ದಾವಣಗೆರೆ:ದಾವಣಗೆರೆಯಲ್ಲಿ ನಾಪತ್ತೆಯಾಗಿ ರೈಲಿನ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದ ಮೂವರು ಬಾಲಕಿಯರನ್ನು ಹುಬ್ಬಳ್ಳಿ ರೈಲ್ವೆ ಠಾಣೆಯ ಪೊಲೀಸರು ಹಾಗೂ 112 ಸಿಬ್ಬಂದಿ ರಕ್ಷಿಸಿದ್ದಾರೆ.
ದಾವಣಗೆರೆಯ ಖಾಸಗಿ ಶಾಲೆಯೊಂದರಲ್ಲಿ ಎಸ್​ಎಸ್​ಎಲ್​ಸಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರು ಮಂಗಳವಾರ ಪಾಲಕರು ಹಾಗೂ ಶಿಕ್ಷಕರಿಗೆ ಹೇಳದೆ ನಾಪತ್ತೆಯಾಗಿದ್ದರು.
ಈ ಕುರಿತು ಅವರ ಪಾಲಕರು ದಾವಣಗೆರೆ ಮಹಿಳಾ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಬಾಲಕಿಯರು ಸಂಜೆ ದಾವಣೆಗೆರೆಯಿಂದ ಹುಬ್ಬಳ್ಳಿ ರೈಲು ಹತ್ತಿರುವ ಸುಳಿವು ಪೊಲೀಸರಿಗೆ ಸಿಕ್ಕಿತ್ತು.
ಕೂಡಲೇ ಹುಬ್ಬಳ್ಳಿ ಪೊಲೀಸರಿಗೆ ಫೋಟೋ ಸಹಿತ ಮಾಹಿತಿ ನೀಡಿದ್ದರು. ಹುಬ್ಬಳ್ಳಿ ರೈಲ್ವೆ ಠಾಣೆ ಪಿಎಸ್​ಐ ಸತ್ಯಪ್ಪ ಮುಕ್ಕಣ್ಣವರ, ಶಹರ ಠಾಣೆಯ 112 (ಹೊಯ್ಸಳ) ಸಹಾಯವಾಣಿಯ ಸುಧೀಂದ್ರ ಗಡ ಹಾಗೂ ಸಿಬ್ಬಂದಿ, ರೈಲು ಬರುತ್ತಿದ್ದಂತೆ ಬಾಲಕಿಯರನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಬುಧವಾರ ದಾವಣೆಗೆರೆ ಪೊಲೀಸರಿಗೆ ಒಪ್ಪಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಸಂಚಾರ ಪೊಲೀಸ್ ವ್ಯವಸ್ಥೆಯಲ್ಲಿ ಸಂಚಲನ; ಟೋಯಿಂಗ್​ಗೆ ಸದ್ಯದಲ್ಲೇ​ ಹೊಸ ನಿಯಮ: ಏನೇನಿರುತ್ತೆ ಷರತ್ತು?

ಟೋಯಿಂಗ್​ಗೆ ಬಂದಿದ್ದವರನ್ನು ತರಾಟೆಗೆ ತಗೊಂಡ ಜನರು; ಟೋ ಮಾಡದೆ ವಾಪಸ್ ಹೋದ ಪೊಲೀಸರು

ಪಿಸ್ತೂಲ್ ತೋರಿಸಿ ಬೆದರಿಸಿದ ಬಿಜೆಪಿ ಮುಖಂಡ; ಎಗ್​ರೈಸ್​ ಅಂಗಡಿ ವಿಚಾರಕ್ಕೆ ಜಗಳ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × three =
Remember me
