ಬೆಂಗಳೂರು:ಮಹಾಮಾರಿ ಕರೊನಾ ಸೃಷ್ಟಿಸಿರುವ ಆರೋಗ್ಯ ಬಿಕ್ಕಟ್ಟು ಮಾನವೀಯತೆಯ ಪ್ರಾಮುಖ್ಯತೆಯನ್ನು ಸಾರುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕರೊನಾದಿಂದ ಮೃತಪಟ್ಟವರ ಆಸ್ತಿಯ ಬಗ್ಗೆ ಚಿಂತಿಸುತ್ತಾರೆಂದರೆ ಅಂಥವರ ಬಗ್ಗೆ ಏನು ಹೇಳ ಬೇಕು ನೀವೆ ಯೋಚಿಸಿ.
ಹೌದು. ಕರೊನಾದಿಂದ ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿ ಟೆಕ್ಕಿ ಪತಿ ಇದ್ದರೆ, ಪತ್ನಿಯ ಸಂಬಂಧಿಕರು ಆಕೆಯ ಆಸ್ತಿ ಕಬಳಿಸುವ ಸಂಚು ರೂಪಿಸುತ್ತಿರುವ ಅಮಾನವೀಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಟೆಕ್ಕಿ ಮೃತ ಪತ್ನಿಯ ಆಸ್ತಿ ಹೊಡೆಯಲು ಆಕೆ ಸಂಬಂಧಿಕರು ಪ್ಲಾನ್ ರೂಪಿಸಿದ್ದು, ಅವರ ಮೃಗೀಯ ವರ್ತನೆಯನ್ನು ಟೆಕ್ಕಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಟೆಕ್ಕಿ ಪ್ರವೀಣ್ ಹಾಗೂ ಪತ್ನಿ ನಿಮಿತಾ ವೃತ್ತಿಯಲ್ಲಿ ಇಬ್ಬರೂ ಸಾಫ್ಟ್​ವೇರ್ ಇಂಜಿನಿಯರ್ಸ್. ಏಪ್ರಿಲ್ 20ರಂದು ಉಸಿರಾಟದ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾದ ನಿಮಿತಾ, ಚಿಕಿತ್ಸೆ ಫಲಕಾರಿಯಾಗದೇ ಮೇ 2ರಂದು ಮೃತಪಟ್ಟರು.
ಮೇ 13ಕ್ಕೆ ತಿಥಿ ಕಾರ್ಯ ಮಾಡಲು ಪತಿ ಪ್ರವೀಣ್​ ಹಾಗೂ ಕುಟುಂಬಸ್ಥರು ಮುಂದಾಗಿದ್ದರು. ಈ ವೇಳೆ ಆಕೆ ಮೃತಪಟ್ಟ ಘಳಿಗೆ ಸರಿಯಿಲ್ಲ…ರಾಹುಕಾಲ ಇದೆ… ಮೂರು ತಿಂಗಳು ಮನೆಗೆ ಬರಬೇಡ ಎಂದು ಹೇಳಿ ಪತಿ ಪ್ರವೀಣ್​ನನ್ನು ಮೃತಳ ಕುಟುಂಬಸ್ಥರು ಬೇರೆಡೆ ಕಳುಹಿಸಿದ್ದಾರೆ.
ಇದಾದ ಒಂದು ತಿಂಗಳ ಬಳಿಕ ಪ್ರವೀನ್​ ಮನೆಗೆ ಮರಳಿದ್ದಾರೆ. ಅಷ್ಟರಲ್ಲಾಗಲೇ ಮನೆಯಿಲ್ಲಿದ್ದ 5 ರಿಂದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 3 ಲಕ್ಷ ರೂ. ನಗದು ಹಾಗೂ ಕಾರನ್ನು ಸಂಬಂಧಿಕರು ದೋಚಿದ್ದಾರೆ. ಮೃತಳ ಬಾವ ಶಿವಪ್ಪ, ಆಕೆಯ ಸಹೋದರಿಯರಾದ ಪ್ರೀತಿ, ಮಮತಾ, ಪಪ್ಪಚ್ಚಿ ಸೇರಿ ಹಲವರಿಂದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪ್ರವೀಣ್​ ಆರೋಪಿಸಿದ್ದಾರೆ.
ಈ ಬಗ್ಗೆ ಆರ್​ಆರ್ ನಗರ ಠಾಣೆಗೆ ದೂರು ನೀಡಿದರೂ ಪೊಲೀಸರು ಎಫ್​ಐಆರ್ ದಾಖಲಿಸಿಲ್ಲ. ಎಫ್ಐಆರ್‌ ಬದಲು ಎಸ್​ಸಿಆರ್‌ ದಾಖಲಿಸಿ ಸೆಟಲ್​ಮೆಂಟ್​ಗೆ ಪೊಲೀಸರು ಮುಂದಾದ ಆರೋಪ ಕೇಳಿಬಂದಿದೆ. ಪೊಲೀಸರು ದಾಖಲಾತಿಗಳನ್ನು ಪರಿಶೀಲಿಸದೇ ಆರೋಪಿಗಳ ಪರ ವಕಾಲತ್ತು ವಹಿಸುತ್ತಿರುವ ಆರೋಪವೂ ಇದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಮೃತಳ ಪತಿ ಪ್ರವೀಣ್ ಆಗ್ರಹಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಸೆಕ್ಸ್​ ಬಗ್ಗೆ ಮಾತಾಡೋ ಹುಡ್ಗಿರ್ಗೆ 5 ಲಕ್ಷ! 3 ವರ್ಷದಲ್ಲಿ 75 ಕೋಟಿ ಗಳಿಸಿ ತಗ್ಲಾಕೊಂಡ ಯೂಟ್ಯೂಬರ್​ ದಂಪತಿ

ನಿಮ್ಮ ಫೋನ್ ಕಳವಾಗಿದೆಯೇ/ ಕಳೆದು ಹೋಗಿದೆಯೇ? ಗೂಗಲ್​ನ ಈ ಫೀಚರ್​ನಿಂದ ಮರಳಿ ಪಡೆಯಬಹುದು!

ಬಾಯ್​ಫ್ರೆಂಡ್​ಗಾಗಿ ಬರೋಬ್ಬರಿ 175 ಕೋಟಿ ರೂ. ಖರ್ಚು ಮಾಡಿದ ಶ್ರೀಲಂಕಾ ಬ್ಯೂಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
