಂದೇ ಸಮನೆ ಹೆಚ್ಚಾಗುತ್ತಾ ಸಾಗಿತೋ ಬೆಂಗಳೂರು ಕೂಡ ಕರೊನಾವೈರಸ್​ ಕೇಸ್​ಗಳ ಸಂಖ್ಯೆ ಹೆಚ್ಚಳದಿಂದ ಬೆಚ್ಚಿಬಿದ್ದಿದೆ. ಕೊನೆಗೆ ಅನಿವಾರ್ಯ ಎಂಬಂತೆ ಬ್ರಹ್ಮಾಸ್ತ್ರವನ್ನ ಪ್ರಯೋಗಿಸೋಕೆ ಮುಂದಾಗಿದೆ ಬಿಬಿಎಂಪಿ..ಅದುವೇ ಸೀಲ್​​ಡೌನ್.!
ಹೌದು..ಬೆಂಗಳೂರಿನಲ್ಲಿ ಯಾವಾಗ ಮೂರನೇ ಅಲೆಯ ಹೊಸ ರೂಪದೊಂದಿಗೆ ಕರೊನಾ ದಾಂಗುಡಿ ಇಡೋ ಲಕ್ಷಣ ತೋರಿತೋ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಅಲರ್ಟ್​ ಆಗಿದೆ. ಈ ಹಿನ್ನೆಲೆಯಲ್ಲಿ ಮೂರಕ್ಕಿಂತ ಹೆಚ್ಚು ಕರೊನಾ ಕೇಸ್​ಗಳಿರೋ ಏರಿಯಾ ವನ್ನ ಸೀಲ್​​ಡೌನ್ ಮಾಡೋಕೆ ಬಿಬಿಎಂಪಿ ಮುಂದಾಗಿದೆ. ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ ಹಲವೆಡೆ ಸೀಲ್​ಡೌನ್​​​ ಘೋಷಿಸಲಾಗಿದೆ. ಹಿಂದೆಂದಿಗಿಂತಲೂ ಈ ಬಾರಿ ಅತಿ ಕಠಿಣ ಕ್ರಮಗಳ ಜಾರಿಗೆ ಮುಂದಾಗಿರೋ ಬಿಬಿಎಂಪಿ, ಈ ಸಲ ಸೋಂಕಿ ತರ ಮನೆ ಗೇಟ್​​ಗೆ ರೆಡ್​ಟೇಪ್ ಹಾಕುತ್ತಿದೆ. ಇಡೀ ರಸ್ತೆಯನ್ನೇ ಬ್ಯಾರಿಕೇಡ್ ಮುಖಾಂತರ ಕ್ಲೋಸ್ ಮಾಡಲಾಗುತ್ತಿದೆ. ಈಗಾಗಲೇ ಯಲ ಹಂಕದ ಅಟ್ಟೂರು ಲೇಔಟ್​​ನಲ್ಲಿ ಸೀಲ್​ಡೌನ್ ಘೋಷಿಸಲಾಗಿದೆ. ಇದಲ್ಲದೆ, ಐಐಟಿ ಕೋಚಿಂಗ್ ಸೆಂಟರ್ ಅನ್ನ ಕೂಡ ಬಿಬಿಎಂಪಿ ಸೀಲ್​ಡೌನ್ ಮಾಡಿದೆ.
14 ದಿನಗಳ ಕಾಲ ಕ್ವಾರೆಂಟೈನ್​​​ಗೆ ಬಿಬಿಎಂಪಿ ಸೂಚನೆಇನ್ನ, ಬೆಂಗಳೂರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ಅಪಾರ್ಟ್​ಮೆಂಟ್​​ಗಳಲ್ಲಿ ಕರೊನಾ ಕೇಸ್​​ಗಳ ಸಂಖ್ಯೆ ಹೆಚ್ಚುತ್ತಿದೆ. ಮಹ ದೇವಪುರ ಬಳಿಕ ಪಶ್ಚಿಮ ವಲಯದಲ್ಲೂ ಅಪಾರ್ಟ್​ಮೆಂಟ್​ಗಳಲ್ಲಿ ಹೆಚ್ಚಿನ ಕೇಸ್​ ಪತ್ತೆಯಾಗಿವೆ. ಮಹಾಲಕ್ಷ್ಮಿ ಲೇಔಟ್​​ ರೆನಸಾನ್ಸ್​​ ಟೆಂಪಲ್ ಬೆಲ್ಸ್​ ಅಪಾರ್ಟ್​ಮೆಂಟೊಂದರಲ್ಲೇ ಹೊಸದಾಗಿ 16 ಕೇಸ್​ಗಳು ಕಂಡುಬಂದಿವೆ. ಧಾರವಾಡ ಟ್ರಾವೆಲ್ ಹಿಸ್ಟರಿ ಹೊಂದಿದ ಕುಟುಂಬಕ್ಕೆ ಕರೊನಾ ಸೋಂಕು ತಗುಲಿದೆ. ಇದಲ್ಲದೇ ದೆಹಲಿಯಿಂದ ವಾಪಸ್ ಆದ ಮಂದಿಗೂ ಕರೊನಾ ಸೋಂಕು ಅಟಕಾಯಿಸಿ ಕೊಂಡಿದೆ. ಹೀಗಾಗಿ ಈ ಅಪಾರ್ಟ್​ಮೆಂಟ್​ನ ಭಾಗವನ್ನ ಕರೊನಾ ಕ್ಲಸ್ಟರ್ ಎಂದೇ ಪರಿಗಣಿಸಿರೋ ಬಿಬಿಎಂಪಿ, 72 ಮನೆಗಳನ್ನ ಹೊಂದಿದ ಎ ಬ್ಲಾಕ್​ ಅನ್ನ ಸಂಪೂರ್ಣ ಸೀಲ್ ಡೌನ್ ಮಾಡಿದೆ. ಸೋಂಕಿತರು ಹಾಗೂ ಸಂಪರ್ಕಿತರಿಗೆ14 ದಿನಗಳ ಕಾಲ ಕ್ವಾರೆಂಟೈನ್​​​ಗೆ ಸೂಚನೆ ಕೊಟ್ಟಿರೋ ಬಿಬಿಎಂಪಿ, ಮನೆಗಳಿಂದ ಯಾರೂ ಹೊರಬಾರದಂತೆ ಬಿಬಿಎಂಪಿ ಕಟ್ಟಪ್ಪಣೆ ವಿಧಿಸಿದೆ.
ಮೊದಲ ಅಲೆ ಬಳಿಕ ಸೀಲ್​ಡೌನ್ ಪದ ಬಳಕೆ ಪ್ರಮಾಣ ಕಡಿಮೆ ಇತ್ತು ಅಂತಾನೇ ಹೇಳಬಹುದು. ಆದ್ರೆ, ಸಂಭಾವ್ಯ ಮೂರನೇ ಅಲೆ ಬಗ್ಗೆ ತಜ್ಞರು ಕೊಟ್ಟ ಎಚ್ಚರಿಕೆಗೆ ಬೆದರಿದ ಬಿಬಿಎಂಪಿ, ಇದೀಗ ಕಠಿಣ ನಿಯಮಗಳನ್ನ ಜಾರಿಗೊಳಿಸೋ ಮೂಲಕ ಕರೊನಾಗೆ ಲಗಾಮು ಹಾಕೋ ಯತ್ನ ನಡೆಸಿದೆ. ಇದರಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಕೂಡ ತಂತಮ್ಮ ಮಟ್ಟದಲ್ಲಿ ಕರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನ ಅನುಸರಿ ಸಬೇಕು ಅಂತಾ ಜಂಟಿ ಆಯುಕ್ತರಿಗೆ ಆರ್ಡರ್ ಮಾಡಿದ್ದಾರೆ.
ಬಿಬಿಎಂಪಿ ಏಕೆ ಏಕಾಏಕಿ ಸೀಲ್​ಡೌನ್​ನಂತಹ ಸ್ಟ್ರಿಕ್ಟ್ ಆಕ್ಷನ್ ಕೈಗೊಂಡಿದೆ ಅಂತಾ ನೋಡಿದ್ರೆ, ಕಾಣಸಿಗುತ್ತಿವೆ ಶಾಕ್ ಆಗುವಂತಹ ಅಂಕಿ-ಅಂಶ. ಕಳೆದ 4-5 ದಿನಗಳ ಹಿಂದೆ ದೇಶದಲ್ಲಿ ಕರೊನಾ ಇಳಿಮುಖ ಕಂಡಿದ್ದ ಕರೊನಾ ಕೇಸ್​ಗಳ ಸಂಖ್ಯೆ ಕಳೆದ ನಾಲ್ಕು ದಿನಗಳಿಂದ ದಿಢೀರ್ ಆಕಾಶದತ್ತ ಮೊಗ ಮೇಲಿಟ್ಟಿದೆ. ದೇಶದಲ್ಲಿ ಕಳೆದ ಮೂರು ದಿನಗಳ ಕರೊನಾ ಕೇಸ್​ ರಿಪೋರ್ಟ್​ ನೋಡಿದ್ರೆ ಮೂರನೇ ಅಲೆಗೆ ಇದು ಮುನ್ನುಡಿಯಾ ಎಂಬ ಅನುಮಾನ ಬಾರದೇ ಇರದು.
ಏಕೇಂದ್ರೆ ಜುಲೈ 30ಕ್ಕೆ ಹೊಸದಾಗಿ 41,649 ಇದ್ದ ಕೇಸ್​ಗಳ ಲೆಕ್ಕ ಜುಲೈ 29ಕ್ಕೆ 44,230 ತಲುಪಿದೆ. ಹಾಗೆಯೇ ಜುಲೈ 28ರಂದು 43,509 ಕೇಸ್​ಗಳು ಕಂಡುಬಂದಿವೆ. ಹೀಗಾಗಿ ಕರೊನಾ ಕೇಸ್​ಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರೋದು ಕನ್​ಫರ್ಮ್​ ಆಗಿದೆ. ಇನ್ನ ರಾಜ್ಯದ ಕರೊನಾ ಕೇಸ್​ಗಳ ಸ್ಥಿತಿಗತಿ ನೋಡಿದ್ರೆ, ಜುಲೈ 30ಕ್ಕೆ 1890 ಕರೊನಾ ಪ್ರಕರಣಗಳು ವರದಿಯಾಗಿದ್ರೆ, ಜುಲೈ 29ಕ್ಕೆ ಹೊಸ ದಾಗಿ 2052 ಕೇಸ್ ಕಂಡುಬಂದವು. ಹಾಗೆಯೇ ಜುಲೈ 28ಕ್ಕೆ 1531 ಹೊಸ ಪ್ರಕರಣಗಳು ದಾಖಲಾಗಿವೆ. ಇನ್ನೊಂದೆಡೆ, ರಾಜಧಾನಿ ಬೆಂಗಳೂರಿನಲ್ಲಿ ಕರೊನಾ ಕೇಸ್​ಗಳ ಸಂಖ್ಯೆ ನಿಧಾನವಾಗಿ ಏರಿಳಿತ ಕಾಣುತ್ತಿದೆ. ಜುಲೈ 30ರಂದು ಹೊಸ 426 ಪ್ರಕರಣ ಕಂಡುಬಂದ್ರೆ, ಜುಲೈ 29ಕ್ಕೆ ವರದಿಯಾದ ಕೇಸ್​ಗಳ ಲೆಕ್ಕ 506. ಇನ್ನ ಜುಲೈ 28ರಂದು ಇದ್ದ ಪ್ರಕರಣಗಳು 376.
ರಾಜ್ಯದಲ್ಲಿ ಕರೊನಾ ಆತಂಕಕ್ಕೆ ಮತ್ತೊಂದು ಮುಖ್ಯ ಕಾರಣ ಅಂದ್ರೆ ನೆರೆರಾಜ್ಯ ಕೇರಳದಲ್ಲಿ ಒಂದೇ ಸಮನೆ ಏರುತ್ತಿರೋ ಕರೊನಾ ವೈರಸ್ ಕೇಸ್​. ದೇಶದ ಅರ್ಧಕ್ಕೂ ಹೆಚ್ಚು ಭಾಗದ ಕರೊನಾ ಕೇಸ್​ ಕೇರಳವೊಂದರಲ್ಲೇ ದಾಖಲಾಗುತ್ತಿರೋದು ಇಡೀ ದೇಶಕ್ಕೇ ನಡುಕ ತಂದಿದೆ. ಮೊದಲೇ ಗಡಿಗೆ ಹೊಂದಿಕೊಂಡಿರೋ ಕರ್ನಾಟಕದಲ್ಲಂತೂ ಕೇರಳದ್ದೇ ಢವಢವ. ಕೇರಳದಲ್ಲಿನ ಕೇಸ್​​ಗಳ ಬಗ್ಗೆ ಅವಲೋಕಿಸಿದ್ರೆ,
ದೇವರನಾಡೆಂದೇ ಖ್ಯಾತಿವೆತ್ತ ಕೇರಳದಲ್ಲಿ ಜುಲೈ 30ರಂದು ವರದಿಯಾದ ಕರೊನಾವೈರಸ್ ಪ್ರಕರಣಗಳ ಸಂಖ್ಯೆ 24,064. ಅಂದ್ರೆ ದೇಶದ ಒಟ್ಟಾರೆ ಶೇ.60 ಕೇಸ್​​ ಕೇರಳವೊಂದರಲ್ಲೇ ಕಂಡುಬಂದಿದೆ. ಜುಲೈ 29ರಂದು ಕೇರಳ ಹೊಸದಾಗಿ 22,064 ಪ್ರಕರಣಗಳಿಗೆ ಸಾಕ್ಷಿ ಯಾಗಿತ್ತು. ಜುಲೈ 28ಕ್ಕೆ 22,129 ಹೊಸ ಪ್ರಕರಣಗಳು ಕೇರಳದಲ್ಲಿ ರಿಪೋರ್ಟ್​ ಆಗಿವೆ. ಕೇರಳದಲ್ಲಿ ಅದಾಗಲೇ ಕರೊನಾ ಮೂರನೇ ಅಲೆ ದಾಂಗುಡಿ ಇಟ್ಟಿದ್ಯಾ ಎಂಬ ಡೌಟ್ ಕಾಡುತ್ತಿದೆ. ಮೊದಲೇ ಗಡಿಹಂಚಿಕೊಂಡಿರೋ ಕರ್ನಾಟಕದಲ್ಲಿ ಇದೀಗ ಹೈ ಅಲರ್ಟ್​ ಘೋಷಿಸ ಲಾಗಿದೆ. ಬೆಂಗಳೂರನೊಂದಿಗೆ ಕೇರಳೀಯರ ಸಂಪರ್ಕ ಹೆಚ್ಚಿರೋದ್ರಿಂದ ಸಹಜವಾಗೇ ಸಿಲಿಕಾನ್ ಸಿಟಿ ಮಂದಿಗೂ ಭೀತಿ ಅಧಿಕವಾಗಿದೆ.
ಗಡಿ ಚೆಕ್​ಪೋಸ್ಟ್​​​​ಗಳಲ್ಲಿ ತೀವ್ರ ನಿಗಾಯಾವಾಗ ಕೇರಳ, ಮಹಾರಾಷ್ಟ್ರಗಳಲ್ಲಿ ಕರೊನಾ ಕೇಸ್​ ಸಂಖ್ಯೆ ರಾಕೆಟ್ ವೇಗ ಕಂಡುಬಂತೋ, ರಾಜ್ಯ ಸರ್ಕಾರ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದೆ. 2 ಡೋಸ್ ಲಸಿಕೆ ಪಡೆ ದಿದ್ರೂ ಈ ಎರಡು ರಾಜ್ಯಗಳಿಂದ ರಾಜ್ಯ ಪ್ರವೇಶಕ್ಕೆ ನೆಗೆಟಿವ್ ವರದಿ​ ಕಡ್ಡಾಯಗೊಳಿಸ ಲಾಗಿದೆ. 72 ಗಂಟೆಯೊಳಗಿನ RTPCR ರಿಪೋರ್ಟ್​ ಅನ್ನ ಹಾಜರುಪಡಿಸಿದ್ರೆ ಮಾತ್ರ ರಾಜ್ಯಕೆಕ ಎಂಟ್ರಿ ಎಂಬ ರೂಲ್ಸ್ ಅನ್ನ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯಲ್ಲಿ ಜಾರಿಗೆ ತಂದಿದೆ. ಅಲ್ಲದೇ, ಈ ರಾಜ್ಯಗಳ ಜತೆ ಗಡಿಹಂಚಿಕೊಂಡಿರೋ ಭಾಗದ ಚೆಕ್​​​​ಪೋಸ್ಟ್​​​​ಗಳಲ್ಲಿ ತೀವ್ರ ನಿಗಾ ಇಡೋಕೆ ಸರ್ಕಾರ ಕಟ್ಟಪ್ಪಣೆ ಮಾಡಿದೆ.ಫ್ಲೋ
8 ಜಿಲ್ಲೆ ಅಧಿಕಾರಿಗಳ ಜತೆ ಸಿಎಂ ಮೀಟಿಂಗ್ !ರಾಜ್ಯಕ್ಕೆ ಈಗ ಕರೊನಾತಂಕ ಮನೆ ಮಾಡಿದೆ. ಯಾವುದೇ ಕ್ಷಣದಲ್ಲೋ ಮೂರನೇ ಅಲೆ ಸ್ಫೋಟಿಸೋ ಭಯ ಆವರಿಸಿದೆ. ಇದಕ್ಕೆ ಮೂಲ ಕಾರಣ ನೆರೆರಾಜ್ಯ ಕೇರಳ. ಯಾವಾಗ ಕೇರಳದಲ್ಲಿ ನಿತ್ಯ ಕೇಸ್​ಗಳ ಪ್ರಮಾಣ 24-25 ಸಾವಿರ ಆಸುಪಾಸಿನಲ್ಲಿದ್ಯೋ, ಇದೆಲ್ಲಿ ರಾಜ್ಯಕ್ಕೂ ಕಂಟಕವಾಗಿಬಿಡುತ್ತೋ ಅನ್ನೋ ಭೀತಿ ರಾಜ್ಯಕ್ಕೆ ಉಂಟಾಗಿದೆ. ಹೀಗಾಗಿ ಕೇರಳ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದ ಜತೆ ಹೆಚ್ಚಿನ ಸಂಪರ್ಕ ಹೊಂದಿರೋ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಗಡಿಭಾಗಗಳಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಕಮೀಷನರೇಟ್ ನ 6 ಕಡೆ ಸೇರಿದಂತೆ ಒಟ್ಟಾರೆ ದಕ್ಷಿಣ ಕನ್ನಡ ಜಿಲ್ಲೆ ಗಡಿಭಾಗದ 16 ಕಡೆ ಚೆಕ್​ಪೋಸ್ಟ್ ತೆರೆಯಲಾಗಿದೆ. ಕೇರಳದಿಂದ ರಾಜ್ಯಕ್ಕೆ ಆಗಮಿಸೋ ಪ್ರತಿಯೊಬ್ಬರನ್ನೂ ತಪಾಸಣೆಮಾಡಲಾಗುತ್ತಿದೆ. ವ್ಯಾಕ್ಸಿನ್ ಪಡೆದವರು ಹಾಗೂ ನೆಗೆಟಿವ್ ರಿಪೋರ್ಟ್​ ಇದ್ದವರಿಗೆ ಮಾತ್ರ ಗಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಂದೊಮ್ಮ ಟೆಸ್ಟ್ ಮಾಡಿಸದಿದ್ರೆ, ಸ್ಥಳದಲ್ಲೇ ರ್ಯಾಂಡಮ್ ಕರೊನಾ ಟೆಸ್ಟ್ ಕೈಗೊಳ್ಳೋ ವ್ಯವಸ್ಥೆಯನ್ನ ಕೂಡ ಮಾಡಿಕೊಳ್ಳಲಾಗಿದೆ.
ಕೊಡಗಿನಲ್ಲೂ ಕರೊನಾ ಪಾಸಿಟಿವಿಟ ರೇಟ್ 4 ಕ್ಕೂ ಹೆಚ್ಚಿನ ದರದಲ್ಲಿ ಇರೋದು ಆತಂಕ ಮೂಡಿಸಿದೆ. ಇದರ ಜತೆಗೆ ಕರೊನಾ ಉಪಟಳ ಹೆಚ್ಚಿರೋ ಕೇರಳದ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆ ಗಡಿ ಪ್ರವೇಶಿಸುವವರ ಬಳಿ ನೆಗೆಟಿವ್ ರಿಪೋರ್ಟ್​ ಕಡ್ಡಾಯ ಗೊಳಿಸಲಾಗಿದೆ. ಅಲ್ಲದೇ, ನೆಗೆಟಿವ್ ವರದಿ ರಿಪೋರ್ಟ್​ ಇಲ್ಲದವರಿಗೆ ಸ್ಥಳದಲ್ಲೇ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಗಡಿಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಜಿಲ್ಲೆಯ ಗಡಿಭಾಗಗಳಲ್ಲೂ ಚೆಕ್​ಪೋಸ್ಟ್​ ರಚಿಸಲಾಗಿದೆ. ಇಲ್ಲೂ ನೆಗೆಟಿವ್ ರಿಪೋರ್ಟ್​ ಇದ್ರಷ್ಟೇ ಕರ್ನಾಟಕಕ್ಕೆ ಎಂಟ್ರಿ ನೀಡಲಾಗುತ್ತಿದೆ. ಕೇರಳದ ಗಡಿಭಾಗಗಳಲ್ಲಿ ಅಲರ್ಟ್​ ಅಲ್ಲದೇ, ಮಹಾರಾಷ್ಟ್ರ ಬಾರ್ಡರ್​ಗಳಲ್ಲೂ ಎಚ್ಚರ ವಹಿಸಲಾಗಿದೆ. ಬೆಳಗಾವಿ, ಕಲಬುರಗಿ ಮುಂ ತಾದ ಜಿಲ್ಲೆಗಳ ಗಡಿಪ್ರದೇಶಗಳ ಚೆಕ್​ಪೋಸ್ಟ್​​​ಗಳಲ್ಲಿ ತಪಾಸಣೆ ಕೈಗೊಳ್ಳಲಾಗುತ್ತಿದೆ.
ಇನ್ನ, ಗಡಿಜಿಲ್ಲೆ ಬೀದರ್​ನಲ್ಲೂ ಗಡಿಭಾಗಗಳಲ್ಲಿ ಕಟ್ಟೆಚ್ಚರದಲ್ಲಿರಲಾಗಿದೆ. ನೆಗೆಟಿವ್ ವರದಿ ಇಲ್ಲದೇ ಗಡಿಯೊಳಗೆ ಯಾರನ್ನೂ ಬಿಟ್ಟು ಕೊಳ್ಳು ತ್ತಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಚೆಕ್​ಪೋಸ್ಟ್​​​ಗಳಲ್ಲೇ ಕೋವಿಡ್ ಟೆಸ್ಟ್ ಮಾಡೋ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಅಲ್ಲದೇ ಸಣ್ಣಪುಟ್ಟ ರಸ್ತೆಗಳ ಮೂಲಕ ಕಳ್ಳದಾರಿಗಳಲ್ಲಿ ಒಳಪ್ರವೇಶಿಸೋದರ ತಡೆಗೆ ಸರ್​ಪ್ರೈಸ್ ಸ್ಕ್ವಾಡ್​​ಗಳನ್ನ ಕೂಡ ರಚಿಸಲಾಗಿದೆ. ಇನ್ನೊಂದೆಡೆ, ರಾಜ್ಯದಲ್ಲಿ ಯಾವಾಗ ಕರೊನಾ ಮತ್ತೆ ಆರ್ಭಟಿಸೋ ಹಂತಕ್ಕೆ ಮುಟ್ಟಿತೋ, ಎಚ್ಚೆತ್ತ ಸಿಎಂ ಸಬವರಾಜ ಬೊಮ್ಮಾಯಿ 8 ಜಿಲ್ಲೆಗಳ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಕೇರಳ ಗಡಿಯಲ್ಲಿ ಕಟ್ಟುನಿಟ್ಟಿನ ನಿಗಾ, 3ನೇ ಅಲೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗಳನ್ನ ಸಜ್ಜುಗೊಳಿಸೋದು, ಆಕ್ಸಿಜನ್, ಹಾಸಿಗೆ, ಔಷಧ ಸರಬರಾಜು ಸೇರಿದಂತೆ ಹಲವು ಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ.
ಬೆಂಗಳೂರು ನಗರ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜ ನಗರ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಧಿ ಕಾರಿಗಳು, ಎಸ್​ಪಿ, ಸಿಈಓ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಬೊಮ್ಮಾಯಿ ಸಂವಾದ ನಡೆಸಿದ್ದಾರೆ. ಸಿಎಂ ಸಂವಾದದಲ್ಲಿ ಸರ್ಕಾರದ ಸಿಎಸ್​​ ರವಿಕುಮಾರ್, ಹೆಚ್ಚುವರಿ ಕಾರ್ಯದರ್ಶಿ, ಆರೋಗ್ಯ ಇಲಾಖೆ ಆಯುಕ್ತರು, ಪ್ರಧಾನಕಾರ್ಯದರ್ಶಿ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ಕರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಕೇರಳ, ಮಹಾರಾಷ್ಟ್ರ ಗಡಿಗಳಲ್ಲಿ ವಹಿಸಬೇಕಾದ ಮುಂಜಾಗೃತೆ ಸೇರಿದಂತೆ ಕರೊನಾ ಕಂಟ್ರೋಲ್​​ ಸಂಬಂಧ ಪಟ್ಟಂತೆ ಅಧಿಕಾರಿಗಳ ಜತೆ ಸಿಎಂ ಸಮಾಲೋಚನೆ ನಡೆಸಿದ್ದಾರೆ.
ಇನ್ನ, ಕರೊನಾ ಕೇಸ್ ಹೆಚ್ಚಿರೋ ಕೇರಳದಿಂದ ಗಡಿಭಾಗಗಳ ಮೂಲಕ ರಾಜ್ಯಕ್ಕೆ ಜನ ಬರೋದನ್ನ ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಅಂತಾ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಸ್ವಲ್ಪವೇ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ರಾಜ್ಯಕ್ಕೆ ಮೂರನೇ ಅಲೆ ಅಪ್ಪಳಿಸೋದು ಗ್ಯಾರೆಂಟಿ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ರಾಜ್ಯದಲ್ಲಿ ಕರೊನಾ ವೇರಿಯಂಟ್​​ಗಳ ದಾಂಗುಡಿ ಮೂರನೇ ಅಲೆ ವಕ್ಕರಿಸೋ ಭೀತಿಗೆ ಕಾರಣವಾಗಿದೆ. ಸ್ವಲ್ಪ ಲಯತಪ್ಪಿದರೂ ,ಎರಡನೇ ಅಲೆಯಲ್ಲಾದ ಅವಗಢಗಳ ರಿಪೀಟ್ ಫಿಕ್ಸ್.! ಹೊಸ ಸರ್ಕಾರ ಇತ್ತ ಗಮನಹರಿಸಿದ್ರೆ ಓಕೆ..ಇಲ್ಲದಿದ್ರೆ ಕರೊನಾ ಕಾದಸಲಾಕೆ.
ಬೇಕು 72 ಗಂಟೆಯೊಳಗಿನ RTPCR ರಿಪೋರ್ಟ್ಭಾರತೀಯ ಮಹಾಮಾರಿ ಡೆಲ್ಟಾ ರೂಪಾಂತರಿ, ಇಡೀ ಜಗತ್ತನ್ನೇ ಗಢಗಢ ನಡುಗಿಸುತ್ತಿದೆ. ಈಗಾಗ್ಲೇ ಅಮೆರಿಕಾ ಸೇರಿದಂತೆ ಹಲವೆಡೆ ಡೆಲ್ಟಾ ಕೊಡುತ್ತಿರೋ ಕಾಟ ಅಷ್ಟಿಷ್ಟಲ್ಲ. ಖುದ್ದು ಅಮೆರಿಕಾದ ಸಿಡಿಸಿ ಕೊಟ್ಟ ರಿಪೋರ್ಟ್​ ಪ್ರಕಾರ, ಡೆಲ್ಟಾ ರೂಪಾಂತರಿ ಈವರೆಗಿನ ಎಲ್ಲಾ ತಳಿಗಳಿಗಿಂತ ಅಪಾಯಕಾರಿ. ಇದು ಎಷ್ಟು ಮಾರಕ ಎಂದ್ರೆ 2 ಡೋಸ್ ಲಸಿಕೆ ಹಾಕಿಸಿಕೊಂಡಿದ್ರೂ, ಬೇರಯವರಿಗೆ ಸುಲಭವಾಗಿ ಹರಡ ಲಿದೆ ಈ ಮಹಾಮಾರಿ. ಇಡೀ ವಿಶ್ವದಲ್ಲಿ ಮರೆಯಾಗುವ ಹಂತ ತಲುಪಿದ್ದ ಕರೊನಾವೈರಸ್ ಇದೀಗ ಏಕಾಏಕಿ ಹೈಜಂಪ್ ಮಾಡಿದೆ. ಜಗತ್ತಿನ ಕಜೆಲವು ದೇಶಗಳಿಗೆ ಭಾರತೀಯ ಮೂಲದ ಡೆಲ್ಟಾ ವೇರಿಯಂಟ್ ಕೊಡಬಾರದ ಕಂಟಕ ತಂದಿಟ್ಟಿದೆ. ಅನೇಕ ದೇಶಗಳಿಗೆ ಶಾಕ್ ತಂದಿಟ್ಟಿದೆ ಶೀಘ್ರ ಹರಡೋ ಗುಣಲಕ್ಷಣ ಹೊಂದಿದ ಇಂಡಿಯನ್ ವೇರಿಯಂಟ್ ಡೆಲ್ಟಾ.
ಡೆಲ್ಟಾದಲ್ಲಿರೋ ಮಾರಣಾಂತಿಕ ಗುಣ ಕಂಡೇ ಜಗತ್ತಿನ ಖ್ಯಾತ ವಿಜ್ಞಾನಿಗಳು ಡೆಲ್ಟಾ ಬಗ್ಗೆ ಮೈಮರೀಬೇಡಿ ಅಂತಾ ಎಚ್ಚರಿಕೆ ಕೊಟ್ಟಿದ್ದಾರೆ. 2 ಡೋಸ್ ವ್ಯಾಕ್ಸಿನ್ ಪಡೆದರೂ, ಈ ಕಿರಾತಕ ರೂಪಾಂತರಿ ಡೆಲ್ಟಾ, ಲಸಿಕೆ ಹಾಕಿಸಿಕೊಳ್ಳದ ಜನರ ರೀತಿಯಲ್ಲೇ ಗಂಟಲು, ಮೂಗಿನಲ್ಲಿ ಕೂರಲಿದೆ. ಹೀಗಾಗಿ ಲಸಿಕೆ ಪಡೆದ ಜನರಿಂದಲೂ ಈ ಕಿಲಾಡಿ ವೈರಸ್ ಹರಡೋ ಸಾಧ್ಯತೆ ಇದೆ ಎಂದು ಅಮೆರಿಕಾದ ಸಿಡಿಸಿ ವಿಜ್ಞಾನಿಗಳು ವಾರ್ನ್​ ಮಾಡಿದ್ದಾರೆ. ಜತೆಗೆ ಈವರೆಗಿನ ಬೇರೆಲ್ಲಾ ರೂಪಾಂತರಿ ತಳಿಗಳನ್ನ ಹೋಲಿಸಿದ್ರೆ ಈ ಡೆಲ್ಟಾ ವೇರಿಯಂಟ್ ಮೋಸ್ಟ್ ಡೆಡ್ಲಿ ಅನ್ನೋದು ವಿಜ್ಞಾನಿಗಳ ಆತಂಕ. ಇದಲ್ಲದೇ, ಈ ಕರೊನಾ ವೈರಸ್ ಸಿಡುಬಿನಂತೆ ಸಾಂಕ್ರಾಮಿಕವಾಗಲಿದೆ ಎಂದು ಕೂಡ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಅಮೆರಿಕಾದ ಸಿಡಿಸಿ ರಿಪೋರ್ಟ್​ ಪ್ರಕಾರ, ಕರೊನಾ ಡೆಲ್ಟಾ ವೈರಸ್ ಬಿ.1.617.2 ತಳಿ, ಈ ಹಿಂದೆ ಕಂಡುಬಂದ ಹಲವು ಸಾಮಾನ್ಯ ವೈರಸ್​ಗಳಿಗಿಂತ ಅಧಿಕವೇಗದಲ್ಲಿ ಹರಡ ಲಿದೆ. ಅಂದ್ರೆ, ಮಾರ್ಸ್​, ಸಾರ್ಸ್​, ಇಬೋಲಾ, ಶೀತ, ಫ್ಲ್ಯೂ ಹಾಗೂ ಸಿಡುಬಿನ ರೀತಿ ಸುಲಭವಾಗಿ ಹರಡೋ ಗುಣಸ್ವಭಾವವನ್ನ ಈ ಡೆಲ್ಟಾ ವೇರಿಯಂಟ್ ಹೊಂದಿದೆ ಎಂಬುದು ಸಿಡಿಸಿ ರಿಪೋರ್ಟ್ ಸಾರಾಂಶ. ​ಹೀಗಾಗಿ ಈಗ ಕೋವಿಡ್ ವಿರುದ್ಧ ಸಮರನೀತಿಯನ್ನೇ ಮಾರ್ಪಾಡು ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಅಮೆರಿಕಾ ಸೆಂಟರ್ಸ್​ ಫಾರ್ ಡಿಸೀಸ್ ಕಂಟ್ರೋಲ್ ಸಿಡಿಸಿ ಭೀತಿ ಹೊರಹಾಕಿದೆ.
ಡೆಲ್ಟಾ ವೇರಿಯಂಟ್ ಕರೊನಾವೈರಸ್ ತವರೂರು ಚೀನಾವನ್ನೇ ನಡುಗಿಸಿದೆ. ಅಮೆರಿಕಾದಲ್ಲಿ ಹೆಚ್ಚಾದಂತೆ, ಚೀನಾದಲ್ಲೂ ಯಾವಾಗ ಕರೊನಾ ಡೆಲ್ಟಾ ರೂಪಾಂತರಿ ಕಾಟ ಕೊಡತೊಡಗಿತೋ, ಆತಂಕಕ್ಕೀಡಾದ ಚೀನಾ ಆಡಳಿತವೇ ಇದರ ನಿಯಂತ್ರಣಕ್ಕಾಗಿ ಹೈರಾಣಾಗಿದೆ. ಇದರ ಜತೆಗೆ ಆಸ್ಟ್ರೇಲಿಯಾದಲ್ಲೂ ಡೆಲ್ಟಾ ರೂಪಾಂತರಿ ಕಾಟ ಕೊಡಲಾರಂಭಿಸಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲೂ ನಾಲ್ಕನೇ ಅಲೆಗೆ ಈ ಡೆಲ್ಟಾ ಮೂಲ ಎನಿಸಿದೆ. ಯಾವಾಗ ವಿಶ್ವದ ನಾನಾ ಮೂಲೆಗಳಲ್ಲಿ ಡೆಲ್ಟಾ ತಳಿ ಆಟೋಟ ಅಧಿಕವಾಗತೊಡಗಿತೋ, ಇದೀಗ ಖುದ್ದು ಜನರೇ ಎಚ್ಚರಗೊಳ್ಳದಿದ್ರೆ ಕಷ್ಟ ಅಂತಾ WHO ಕಳವಳ ವ್ಯಕ್ತಪಡಿಸಿದೆ. ಕರೊನಾವೈರಸ್ ಹತೋಟಿಗೆ ಜನರೇ ಸ್ವಯಂ ನಿಯಂತ್ರಣ ಹೇರಿಕೊಳ್ಳೋದು ಒಂದೇ ಮಾರ್ಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಇಡೀ ವಿಶ್ವದಲ್ಲಿ ಕರೊನಾ ಬಗ್ಗೆ ಜನ ಮೈಮರೆತ್ರೆ ಕರೊನಾ ನಿಯಂತ್ರಣ ಅಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಭೀತಿ ವ್ಯಕ್ತಪಡಿಸಿದೆ. ಒಟ್ಟಾರೆ, ಭಾರತೀಯ ರೂಪಾಂತರಿ ಡೆಲ್ಟಾ ಇದೀಗ ಜಗತ್ತಿನ ನಿದ್ದೆಗೆಡಿಸಿದೆ. ಭಾರತದಲ್ಲೂ ಡೆಲ್ಟಾ ಇದೀಗ ಮೂರನೇ ಬಾರಿಗೆ ಮಗ್ಗುಲು ಬದಲಿಸೋ ಭೀತಿ ಹುಟ್ಟುಹಾಕಿದೆ. ಎಚ್ಚೆತ್ತುಕೊಳ್ಳದಿದ್ರೆ ದೇಶ ಹಾಗೂ ರಾಜ್ಯ ಮತ್ತೆ ಲಾಕ್​ಡೌನ್​..ಕರ್ಫ್ಯೂಗಳತ್ತ ಚಿತ್ತ ಹರಿಸಬೇಕಾಗಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 2 =
Remember me
