ದಾವಣಗೆರೆ:ಮದುವೆಗೆ ಬಟ್ಟೆ ಖರೀದಿಸಲು ಹೋಗಿದ್ದ ಸಹೋದರರಿಬ್ಬರಲ್ಲಿ ತಮ್ಮ ಶವವಾಗಿ ಪತ್ತೆಯಾಗಿದ್ದು, ಅಣ್ಣ ನಾಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹರಿಹರದ ವಿಜಯನಗರ ನಿವಾಸಿ ಅಲ್ತಾಫ್ (21) ಶವವಾಗಿ ಪತ್ತೆಯಾದ ಯುವಕ. ಈತನ ಸಹೋದರ ಇಬ್ರಾಹಿಂ (23) ನಾಪತ್ತೆಯಾಗಿದ್ದಾನೆ. ಅಲ್ತಾಫ್​ ಶವ ಕುತ್ತಿಗೆ ಕೊಯ್ದು ಸ್ಥಿತಿಯಲ್ಲಿ ದಾವಣಗೆರೆಯ ಮಹಾಲಕ್ಷ್ಮೀ ಲೇಔಟ್ ಬಳಿ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಅಲ್ತಾಫ್ ಹಾಗೂ ಇಬ್ರಾಹಿಂ ಸೋದರಸಂಬಂಧಿಗಳು. ಇಬ್ರಾಹಿಂಗೆ ಮದುವೆ ಫಿಕ್ಸ್ ಅಗಿತ್ತು. ಹೀಗಾಗಿ ಮದುವೆ ಜವಳಿ ಖರೀದಿಸಲು ಮಂಗಳವಾರ ದಾವಣಗೆರೆಗೆ ಹೋಗಿದ್ದರು. ರಾತ್ರಿ 8:30ಕ್ಕೆ ಸಹೋದರರು ಮನೆಗೆ ಫೋನ್ ಮಾಡಿದ್ರು. ಇದಾದ ನಂತರ ಇಬ್ಬರ ಮೊಬೈಲ್ ಸ್ಚಿಚ್‌ ಆಫ್ ಆಗಿತ್ತು.
ಸಹೋದರರಿಬ್ಬರೂ ರಾತ್ರಿ‌ ಮನೆಗೆ ವಾಪಸ್ಸು ಬಂದಿರಲಿಲ್ಲ. ಬುಧವಾರ ಬೆಳಗ್ಗೆ ಇಬ್ಬರ ಪಾಲಕರು ಹರಿಹರ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಬುಧವಾರ ಸಂಜೆ ದಾವಣಗೆರೆಯ ಮಹಾಲಕ್ಷ್ಮೀ ಲೇಔಟ್ ಬಳಿ ಅಲ್ತಾಫ್ ಶವ ಪತ್ತೆಯಾಗಿದೆ. ಶವದ ಕುತ್ತಿಗೆ ಮೇಲೆ ಹರಿತ ಚಾಕುವಿನಿಂದ ಕತ್ತರಿಸಿದ ಗುರುತಿದ್ದು, ಕೊಲೆ ನಡೆದಿದೆಯೋ ಅಥವಾ ಕೊಲೆ ಮಾಡಿ ತಂದು ಹಾಕಿದ್ದಾರೋ ಎಂಬ ಮಾಹಿತಿ ಇಲ್ಲ.
ನಾಪತ್ತೆಯಾಗಿರುವ ಇಬ್ರಾಹಿಂ ಸುಳಿವು ಇನ್ನೂ ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಬೆರಳಚ್ಚು ‌ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ತಂದೆಯ ಚೀರಾಟ ಕೇಳಿ ಪುತ್ರ ಬಳಿಗೆ ಹೋದ; ಕೆಲವೇ ಕ್ಷಣಗಳಲ್ಲಿ ಸಾವಿಗೀಡಾದ್ರು ಅಪ್ಪ-ಮಗ..

ಹೆಣ್ಣೂರಲ್ಲೇ ಹೆಣ್ಣಿಗೆ ಅನ್ಯಾಯ!; ದೂರು ನೀಡಲು ಹೋದರೆ ಲಂಚ ಕೇಳಿದ, ಮಂಚಕ್ಕೂ ಕರೆದ ಪೊಲೀಸ್ ಇನ್​ಸ್ಪೆಕ್ಟರ್​…

ಇಯರ್​ ಫೋನ್​ ಹಾಕಿಕೊಂಡೆ ರೈಲ್ವೆ ಹಳಿ ದಾಟಲು ಹೋದ ಮೌಲ್ವಿ; ನಂತರ ಆಗಿದ್ದು ದುರಂತ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − 1 =
Remember me
