ದಾವಣಗೆರೆ:ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದ ಐದು ಮಕ್ಕಳಲ್ಲಿ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಆಮಿಷವೊಡ್ಡಿ ಮದುವೆಯಾಗಿರುವ ಘಟನೆ ಬೆಳಕಿ ದಾವಣಗೆರೆ ನಗರದ ಹೊಸ ಕುಂದವಾಡದಲ್ಲಿ ಬೆಳಕಿಗೆ ಬಂದಿದೆ.
ಅನಾಥ ಮಕ್ಕಳು‌ ಹೊಸಕುಂದವಾಡ ನಿವಾಸಿಗಳು. 2 ವರ್ಷಗಳ ಹಿಂದೆ ತಂದೆ ಮೃತಪಟ್ಟಿದ್ದರು. ಮಹಾಮಾರಿ ಕರೊನಾ ಸೋಂಕಿನಿಂದ ಐದು ತಿಂಗಳ ಹಿಂದೆ ತಾಯಿ ನಿಧನರಾಗಿದ್ದರು. ತಂದೆ-ತಾಯಿಯನ್ನು ಕಳೆದುಕೊಂಡು 4 ಹೆಣ್ಣು, 1 ಗಂಡು ಮಗು ಅನಾಥವಾಗಿದ್ದಾರೆ.
ಮನೆ ಸಮೀಪದಲ್ಲಿದ್ದ ವ್ಯಕ್ತಿಯೋರ್ವ 15 ವರ್ಷದ ದೊಡ್ಡ ಮಗಳನ್ನು ಮೂರು ತಿಂಗಳ ಹಿಂದೆಯೇ ಮದುವೆಯಾಗಿದ್ದಾನೆ. ಅದೇ ಏರಿಯಾದ ಇನ್ನೊಬ್ಬ ವ್ಯಕ್ತಿ 3 ದಿನಗಳ ಹಿಂದೆ 13 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಾನೆ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕೈಗೆ 13 ವರ್ಷದ ಬಾಲಕಿಯನ್ನು ಮದುವೆಯಾದ ವ್ಯಕ್ತಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾನೆ.
ಇನ್ನು ವಿಚಾರಣೆ ನಡೆಸುತ್ತಿದ್ದ ವೇಳೆಯೇ ಆರೋಪಿ ಅಧಿಕಾರಿಗಳಿಂದ ತಪ್ಪಿಸಿಕೊಂಡಿದ್ದಾರೆ. ಸದ್ಯ ಐದೂ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್.‌ ವಿಜಯಕುಮಾರ್ ವಶಕ್ಕೆ ಪಡೆದಿದ್ದು, ಮಕ್ಕಳನ್ನು ಜಿಲ್ಲಾ ಬಾಲಕಿಯರ ಮಂದಿರದ ಸುಪರ್ದಿಗೆ ಒಪ್ಪಿಸಿದ್ದಾರೆ.
ಮದುವೆಯಾದ ಇಬ್ಬರು ವ್ಯಕ್ತಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದಾವಣಗೆರೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಲಕ್ಷದ್ವೀಪ ನಟಿ ಆಯಿಷಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ ಬಿಜೆಪಿಗೆ ಆಘಾತ!

ಕಾಲುವೆ​ಗೆ ಗುದ್ದಿದ ಹೊಡೆತಕ್ಕೆ ಎರಡು ಪೀಸ್​ ಆದ ಕಾರು! ಹಿಂದೆ ಕುಳಿತಿದ್ದ ಮೂವರೂ ಬಲಿ

ಮದ್ವೆಯಾದ ಎರಡೇ ದಿನದಲ್ಲಿ ಗಂಡನಿಗೆ ಶಾಕ್​ ಕೊಟ್ಟ ಪತ್ನಿ: ಮಲಗಿದ್ದಾಗ ಹಗ್ಗದಿಂದ ಕಟ್ಟಿಹಾಕಿ ಪರಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
